ಭಟ್ಕಳ: ಟ್ಯಾಂಕರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ (Biker injured) ಭಟ್ಕಳ (Bhatkal) ಶಹರದ ಕ್ವಾಲಿಟಿ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ (National Highway)ಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಯಲ್ವಡಿಕವೂರಿನ ಬೆಣಂದೂರು ನಿವಾಸಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಪರಮೇಶ್ವರ ಮಾದೇವ ನಾಯ್ಕ (೩೭) ಗಾಯಗೊಂಡವರು (Biker injured). ಟ್ಯಾಂಕರ್ ಚಾಲಕ ಬಾಗಲಕೋಟೆ (Bagalkot) ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಿಗಿ ಗ್ರಾಮದ ಪ್ರಶಾಂತ ಮಹಾಂತೇಶ ವಾಲಿಕರ (೨೫) ಆರೋಪಿ. ಈ ಕುರಿತು ಸರ್ಪನಕಟ್ಟಾ ನಿವಾಸಿ ಎಲೆಕ್ಟ್ರಿಷಿಯನ್ ಗಣೇಶ ತಂದೆ ಯಶ್ವಂತ ನಾಯ್ಕ (೨೮) ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: Achievement Award/ ಕವಿ ಗಾಯಕ ಉಮೇಶ ಮುಂಡಳ್ಳಿಗೆ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ ೨೦೨೬

ಜನವರಿ ೮ರಂದು ರಾತ್ರಿ ೭-೪೫ ಗಂಟೆ ಸುಮಾರಿಗೆ ಕುಂದಾಪುರ (Kundapur) ಕಡೆಯಿಂದ ಹೊನ್ನಾವರ (Honnavar) ಕಡೆಗೆ ವೇಗವಾಗಿ ಮತ್ತು ಅಜಾಗರೂಕತೆಯಿಂದ ಹೋಗುತ್ತಿದ್ದ ಟ್ಯಾಂಕರ್ ಬೈಕಿಗೆ ಡಿಕ್ಕಿ ಹೊಡೆದಿದೆ. ಭಟ್ಕಳ ಕ್ವಾಲಿಟಿ ಹೋಟೆಲ್ ಹತ್ತಿರ ರಸ್ತೆಯ ತಿರುವಿನಲ್ಲಿ ಭಟ್ಕಳ ಸರ್ಕಲ ಕಡೆಯಿಂದ ಸರ್ಪನಕಟ್ಟಾ ಕಡೆಗೆ ಹೋಗುತ್ತಿದ್ದ ಬೈಕಿಗೆ ವಾಹನದ ಬಲಬದಿಯ ಭಾಗದಿಂದ ಡಿಕ್ಕಿ ಹೊಡೆದಿದ್ದರಿಂದ ಸವಾರ ಪರಮೇಶ್ವರ ಮಾದೇವ ನಾಯ್ಕ ರಸ್ತೆಯ ಮೇಲೆ ಬಿದ್ದಿದ್ದಾರೆ.

ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!!

ಇವರ ಬಲಕಾಲಿನ ಮೊಣಗಂಟಿನ ಕೆಳಗಡೆ ಮೂಳೆ ಮೂರಿತವಾಗಿ ಭಾರಿ ಗಾಯವಾಗಿದ್ದು, ಬಲಗೈ ಹಸ್ತಕ್ಕೆ, ಭುಜಕ್ಕೆ, ಹಣೆಗೆ ಗಾಯಗೊಂಡ ಗಾಯಾಳುವಿಗೆ ಭಟ್ಕಳ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಉಡುಪಿಯ (Udupi) ಮಣಿಪಾಲ ಆಸ್ಪತ್ರೆಗೆ (Manipal hospital) ಚಿಕಿತ್ಸೆಗೆ ದಾಖಲಿಸಲಾಗಿದೆ.

ಇದನ್ನು ಓದಿ: Bike collision/ ರಾ ಹೆ.ಯಲ್ಲಿ ಅತಿ ವೇಗ, ನಿರ್ಲಕ್ಷತನ ಚಾಲನೆ: ಬೈಕುಗಳ ಡಿಕ್ಕಿ