ಭಟ್ಕಳ: ಪಾಲಕರ ವಿರೋಧದ ನಡುವೆಯೂ ಮದುವೆಯಾದ ಮಗ ತನ್ನ ಹೆಂಡತಿಯನ್ನು ಮನೆಗೆ ಕರೆ ತಂದಿದ್ದನ್ನು ವಿರೋಧಿಸಿದ ತಾಯಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ನಾರಾಯಣ ನಾಯ್ಕ ಹಾಗೂ ಕಸ್ತೂರಿ ನಾಯ್ಕ ಅವರು ಮದುವೆ ಆಗಿದ್ದು, ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ಪತ್ನಿಯನ್ನು ಮನೆಗೆ ಕರೆತಂದಿದ್ದು, ಇದಕ್ಕೆ ವಿರೋಧವ್ಯಕ್ತಪಡಿಸಿದ ತಾಯಿ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
complaint/ ಪಿಎಸೈ ರನ್ನಗೌಡ ವಿರುದ್ಧ ಐಜಿಪಿಗೆ ಹಿಂಜಾವೇ ದೂರು
ಭಟ್ಕಳದ ಯಲ್ವಡಿಕವೂರು ಬಳಿಯ ಬಿಟ್ಟಿಬೀಳೂರುವಿನಲ್ಲಿ ಮಾಸ್ತಮ್ಮ ಮಾಸ್ತಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಅವರ ಮಗ ನಾರಾಯಣ ಮಾಸ್ತಪ್ಪ ನಾಯ್ಕ ಅವರು ತಮ್ಮ ತಂಗಿ ಪದ್ಮಾವತಿ ಮಾಸ್ತಪ್ಪ ನಾಯ್ಕ ಅವರ ಮಗಳಾದ ಕಸ್ತೂರಿ ಮಾಸ್ಪಪ್ಪ ನಾಯ್ಕ ಅವರನ್ನು ವಿವಾಹವಾಗಿದ್ದಾರೆ. ಬೆಳಕೆಯ ವಿನಾಯಕ ದೇವಸ್ಥಾನದಲ್ಲಿ ಫೆಬ್ರವರಿ ೨೦ರಂದು ಅದ್ಧೂರಿ ಮದುವೆ ನಡೆದಿದೆ. ಆದರೆ, ಈ ಮದುವೆಗೆ ಮಾಸ್ತಮ್ಮ ನಾಯ್ಕ ಅವರ ವಿರೋಧವಿತ್ತು.
Bike collided/ ಶಿರಾಲಿಯಲ್ಲಿ ಸೈಕಲ್ಲಿಗೆ ಬೈಕ್ ಡಿಕ್ಕಿ: ಸವಾರಿಬ್ಬರೂ ಆಸ್ಪತ್ರೆಗೆ
ಆ ದಿನ ಮದುವೆ ಮುಗಿದ ನಂತರ ನಾರಾಯಣ ನಾಯ್ಕ ಅವರು ತಮ್ಮ ಪತ್ನಿ ಜೊತೆ ಮನೆಗೆ ಬಂದಿದ್ದಾರೆ. ಸಂಜೆ ೭.೩೦ಕ್ಕೆ ಮನೆಗೆ ಬಂದ ವರ-ವಧುವನ್ನು ಮಾಸ್ತಮ್ಮ ನಾಯ್ಕ ಅವರು ಸ್ವಾಗತಿಸಿಲ್ಲ. ಬದಲಾಗಿ, `ನನ್ನ ಮನೆಯೊಳಗೆ ಕಾಲಿಡುವುದು ಬೇಡ’ ಎಂದು ಬೊಬ್ಬೆ ಹೊಡೆದಿದ್ದಾರೆ. ಇದರಿಂದ ನಾರಾಯಣ ನಾಯ್ಕ ಅವರು ಸಿಟ್ಟಾಗಿದ್ದಾರೆ. ಇದೇ ವೇಳೆ ಅವರ ತಂಗಿ ಪದ್ಮಾವತಿ ನಾಯ್ಕ ಹಾಗೂ ಅವರ ಇನ್ನಿತರ ಮಕ್ಕಳಾದ ಮಮತಾ ನಾಯ್ಕ, ಗಾಯತ್ರಿ ನಾಯ್ಕ, ಸುಬ್ರಮಣ್ಯ ನಾಯ್ಕ ಅವರು ಅಲ್ಲಿಗೆ ಬಂದಿದ್ದು, ನಾರಾಯಣ ನಾಯ್ಕ ಅವರ ಜೊತೆ ಅವರು ಸೇರಿ ಮಾಸ್ತಮ್ಮ ನಾಯ್ಕ ಅವರ ಮೇಲೆ ಕೈ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಾಸ್ತಮ್ಮ ನಾಯ್ಕ ಪೊಲೀಸರ ಮೊರೆ ಹೋಗಿದ್ದಾರೆ. ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ (Case filed).
bike collision/ ಕಿತ್ರೆ ಕ್ರಾಸ್ ಬಳಿ ಬೈಕುಗಳ ಮುಖಾಮುಖಿಯಲ್ಲಿ ನಾಲ್ವರಿಗೆ ಗಾಯ



