ಭಟ್ಕಳ: ನಗರದ ಮುಗ್ದುಂ‌ ಕಾಲೋನಿಯಲ್ಲಿ ಜಾನುವಾರುಗಳ ಮೂಳೆಗಳು ಬಿದ್ದಿವೆ ಎಂದು ‘ಸುಳ್ಳು ಸುದ್ದಿ’ ಸೋಶಿಯಲ್ ಮೀಡಿಯಾದಲ್ಲಿ ಹರಡಿದ ಅಜ್ಞಾತರ ವಿರುದ್ಧ ಪುರಸಭೆ ಮುಖ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ (case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಂದೂರು (Byndoor) ಸೋಮೇಶ್ವರ ರಸ್ತೆಯ ನಿವಾಸಿಯಾಗಿರುವ ಪ್ರಭಾರ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡಾ ದೂರು ನೀಡಿದ್ದಾರೆ. ಸೆ 9ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಅಜ್ಞಾತ ಆರೋಪಿತರು ಸೋಶಿಯಲ್ ಮೀಡಿಯಾದಲ್ಲಿ ಭಟ್ಕಳದ (Bhatkal) ಮುಗ್ದುಂ ಕಾಲೋನಿಯ ತೆರೆದ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ಮೂಳೆಗಳ ರಾಶಿ ಬಿದ್ದಿವೆ ಎಂಬ ಫೋಟೋ ಹಾಗೂ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿ ಹರಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಶಾಂತಿ ಭಂಗ ಉಂಟು ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: folklorist/ ನಮ್ಮನ್ನಗಲಿದ ಜಾನಪದ ತಜ್ಞ ಡಾ ಎನ್ ಆರ್ ನಾಯಕ

ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು (case filed), ಆರೋಪಿತರ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ.

ಇದನ್ನು ಓದಿ: Doctor died/ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ವೈದ್ಯ ಸಾವು