Bhatkal Update/ ಭಟ್ಕಳ : ಮಂಗಳವಾರದಂದು ರಾತೋರಾತ್ರಿ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು (Hindu activists) ಪ್ರತಿಭಟನೆ ನಡೆಸಿದ ಹಿನ್ನೆಲೆ ಬುಧವಾರ ಭಟ್ಕಳಕ್ಕೆ ಎಸ್‌ಪಿ ಎಂ.ನಾರಾಯಣ (Uttara Kannada SP) ಭೇಟಿಕೊಟ್ಟರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆಟೋ ಚಾಲಕ, ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಮೇಲೆ ಎಸ್.ಪಿ. ಎಂ.ನಾರಾಯಣ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ದಿಢೀರ್‌ ಪ್ರತಿಭಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದಂದು ಭಟ್ಕಳ ನಗರ ಠಾಣೆಗೆ ಬಂದ ಎಸ್.ಪಿ. ನಾರಾಯಣ, ಹಿಂದು ಮುಖಂಡರೊಂದಿಗೆ ಸಭೆ ನಡೆಸಿದರು. ನಾನು ಯಾವುದೇ ಹಲ್ಲೆ ಮಾಡಿಲ್ಲ, ನಮ್ಮ ಮೇಲಾಧಿಕಾರಿಗಳ ಸೂಚನೆಯಂತೆ ರೌಡಿಶೀಟರಗಳನ್ನು ಕರೆಯಿಸಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ : Uttara Kannada SP / ʼಠಾಣೆ ಮುತ್ತಿಗೆ, ಹೆದ್ದಾರಿ ಬಂದ್‌ ಮಾಡಿದವರ ಮೇಲೆ ಕ್ರಮʼ

ಮಂಗಳವಾರದಂದು ಭಟ್ಕಳದ ಎಲ್ಲಾ ಹಿಂದು ಸಂಘಟನೆ ಹಾಗೂ ಬಿಜೆಪಿ ಪಕ್ಷದ ಮುಖಂಡರು ಎಸ್.ಪಿ. ನಡೆ ಖಂಡಿಸಿ ತಾಲೂಕು ಪಂಚಾಯತ್ ಕಚೇರಿ ಎದುರು ಹೆದ್ದಾರಿ ಬಂದ್ ಮಾಡಿ, ಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಬಳಿಕ ನಗರ ಪೊಲೀಸ್‌ ಠಾಣೆಯ ಎದುರು ಧರಣಿ ನಿರತರಾಗಿದ್ದರು. ನಂತರ ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಆಗಮಿಸಿ ಕ್ಷಮೆ ಕೋರುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದ್ದರು. ಭಟ್ಕಳದ ಡಿವೈಎಸ್ಪಿ ಮಹೇಶ್ ಸ್ಥಳದಲ್ಲಿ ಮೊಕ್ಕಾಂ ಇದ್ದು, ಪರಿಸ್ಥಿತಿ ಹತೋಟಿ ತರಲು ಹರಸಾಹಸ ಪಟ್ಟಿದ್ದರು. ನಂತರ ಪ್ರತಿಭಟನಾಕಾರರು ಬುಧವಾರದಂದು ೧೧ ಗಂಟೆ ಒಳಗಾಗಿ ಎಸ್ಪಿ ಎಂ. ನಾರಾಯಣ ಭಟ್ಕಳಕ್ಕೆ ಬರಬೇಕು.  ಭಟ್ಕಳಕ್ಕೆ ಎಸ್ಪಿ ಬರದಿದ್ದರೆ ಭಟ್ಕಳ ಶಹರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಯಲಿದೆ ಎಂದು ಹಿಂದು ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದ್ದರು.

ಇದನ್ನೂ ಓದಿ : overnight protest/ ಭಟ್ಕಳದಲ್ಲಿ ರಾತೋರಾತ್ರಿ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ

ಈ ಹಿನ್ನೆಲೆ ಬುಧವಾರದಂದು ನಗರ ಪೋಲಿಸ್ ಠಾಣೆಯ ಎದುರು ಜಮಾವಣೆಗೊಂಡ ಬಿಜೆಪಿ, ವಿಶ್ವ ಹಿಂದೂ ಪರಿಷತ್ (VHP) ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಟ್ಕಳ ಶಹರ ಠಾಣೆಯತ್ತ ಧಾವಿಸಿ ಎಸ್.ಪಿ. ವಿರುದ್ದ ಘೋಷಣೆ ಕೂಗಿದರು. ನಂತರ ಕೆಲ ಸಮಯದ ಬಳಿಕ ಸ್ಥಳಕ್ಕೆ ಬಂದ ಎಸ್.ಪಿ. ಎಂ. ನಾರಾಯಣ ಅವರು ನಗರ ಠಾಣೆಗೆ ಧಾವಿಸಿದರು. ಅವರನ್ನು ನೋಡಿದ ಕ್ಷಣ ಪ್ರತಿಭಟನಾಕಾರರು ಮುಗಿಬಿದ್ದು ಅವರ ನಡೆಯ ವಿರುದ್ದ ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಪೋಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ ಕೆಲ ಹಿಂದು ಮುಖಂಡರನ್ನು ಡಿವೈಎಸ್ಪಿ ಕಚೇರಿಯಲ್ಲಿ ಮಾತುಕತೆಗೆಂದು ಕರೆಯಿಸಿಕೊಂಡರು.

ಇದನ್ನೂ ಓದಿ : Yasin Bhatkal/ ಯಾಸಿನ್‌ ಭಟ್ಕಳ ಸಹಿತ ಐವರಿಗೆ ಮರಣದಂಡನೆ

ಗಂಟೆಗಟ್ಟಲೆ ಎಸ್.ಪಿ. ಅವರೊಂದಿಗೆ ಸಭೆಯನ್ನು ಮುಗಿಸಿದ ಹಿಂದೂ ಸಂಘಟನೆಗಳ (Hindu organisations) ಮತ್ತು ಬಿಜೆಪಿ ಮುಖಂಡರು (BJP leaders) ಹೊರ ಬಂದು ಪ್ರತಿಭಟನಾ ನಿರತರಿಗೆ ಮಾಹಿತಿ ನೀಡಿದರು.   ಪ್ರತಿಭಟನಾಕಾರರನ್ನು ಉದ್ದೇಶೀಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ಎಸ್. ಹೆಗಡೆ, “ಎಸ್.ಪಿ. ಅವರಿಗೆ ಭಟ್ಕಳ ನಗರ ಪೊಲೀಸ್ ಠಾಣೆಯಿಂದ ನೀಡಿದ ರೌಡಿಶೀಟರ ಯಾದಿಯಂತೆ ಶಿರಸಿಗೆ ಜಿಲ್ಲೆಯ ಎಲ್ಲಾ ರೌಡಿಶೀಟರರೊಂದಿಗೆ ಮಾತನಾಡಿದ್ದಾರೆ. ಇದರಲ್ಲಿ ನಮ್ಮ ಭಟ್ಕಳ ಹಿಂದು ಕಾರ್ಯಕರ್ತ ಶ್ರೀನಿವಾಸ ನಾಯ್ಕ ಅವರಿಗೆ ಪೋಲಿಸ್ ಭಾಷೆಯಲ್ಲಿ ಎಚ್ಚರಿಕೆ ನೀಡಿದ್ದು ಹೊರತುಪಡಿಸಿದರೆ ಯಾವುದೇ ಹಲ್ಲೆಯನ್ನು ಮಾಡಿಲ್ಲ ಎಂಬುದಾಗಿ ಎಸ್ಪಿ ತಿಳಿಸಿದ್ದಾರೆ. ಇಲ್ಲಿನ ಅಧಿಕಾರಿಗಳಿಂದ ತಪ್ಪು ಮಾಹಿತಿ ಹೋಗಿರುವ ಹಿನ್ನೆಲೆ ಕರೆಯಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಸಂಘಟನೆಯ ನಿಟ್ಟಿನಲ್ಲಿ ಹೋರಾಟ ಮಾಡಿದವರ ಮೇಲಿನ ಪ್ರಕರಣವನ್ನು ವಿಂಗಡನೆ ಮಾಡಿ ಅಂತಹುದನ್ನು ರದ್ದು ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : vascular treatment/ ವ್ಯಾಸ್ಕ್ಯೂಲರ್ ಚಿಕಿತ್ಸೆಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಸಾಧನೆ

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ರೌಡಿಶೀಟರ ಪಟ್ಟಿಯನ್ನು ಮೊದಲೇ ಪರಿಶೀಲಿಸಿ ಕರೆಯಿಸಿಕೊಳ್ಳಬೇಕು. ಹಲ್ಲೆ ನಡೆಸಿದ ಮೇಲೆ ಪಟ್ಟಿಯನ್ನು ಪರಿಶೀಲಿಸುವುದಲ್ಲ. ಇದರಿಂದ ಆ ಕಾರ್ಯಕರ್ತ ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ ಆತನ ಜೀವಕ್ಕೆ ಹಾನಿಯಾದಲ್ಲಿ ಯಾರು ಹೊಣೆಗಾರರು ಎಂದು ಪ್ರತಿಭಟನಾನಿರತ ಹಿಂದು ಕಾರ್ಯಕರ್ತರು ಮುಖಂಡರನ್ನು ಪ್ರಶ್ನಿಸಿದರು. ಇದೇ ಮಾತನ್ನು ಎಸ್.ಪಿ. ಅವರೇ ಸ್ಥಳಕ್ಕೆ ಬಂದು ನಮ್ಮಲ್ಲಿ ತಿಳಿಸಲಿ ಎಂದು ಪಟ್ಟು ಹಿಡಿದರು.

ಇದನ್ನೂ ಓದಿ : NSUI/ ಉತ್ತರ ಕನ್ನಡ ಜಿಲ್ಲೆಗೆ ವಿದ್ಯಾರ್ಥಿ ನ್ಯಾಯ ಯಾತ್ರೆ

ಬಿಜೆಪಿ ಮುಖಂಡ ಗೋವಿಂದ ನಾಯ್ಕ ಮಾತನಾಡಿ, “ಭಟ್ಕಳದಲ್ಲಿ ಪ್ರಕರಣ ಹಾಕಿಸಿಕೊಳ್ಳುವುದು ಹಿಂದುಗಳಿಗೆ ಹೊಸತಲ್ಲ. ಸಮಾಜಕ್ಕಾಗಿ ಪ್ರಕರಣ ಹಾಕಿಸಿಕೊಂಡಿದ್ದೇವೆ ಹೊರತು ಯಾವುದೋ ವೈಯಕ್ತಿಕ ವಿಚಾರದಲ್ಲಿ ಅಥವಾ ಅನೈತಿಕ ಚಟುವಟಿಕೆಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿಲ್ಲ. ನಾವು ಯಾರು ಸಹ ಎಸ್.ಪಿ. ಅವರ ಜೊತೆಗೆ ಮಾತುಕತೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ಸ್ಥಳಿಯ ಪೋಲೀಸ್ ಅಧಿಕಾರಿಗಳಿಂದ ನೀಡಿದ ತಪ್ಪು ಮಾಹಿತಿಯಿಂದ ರೌಡಿಶೀಟರನಲ್ಲಿ ಹೆಸರು ಸೇರಿದೆ. ಇಂತಹದನ್ನು ಮುಂದಿನ ದಿನದಲ್ಲಿ ಆಗದಂತೆ ನೋಡಿಕೊಳ್ಳಲಿದ್ದೇವೆ. ದೇಶದ ಪರವಾದ ಹೋರಾಟ, ಸಮಾಜಕ್ಕಾಗಿ, ಧರ್ಮದ ವಿಚಾರದಲ್ಲಿ, ಗೋ ರಕ್ಷಣೆ ವಿಚಾರದಲ್ಲಿ ಹೀಗೆ ಸಾಮಾಜಿಕ ಹೋರಾಟದ ಮಾಡಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : Chariot Festival/ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಸಂಪನ್ನ

ಕೊನೆಗೆ ಮುಖಂಡರ ಮಾತಿಗೆ ಪ್ರತಿಭಟನಾಕಾರರು ಸಮಾಧಾನಗೊಂಡು ನಗರ ಪೊಲೀಸ್‌ ಠಾಣೆಯಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮುಖಂಡ ಕೃಷ್ಣ ನಾಯ್ಕ ಆಸರಕೇರಿ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸುರೇಶ ನಾಯ್ಕ ಕೋಣೆಮನೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ಹಿಂದು ಜಾಗರಣಾ ವೇದಿಕೆ ತಾಲೂಕು ಸಂಚಾಲಕ ಜಯಂತ ನಾಯ್ಕ ಬೆಣಂದೂರು, ಸಹ ಸಂಚಾಲಕ ನಾಗೇಶ ನಾಯ್ಕ, ಕುಮಾರ ನಾಯ್ಕ, ಜಿಲ್ಲಾ ಪ್ರಮುಖ ಈಶ್ವರ ನಾಯ್ಕ ಸೇರಿದಂತೆ ನೂರಾರು ಹಿಂದು ಸಂಘಟನೆ, ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು (Bhatkal Update).

ಇದನ್ನೂ ಓದಿ : WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ