ಭಟ್ಕಳ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ಕಾರು ನಿಲ್ದಾಣ (Car parking) ತೆರವಿನ ಭೀತಿಯಲ್ಲಿದ್ದು, ಟ್ಯಾಕ್ಸಿ ಚಾಲಕರು ಸಚಿವ ಮಂಕಾಳ ವೈದ್ಯರ (Mankal Vaidya) ಮೊರೆ ಹೋಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಪಕ್ಕದಲ್ಲಿಯೇ ಇರುವ ಕಾರು ನಿಲ್ದಾಣ (Car Parking) ತೆರವಿಗೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಕಂಪನಿ ಮುಂದಾಗಿದೆ. ಇದನ್ನು ಟ್ಯಾಕ್ಸಿ ಚಾಲಕರು ವಿರೋಧಿಸಿದ್ದು, ನಿಲ್ದಾಣ ತೆರವಿಗೆ ತಡೆ ಒಡ್ಡಿದ್ದಾರೆ.

ಇದನ್ನು ಓದಿ: Timely action/ಭಟ್ಕಳದಲ್ಲಿ ನಾಪತ್ತೆಯಾಗಿದ್ದ ಕುಮಟಾ ವ್ಯಕ್ತಿ ತುಮಕೂರಿನಲ್ಲಿ ಪತ್ತೆ

ಮಂಗಳವಾರ ಭಟ್ಕಳಕ್ಕೆ ಆಗಮಿಸಿದ್ದ ಸಚಿವ ಮಂಕಾಳ ವೈದ್ಯರನ್ನು ಭೇಟಿ ಮಾಡಿದ ಟ್ಯಾಕ್ಸಿ ಚಾಲಕರು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ಕಳೆದ 40 ವರ್ಷಗಳಿಂದ ಕಾರು ನಿಲ್ದಾಣ ಅಸ್ತಿತ್ವದಲ್ಲಿದ್ದು, ಇದೀಗ ಹೆದ್ದಾರಿ ಕಾಮಗಾರಿಯಿಂದ ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ. ಕಾರು ನಿಲ್ದಾಣಕ್ಕೆ ಇರುವ ಜಾಗದ ಸಮಸ್ಯೆಯನ್ನು ನಿವಾರಿಸಿ, ಬದಲಿ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಇದನ್ನು ಓದಿ: Hit and run/ ಡಿಕ್ಕಿ ಹೊಡೆದು ಕಾರು ಪರಾರಿ: ಆಟೋರಿಕ್ಷಾ ಪಲ್ಟಿ; ಗರ್ಭಿಣಿ ಸಹಿತ ಆರು ಜನರು ಆಸ್ಪತ್ರೆಗೆ

ಸಚಿವರನ್ನು ಭೇಟಿಯಾದ ಟ್ಯಾಕ್ಷಿ ಚಾಲಕ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಈರ ನಾಯ್ಕ ನೇತೃತ್ವದ ನಿಯೋಗದಲ್ಲಿ ಸದಸ್ಸರಾದ ರಮೇಶ ಮಾದೇವ ನಾಯ್ಕ ಮೋಹಮದ್ ಅದ್ನಾನ, ಶ್ರೀನಿವಾಸ ಮಂಜ್ಯಯ್ಯ ನಾಯ್ಕ, ಪಾಂಡುರಂಗ ವೆಂಟ್ಕಯ್ಯ ನಾಯ್ಕ, ರಾಘವೇಂದ್ರ ಶೇಟ, ನಾಗರಾಜ ಗೊಂಡ, ಸರ್ಪರಾಜ ಸಾಬಂದ್ರಿ, ರವಿ ನಾಯ್ಕ, ನಾಗೇಶ ನಾಯ್ಕ, ರಮೇಶ ಎಂ ನಾಯ್ಕ, ದಿನೇಶ ನಾಯ್ಕ, ಪೈರೋಜ್ ಹುಸೇನ್ ಸಾಬ್, ಅಬ್ದುಲ್ ಬಾರಿ, ಶಂಕರ ನಾಯ್ಕ, ಪ್ರಭಾಕರ ಆಚಾರಿ ಮತ್ತಿತರರು ಇದ್ದರು.

ಇದನ್ನು ಓದಿ: Makkala Santhe/ ಹಡೀನ ಶಾಲೆಯಲ್ಲಿ ಮಕ್ಕಳ ಸಂತೆ ಯಶಸ್ವಿ