ಭಟ್ಕಳ: ನಗರದಿಂದ ವೆಂಕಟಾಪುರ ನದಿವರೆಗೆ ನಿರ್ಮಿಸಲಾದ ಡ್ರೆನೇಜ್ ಪೈಪ್‌ಲೈನ್‌ನ ಚೇಂಬರ್ ಬ್ಲಾಕ್ ಆಗಿರುವ ಪರಿಣಾಮ ಮಲಮೂತ್ರ ಮಿಶ್ರಿತ ಚರಂಡಿ ನೀರು (Sewage water) ನುಗ್ಗಿ ಅಪಾರ ಹಾನಿ ಉಂಟಾಗಿದೆ. ವೆಂಕಟಾಪುರ ದೋಣ್ದಾರನಲ್ಲಿರುವ ದೇವಿ ಬಡಿಯಾ ಗೊಂಡರ ಮನೆಯಲ್ಲಿ ವಾಸಿಸುತ್ತಿರುವ ವೃದ್ಧ ದಂಪತಿಯ ಮನೆಯಲ್ಲಿ ಈ ಅವಾಂತರ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ವೃದ್ಧ ದಂಪತಿಯ ಸಂಕಷ್ಟವನ್ನು ಆಲಿಸಿದರು. ಸಂಬಂಧಪಟ್ಟ ಚೀಫ್ ಇಂಜಿನಿಯರ್ ಅವರೊಂದಿಗೆ ಘಟನೆಯ ಕುರಿತು ಚರ್ಚಿಸಿದರು. ನಂತರ ವಿಲೇಜ್ ಅಕೌಂಟೆಂಟ್ ಅವರನ್ನು ಸ್ಥಳಕ್ಕೆ ಕರೆಸಿ ಘಟನೆಯ ಬಗ್ಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗು ತುರ್ತು ಪರ್ಯಾಯ ವ್ಯವಸ್ಥೆಯನ್ನು ಕೂಡ ಮಾಡಲು ವಿನಂತಿಸಿದರು.
ಈ ಘಟನೆ ಕೇವಲ ಒಂದು ಮನೆಯ ಸಮಸ್ಯೆಯಲ್ಲ, ಸಾರ್ವಜನಿಕ ಆರೋಗ್ಯದ ಗಂಭೀರ ಪ್ರಶ್ನೆಯಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ವ್ಯಾಪಿಸಿದ್ದು, ಅಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ವೃದ್ಧ ದಂಪತಿಗೆ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವುದು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಮಾಸ್ತಪ್ಪ ನಾಯ್ಕ ಆಗ್ರಹಿಸಿದ್ದಾರೆ.
Kantara Girl/ ಭಟ್ಕಳದ ಶಾಲಾ ಮಕ್ಕಳಿಗೆ ನೆರವಾದ ‘ಕಾಂತಾರ ಹುಡುಗಿ’
ಇಂದಿನ ಆಧುನಿಕ ಯುಗದಲ್ಲಿ ಚರಂಡಿ ವ್ಯವಸ್ಥೆಯ ವೈಫಲ್ಯದಿಂದ ಮನೆಗಳ ಒಳಗೆ ಮಲಮೂತ್ರ (Sewage water) ಸೇರುವಂತಹ ಘಟನೆಗಳು ನಡೆಯುತ್ತಿರುವುದು ಅತ್ಯಂತ ವಿಷಾದನೀಯ. ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
Chippikallu Tragedy/ ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಧನಸಹಾಯ



