ಭಟ್ಕಳ: ಆಟೋವನ್ನು ಅಡ್ಡಗಟ್ಟಿ ಚಾಲಕನ (auto driver) ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಬೆದರಿಕೆ ಒಡ್ಡಿದ ಘಟನೆ (assault) ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಜಾಲಿಯ ತಲಗೇರಿ ನಿವಾಸಿ ಶ್ರೀನಿವಾಸ ಮಂಜಪ್ಪ ನಾಯ್ಕ (೨೬) ಹಲ್ಲೆಗೊಳಗಾದವರು. ಅವರು ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಡಳ್ಳಿಯ ರವಿ ಮಂಜುನಾಥ ಮೋಗೇರ, ಚೌತನಿ ನಿವಾಸಿಗಳಾದ ಭರತ ರಾಮಾ ನಾಯ್ಕ, ಹನುಮಂತ ರಾಮಾ ನಾಯ್ಕ, ತೇಜು ನಾಯ್ಕ, ಯೋಗೇಶ ನಾಯ್ಕ ಮತ್ತು ದೀಪಕ ನಾಯ್ಕ ಆರೋಪಿತರು.
ಇದನ್ನು ಓದಿ: Vaikunta Ekadashi/ ನಾಮಧಾರಿ ಗುರುಮಠದಲ್ಲಿ ಭಕ್ತಿಸಾಗರ
ದಿನಾಂಕ ೨೮-೧೨-೨೦೨೫ ರಂದು ಮಧ್ಯರಾತ್ರಿ ೧೨-೫೦ ಗಂಟೆ ಸುಮಾರಿಗೆ ಭಟ್ಕಳ ತಾಲೂಕಿ ವೆಂಕ್ಟಾಪುರ ಶಾಲೆಯ ಹತ್ತಿರ ತನ್ನ ಅಟೋದಲ್ಲಿ ಮುರ್ಡೇಶ್ವರದ ಕಡೆಯಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಪಿರ್ಯಾದಿಗೆ ಆಪಾದಿತರು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು ಆಗ ಪಿರ್ಯಾದಿ ಅಟೋವನ್ನು ಬದಿಯಲ್ಲಿ ನಿಲ್ಲಿಸಿ ಪ್ರಶ್ನಿಸಿದಕ್ಕೆ ಆರೋಪಿತರು ಕೂಡಿ ಪಿರ್ಯಾದಿಗೆ ಹಲ್ಲೆ ಮಾಡಿದ್ದಾರೆ. ಕೈಯಿಂದ ಮೇಮೇಲೆ, ಮುಖದ ಮೇಲೆ, ಎದೆಯ ಬಲ ಬದಿಗೆ, ಕಣ್ಣಿನ ಹತ್ತಿರ ಕೈಯಿಂದ ಹೊಡೆದು ಕೆಳಗೆ ನೆಲದ ಮೇಲೆ ಕೆಡವಿ ಕಾಲಿನಿಂದ ತುಳಿದು ಹಲ್ಲೆ ಮಾಡಿ ಮೈಮೇಲೆ ಇದ್ದ ಬಟ್ಟೆಗಳನ್ನು ಹರಿದು ಹಾಕಿ, ಎಡ ಕಿವಿಯಲ್ಲಿದ್ದ ಚಿನ್ನದ ಓಲೆ ಹಾಗೂ ಕೊರಳಲ್ಲಿದ್ದ ಬೆಳ್ಳಿಯ ಸರವನ್ನು ಹರಿದಿದ್ದಲ್ಲದೇ, ಸಿಕ್ಕಲ್ಲಿ ಹೊಡೆದು ಕೊಂದು ಹಾಕುವ ಬೆದರಿಕೆ ಹಾಕಿ ಹೋದ ಬಗ್ಗೆ (assault) ದೂರಿನಲ್ಲಿ ನಮೂದಿರುತ್ತದೆ.
ಇದನ್ನು ಓದಿ: bikers injured/ ಕಾಡು ಹಂದಿ ಅಡ್ಡ ಬಂದು ಬೈಕ್ ಸವಾರರಿಬ್ಬರಿಗೆ ಗಾಯ



