ಭಟ್ಕಳ: ತಾಲೂಕಿನ ಪ್ರಸಿದ್ಧ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು (Bhatkal rural police) ಯಶಸ್ವಿಯಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತ ಆರೋಪಿಗಳನ್ನು ಶಿರಾಲಿಯ ಅಮೀರ್ ಹಸನ್ ಬ್ಯಾರಿ (೨೭) ಮತ್ತು ಮುಗ್ದಂ ಕಾಲೋನಿ ನಿವಾಸಿ ಮಹ್ಮದ ಇಮ್ರಾನ್ ಅಬ್ದುಲ್ (೨೪) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ದೇವಸ್ಥಾನಕ್ಕೆ ಬಂದ ಆರೋಪಿಗಳು ಸಿಸಿಟಿವಿ ಕ್ಯಾಮರಾಗಳಿಗೆ ಬಟ್ಟೆ ಹಾಗೂ ನೀರಿನ ಲೋಟ ಮುಚ್ಚಿ ಕುತಂತ್ರದ ಮೂಲಕ ದುಷ್ಕೃತ್ಯ ಎಸಗಿ, ಹುಂಡಿಯನ್ನು ಅಲ್ಲೇ ಬಿಟ್ಟು ಹುಂಡಿಯಲ್ಲಿದ್ದ ಕಾಣಿಕೆಯನ್ನು ಕದ್ದು ಪರಾರಿಯಾಗಿದ್ದರು.

ಇದನ್ನು ಓದಿ: Temple theft/ ಎರಡು ದೇವಳದಲ್ಲಿ ಕಳ್ಳತನ 

ಈ ಬಗ್ಗೆ ಗ್ರಾಮೀಣ ಠಾಣೆಗೆ ದೇವಸ್ಥಾನದ ಅಧ್ಯಕ್ಷ ಎಫ್ ಕೆ ಮೊಗೇರ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು (Bhatkal rural police) ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ದೇವಸ್ಥಾನ ಬಳಿ ಚಪ್ಪಲಿ ಗುರುತು ಪತ್ತೆಯಾಗಿದ್ದು. ಬಳಿಕ ಕೆಲವೊಂದು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಅವರ ಬೆರಳಚ್ಚು ಸಂಗ್ರಹಿಸಿಕೊಂಡು ಬಿಡುಗಡೆಗೊಳಿಸಿದ್ದರು. ಬಳಿಕ ಅದರಲ್ಲಿ ಓರ್ವನ ಬೆರಳಚ್ಚು ಹೊಂದಾಣಿಕೆ ಆಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು (Bhatkal rural police) ಆತನ ಮನೆಗೆ ತೆರಳಿದ ವೇಳೆ ದೇವಸ್ಥಾನ ಬಳಿ ಸಿಕ್ಕ ಚಪ್ಪಲಿ ಅಚ್ಚಿಗೂ ಆರೋಪಿ ಬಳಸುತ್ತಿದ್ದ ಚಪ್ಪಲಿಗೆ ಹೊಂದಾಣಿಕೆ ಆಗಿತ್ತು. ಅಷ್ಟರೊಳಗಾಗಲೇ ಆರೋಪಿಗಳು ನಾಪತ್ತೆಯಾಗಿದ್ದರು.

ಇದನ್ನು ಓದಿ: Case filed/ ಭಟ್ಕಳ ಮೂಳೆ ಪ್ರಕರಣಕ್ಕೆ ತಿರುವು: ಪುರಸಭೆ ಮುಖ್ಯಾಧಿಕಾರಿಯಿಂದ ದೂರು

ನಂತರ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಲಿಂಗಾರೆಡ್ಡಿಯ ಚುರುಕು ಕಾರ್ಯಚರಣೆಯಿಂದಾಗಿ ಇಬ್ಬರು ಆರೋಪಿಗಳನ್ನು 24 ಗಂಟೆಯ ಒಳಗಾಗಿ ಪತ್ತೆ ಹಚ್ಚ ಲಾಗಿದೆ. ಆರೋಪಿಗಳು ಕಳ್ಳತನಗೈದ ಕಾಣಿಕೆ ಹುಂಡಿಯಲ್ಲಿದ್ದ ನಗದು ಮತ್ತು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಸೇರಿ ಒಟ್ಟು1 ಲಕ್ಷದ 80 ಸಾವಿರ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ಇವರ ವಿರುದ್ಧ ಶಿರಸಿಯ ಬನವಾಸಿಯಲ್ಲಿಯೂ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.

ಇದನ್ನು ಓದಿ: folklorist/ ನಮ್ಮನ್ನಗಲಿದ ಜಾನಪದ ತಜ್ಞ ಡಾ ಎನ್ ಆರ್ ನಾಯಕ

ಕಾರ್ಯಚರಣೆಯಲ್ಲಿ ಪಿಎಸೈ ರನ್ನ ಗೌಡ, ಪಿಎಸೈ ಭರಮಪ್ಪ ಬೆಳಗಲಿ, ಸಿಬ್ಬಂದಿ ಮಂಜುನಾಥ ಜಿ, ಮೋಹನ ಕೆ, ಈರಣ್ಣ ಪೂಜಾರಿ, ಅಶೋಕ ನಾಯ್ಕ, ನಿಂಗನಗೌಡ ಪಾಟೀಲ, ದೇವರಾಜ ಮೊಗೇರ ಪಾಲ್ಗೊಂಡಿದ್ದರು.

ಇದನ್ನು ಓದಿ: Doctor died/ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ವೈದ್ಯ ಸಾವು