ಭಟ್ಕಳ (Bhatkal) : ಯು ಟರ್ನ್‌ ತೆಗೆದುಕೊಳ್ಳುತ್ತಿದ್ದ ಟ್ಯಾಕ್ಸಿಗೆ ಬೈಕ್‌ ಡಿಕ್ಕಿಯಾಗಿ (bike collision) ಸವಾರ ಗಾಯಗೊಂಡ ಘಟನೆ ಭಟ್ಕಳ ಶಹರ ಠಾಣೆ ವ್ಯಾಪ್ತಿಯ ಸಾಗರ (Sagar) ರಸ್ತೆಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಗುಳ್ಮಿ ನಿವಾಸಿ ಮಹ್ಮದ್‌ ತಬ್ರೇಜ್‌ ಮಹ್ಮದ್‌ ಖಾಸಿಂ ಗಾಯಗೊಂಡವರು. ಇವರ ವಿರುದ್ಧ ಟ್ಯಾಕ್ಸಿ ಚಾಲಕ ಮಂಗಳೂರು (Mangaluru) ಬಜಪೆ ನಿವಾಸಿ ಕೆ.ಮಹ್ಮದ್‌ ಶಾಫೀ (೪೫) ಭಟ್ಕಳ ಶಹರ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ. ಡಿ.೨೪ರಂದು ಮಧ್ಯಾಹ್ನ ೧೨ ಗಂಟೆಗೆ ಸಾಗರ ರಸ್ತೆಯ ನಾಗಪ್ಪ ನಾಯಕ ರಸ್ತೆಯ ಹತ್ತಿರ ಘಟನೆ ನಡೆದಿದೆ. ಸಂಶುದ್ದಿನ್‌ ವೃತ್ತದ ಕಡೆಯಿಂದ ಸಾಗರ ರಸ್ತೆಗೆ ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಬೈಕ್‌ ಚಲಾಯಿಸಿಕೊಂಡು ಬಂದ ಸವಾರ, ಯು ಟರ್ನ್‌ ತೆಗೆದುಕೊಳ್ಳುತ್ತಿದ್ದ ಕಾರಿನ ಬಲಬದಿಗೆ ಡಿಕ್ಕಿ ಹೊಡೆದಿದ್ದಾರೆ (bike collision). ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಭಟ್ಕಳದ ಮೂವರು ಉಗ್ರರಿಗೆ ಶಿಕ್ಷೆ ಪ್ರಕಟ