ಭಟ್ಕಳ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆ (Teacherʼs day celebration) ಅಂಗವಾಗಿ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರೌಢಶಾಲಾ ಮಕ್ಕಳಿಗೆ ಸ್ಪರ್ಧೆ (competition) ಆಯೋಜಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ʼಭಟ್ಟಾಕಳಂಕನ ನಾಡು ಚೆನ್ನಬೈರಾ ದೇವಿಯ ಬೀಡುʼ ಎಂಬ ವಿಷಯದ ಕುರಿತು ಕವನ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಪ್ರಾಥಮಿಕ ಪ್ರೌಢಶಾಲಾ ಮತ್ತು ಕಾಲೇಜು ಶಿಕ್ಷಕ/ ಶಿಕ್ಷಕಿ / ಉಪನ್ಯಾಸಕರಿಗೆ ಪ್ರತ್ಯೇಕವಾಗಿ ನಡೆಯಲಿದೆ. ಆಸಕ್ತರು ತಮ್ಮ ಸ್ವರಚಿತ ಒಂದು ಕವಿತೆಯನ್ನು ಮುದ್ರಿಸಿ ಅಥವಾ ಅಂದವಾದ ಕೈ ಬರಹದಲ್ಲಿ ದ್ವಿಪ್ರತಿಯಲ್ಲಿ ನೀಡಬೇಕಾಗಿದ್ದು, ಒಂದು ಪ್ರತಿಯ ಹಿಂಭಾಗದಲ್ಲಿ ಮಾತ್ರ ತಮ್ಮ ಹೆಸರು, ಶಾಲೆ, ವಿಳಾಸ, ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಕವಿತೆಯು ಗರಿಷ್ಠ ಎರಡು ಪುಟಗಳಿಗೆ ಸೀಮಿತವಾಗಿರಲಿ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: fish market/ ʼಮೀನು ಮಾರುಕಟ್ಟೆ ಸ್ಥಳಾಂತರವಾಗದುʼ
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ: ಭಟ್ಕಳ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ʼವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರʼ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿ ಪ್ರೌಢಶಾಲೆಯಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಪ್ರಬಂಧವನ್ನು ಕಳುಹಿಸಲು ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಯು ಎ -೪ ಹಾಳೆಯ ಮೂರರಿಂದ ನಾಲ್ಕು ಪುಟಗಳ ವ್ಯಾಪ್ತಿಯ ಪ್ರಬಂಧವನ್ನು ಅಂದವಾದ ಕೈ ಬರೆಹದಲ್ಲಿಯೇ ಬರೆದು ಕಳಿಸಬೇಕು. ಅದರ ಹಿಂಭಾಗದಲ್ಲಿ ತಮ್ಮ ಹೆಸರು, ಶಾಲೆ, ವಿಳಾಸ, ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: horrific accident/ ಬೈಕ್ ಸವಾರ ದುರ್ಮರಣ
ಸ್ಪರ್ಧೆಯಲ್ಲಿ (competition) ಭಾಗವಹಿಸುವ ಶಿಕ್ಷಕರು ತಮ್ಮ ಕವನಗಳನ್ನು ಹಾಗೂ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಸೆಪ್ಟೆಂಬರ್ ಎರಡನೇ ತಾರೀಕಿನ ಸಂಜೆ ಐದು ಗಂಟೆಯೊಳಗೆ ಭಟ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಅಶೋಕ್ ಆಚಾರಿ ಅವರ ಬಳಿ ತಲುಪಿಸಬೇಕು. ವಿಜೇತರಿಗೆ ಮತ್ತು ಭಾಗವಹಿಸಿದ ಎಲ್ಲ ಶಿಕ್ಷಕರು / ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ಸೆಪ್ಟೆಂಬರ್ ೫ರಂದು ಭಟ್ಕಳದಲ್ಲಿ (Bhatkal) ನಡೆಯುವ ಗುರುವಂದನಾ ಕಾರ್ಯಕ್ರಮದ ವೇದಿಕೆಯಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕ : ಗಂಗಾಧರ ನಾಯ್ಕ (೮೩೧೦೦೯೩೧೯೮), ಶ್ರೀಧರ ಶೇಟ್ (೯೧೪೧೧೧೧೬೧೧).
ಇದನ್ನೂ ಓದಿ: arrested the accused/ ೧೨ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು



