ಸಿದ್ದಾಪುರ (Siddapura) : ಶಿವಮೊಗ್ಗದಿಂದ (Shivamogga) ಹೊನ್ನಾವರ (Honnavar) ಕಡೆಗೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದ ಖಾಸಗಿ ಡಿಕ್ಕಿ ಹೊಡೆದ ಘಟನೆ (Bus collision) ನಡೆದಿದೆ. ಅಪಘಾತದಲ್ಲಿ ಕಾರು ಚಾಲಕ ಮತ್ತು ಮತ್ತವರ ಪತ್ನಿಗೆ ಗಾಯವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಶಿವಮೊಗ್ಗದ ವಿನೋಬಾ ನಗರ ನಿವಾಸಿ ಮುರುಳಿ ಎಸ್. (೩೪) ಮತ್ತು ಅವರ ಪತ್ನಿ ಜಯಶ್ರೀ ಆರ್. ಗಾಯಗೊಂಡವರು. ಬಸ್ ಚಾಲಕ ಬೆಂಗಳೂರಿನ (Bengaluru) ಹೊಸಕೋಟೆ (Hoskote) ನಿವಾಸಿ ಅನೀಲಕುಮಾರ ಮಂಜುನಾಥ (೨೧) ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ನ. ೨೨ರಂದು ಘಟನೆ ನಡೆದಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ದೂರು ದಾಖಲಿಸಲು ತಡವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನ.೨೨ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಸಿದ್ದಾಪುರ ತಾಲೂಕಿನ ಮಾವಿನಗುಂಡಿ ಸಮೀಪದ ಹೆಜಿನಿ ತಿರುವಿನಲ್ಲಿ ಈ ಘಟನೆ (Bus collision) ನಡೆದಿದೆ.
ಇದನ್ನೂ ಓದಿ : ಡಿಪೋದಲ್ಲಿದ್ದ ಸಾರಿಗೆ ಬಸ್ ಬೆಂಕಿಗಾಹುತಿ