ಭಟ್ಕಳ: ತಾಲೂಕಿನ ಭಟ್ಕಳ ಗ್ರಾಮೀಣ (Bhatkal Rural) ಮತ್ತು ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ (case filed). ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಮತ್ತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಒಬ್ಬನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಿಲಿಂಡರ್ ಡೆಲಿವರಿ ಕೆಲಸ ಮಾಡುವ ಮೂಸಾ ನಗರದ ಅಬ್ದಲ್ ಮಲೀಕ್ ತಂದೆ ಮೊಹಮ್ಮದ್ ಖುರೇಶಿ (೨೬) ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಮಲ್ಲಿಕಾರ್ಜುನಯ್ಯ ಕೊರಾಣಿ ದೂರು ದಾಖಲಿಸಿದ್ದಾರೆ. ಈತ ಫೆ ೨೬ರಂದು ಮಧ್ಯಾಹ್ನ ೨.೩೦ರ ಸುಮಾರಿಗೆ ಭಟ್ಕಳ ತಾಲೂಕಿನ ಕರಿಕಲ್ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನೋಡಿ ಪಿಎಸೈ ಮಾತನಾಡಿಸಿದ್ದಾರೆ. ಆಗ, ಅವನ ಬಾಯಿಯಿಂದ ಗಾಂಜಾ ನಮೂನೆಯ ಘಾಟು ವಾಸನೆ ಬರುತ್ತಿದ್ದು, ಅವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದರಲ್ಲಿ ಸದ್ರಿಯವನು ಗಾಂಜಾ ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದ. ಈತನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

CEIR portal/ ಕಳೆದು ಹೋಗಿರುವ ಮೊಬೈಲ್ ಪತ್ತೆ

ಇದಲ್ಲದೆ ಹೆಬಳೆ ಬದ್ರಿಯಾ ಕಾಲೋನಿಯ ಚಾಲಕ ವೃತ್ತಿ ಮಾಡಿಕೊಂಡಿರುವ ಅಬ್ದಲ ಮಾಜೀದ್ ತಂದೆ ಮೊಹಮ್ಮದ ಇಸ್ಮಾಯಿಲ್ ಶೇಖ (೩೨) ಎಂಬಾತನನ್ನು ಪಿಎಸೈ ಮಲ್ಲಿಕಾರ್ಜುನ ಕೊರಣಿ ವಶಕ್ಕೆ ಪಡೆದಿದ್ದಾರೆ. ಈತ ಫೆ ೨೫ರಂದು ಸಂಜೆ ೭-೪೫ ಗಂಟೆಯ ಸುಮಾರಿಗೆ ಭಟ್ಕಳ ತಾಲೂಕಿನ ಪಿರ್ಧೋಸ ನಗರ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅಮಲಿನಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನೋಡಿ ಹಿಡಿಯಲಾಗಿದೆ. ಮೂರನೇ ಪ್ರಕರಣದಲ್ಲಿ ಜಾಲಿ ತಗ್ಗರಗೋಡಿನ ಗೌಂಡಿ ಕೆಲಸ ಮಾಡುವ ಮೊಹಮ್ಮದ ಜಾಕೀರ್ ತಂದೆ ಅಬ್ದುಲ ರಜಾಕ್ (೨೮) ಎಂಬಾತನನ್ನು ಪಿಎಸೈ ಮಲ್ಲಿಕಾರ್ಜುನ ಕೊರಣಿ ಹಿಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಫಿರ್ದೋಸ್ ನಗರದ ಮೈದಾನದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.

Leopard attacked/ ಮುಟ್ಟಳ್ಳಿಯಲ್ಲಿ ವ್ಯಕ್ತಿ ಮೇಲೆ ಚಿರತೆ ದಾಳಿ

ಇತ್ತ, ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸೈ ಹಣಮಂತ ಬಿರಾದಾರ ಅವರು ಕಾಯ್ಕಿಣಿಯ ಕುಂಬಾರಕೇರಿಯ ನಿವಾಸಿ, ವಿದ್ಯಾರ್ಥಿ ರೋಹಿತ ತಂದೆ ರವಿ ಕುಂಬಾರ (೧೮) ಎಂಬಾತನನ್ನು ಬಂಧಿಸಿದ್ದಾರೆ. ಫೆ ೨೬ರಂದು ಮಧ್ಯಾಹ್ನ ೨-೩೦ ಗಂಟೆಯ ಸುಮಾರಿಗೆ ಮುರ್ಡೇಶ್ವರದ ಕಾಯ್ಕಿಣಿಯ ಕುಂಬಾರಕೇರಿ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ನಾಲ್ವರ ವಿರುದ್ಧ ಆಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

CS exam/ ಶಿರಾಲಿಯ ಪೃಥ್ವಿರಾಜ ನಾಯ್ಕ ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣ