ಭಟ್ಕಳ ಡೈರಿ ವರದಿ

ಭಟ್ಕಳ: ಶಿಸ್ತಿನ ಹೆಜ್ಜೆಗಳು, ಕೇಸರಿ ಧ್ವಜಗಳ ಅಲಂಕಾರ ಮತ್ತು ಸಾರ್ವಜನಿಕರ ಪುಷ್ಪಾರ್ಚನೆಯ ನಡುವೆ ಭಟ್ಕಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಭವ್ಯ ಪಥಸಂಚಲನ ರವಿವಾರ ಅದ್ದೂರಿಯಾಗಿ ನಡೆಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಗಣವೇಷಧಾರಿ ಸ್ವಯಂಸೇವಕರು ಶಿಸ್ತಿನಿಂದ ಹೆಜ್ಜೆ ಹಾಕಿ ಪಥಸಂಚಲನದಲ್ಲಿ ಭಾಗವಹಿಸಿದರು. ಪಥಸಂಚಲನದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರ್ಗಗಳು ಕೇಸರಿ ಧ್ವಜಗಳಿಂದ ಅಲಂಕರಿಸಲ್ಪಟ್ಟು ಹಬ್ಬದ ವಾತಾವರಣ ಕಂಡುಬಂದಿತು.

ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಪಥಸಂಚಲನಕ್ಕೆ ಚಾಲನೆ ದೊರೆಯಿತು. ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿದ ಭಾರತ ಮಾತೆಯ ಚಿತ್ರ ಹಾಗೂ ಘೋಷ್ ತಂಡ ವಿಶೇಷ ಗಮನ ಸೆಳೆಯಿತು.

ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಸಾರ್ವಜನಿಕರು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಯಂಸೇವಕರನ್ನು ಸ್ವಾಗತಿಸಿದರು. ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬಳಿಕ ಪಥಸಂಚಲನವು ಗುರುಸುಧೀಂದ್ರ ಕಾಲೇಜು ಆವರಣದಲ್ಲಿ ಸಮಾರೋಪಗೊಂಡಿತು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಗುಳ್ಮಿ ಕ್ರಾಸ್ನಲ್ಲಿ ಅಪಘಾತ: ಸ್ಥಳಕ್ಕೆ ಡಿವೈಎಸ್‌ಪಿ ಭೇಟಿ, ಸುರಕ್ಷತಾ ಕ್ರಮಕ್ಕೆ ಆಗ್ರಹ

ಶಿರಾಲಿ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ನೋವಿಗೆ ಉತ್ತರ ತನಿಖೆ, ಹಲ್ಲೆಯಲ್ಲ