ಭಟ್ಕಳ: ತಾಲೂಕಿನಲ್ಲಿ ಕಳೆದ ವಾರ ಸುರಿದ ಭಾರಿ ಮಳೆಗೆ ಮೂಡಭಟ್ಕಳ ಗೋಫಿನಾಥ ನದಿಗೆ ಅಡ್ಡಲಾಗಿ ಬಿದ್ದಂತಹ ಬೃಹದಾಕಾರದ ಅಲದ‌ ಮರವೊಂದನ್ನು ಭಾನುವಾರ ಸ್ಥಳೀಯ ಕ್ರೀಯೆಟಿವ್ ಬಾಯ್ಸ್ ತಂಡ ಶ್ರಮ ವಹಿಸಿ ಕಟಾವು ಮಾಡಿ ತೆರವು ಮಾಡಿದ್ದಾರೆ (Commendable efforts).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೂಡಭಟ್ಕಳ ಗೋಫಿನಾಥ ನದಿಯ ಕಟ್ಟೆಗೆ ತಾಗಿಕೊಂಡ ಬೃಹತ್ ಆಲದ ಮರ ಇದಾಗಿತ್ತು. ಪ್ರತಿ ವರ್ಷ ಚನ್ನಪಟ್ಟಣ ಹನುಮಂತ ದೇವರ ಉತ್ಸವ ಮೂರ್ತಿ ಪಾಲಕಿಯಲ್ಲಿ ಬಂದು ಇದೇ ಕಟ್ಟೆಯ ಮೇಲೆ ಕುಳಿತು ಭಕ್ತರ ಸೇವೆ ಪಡೆಯುತ್ತಿದೆ. ಕಳೆದ ವಾರದ ಸುರಿದ ಭಾರಿ ಮಳೆ ಗಾಳೆಗೆ ಮರ ಬುಡ ಸಮೇತ ಕಳಚಿ ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮರ ತೆರವಿಗೆ ಮುಂದಾಗಿರಲಿಲ್ಲ. ನದಿಗೆ ಅಡ್ಡಲಾಗಿ ಮರ ಬಿದ್ದಿರುವ ಕಾರಣ ಭಾರಿ ಮಳೆಯಾದರೆ ನದಿ ನೀರು ಮುಂದೆ ಸಾಗಲಾರದೆ ಸುತ್ತಮುತ್ತಲಿನ ಪ್ರದೇಶಗಳಿಗೆ ಮಳೆ ನೀರು ನುಗ್ಗುವ ಸನ್ನಿವೇಶ ಇತ್ತು. ಇದನ್ನು ಮನಗಂಡ ಕ್ರೀಯೆಟಿವ್ ಬಾಯ್ಸ್ ಸದಸ್ಯರು ಶ್ರಮದಾನದ ಮೂಲಕ ಬೃಹಧಾಕಾರದ ಮರ ಕಟಾವು ಮಾಡಿದ್ದಾರೆ.

ಇದನ್ನು ಓದಿ: Arrest/ ರಾತ್ರಿ ಹೊತ್ತು ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರು

ಭಟ್ಕಳದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ೫೦ ಸದಸ್ಯರನ್ನೊಳಗೊಂಡ ಭಟ್ಕಳ ಕ್ರಿಯೇಟಿವ್ ಬಾಯ್ಸ್ ತಂಡ ಮರ ಕಟಾವು ಮಾಡುವ ಯಂತ್ರವನ್ನು ತಮ್ಮ ವಂತಿಗೆಯ ಹಣದಿಂದ ಬಾಡಿಗೆಗೆ ತಂದು ಯಂತ್ರದ ಸಹಾಯದಿಂದ ಬೃಹದಾಕಾರದ ಮರ‌ ಕಟಾವು ಮಾಡಿ ಅದರ ತುಂಡುಗಳನ್ನು ವ್ಯವಸ್ಥಿತವಾಗಿ ನಿಗದಿತ ಸ್ಥಳದಲ್ಲಿ ಕೂಡಿಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ (Commendable efforts).

ಇದನ್ನು ಓದಿ: Police raid/ ಕೋಳಿ ಅಂಕ ಆಡುತ್ತಿದ್ದ ಅರಣ್ಯ ಪ್ರದೇಶದಲ್ಲಿ ಪೊಲೀಸ್ ದಾಳಿ

ಕಳೆದೊಂದು ವಾರದ ಹಿಂದೆ ಮುರಿದು ಬಿದ್ದ ಮರವನ್ನು ಸ್ಥಳೀಯಾಡಳಿತ ತೆರವು ಮಾಡಬೇಕಿತ್ತು. ಆದರೆ ಮರ ಕಟಾವಿಗೆ ತಗಲುವ ಭಾರಿ ವೆಚ್ಚ ಭರಿಸುವವರ್ಯಾರು ಎನ್ನುವ ಜಿಜ್ಞಾಸೆ ಇತ್ತು. ಇದನ್ನು ಮನಗಂಡು ನಮ್ಮ ತಂಡದ ಸದಸ್ಯರು ಸೇರಿ ಸ್ವಯಂ ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿದ್ದೇವೆ ಎಂದು ಕ್ರಿಯೇಟಿವ್ ಬಾಯ್ಸ್ ಸದಸ್ಯ ಕುಮಾರ ನಾಯ್ಕ ಹೇಳಿದ್ದಾರೆ.

ಇದನ್ನು ಓದಿ: felicitation ceremony/ ಕನ್ನಡ ನಾಡು-ನುಡಿಯ ಅಭಿಮಾನ ಸದಾ ಜೀವಂತ ವಾಗಿರಬೇಕು : ಡಿ ಬಿ ನಾಯ್ಕ