ಯಲ್ಲಾಪುರ (Yallapur) : ರಕ್ಷಣೆ ಕೋರಿ ಪೊಲೀಸರ ಮೊರೆಹೋದ ಬಸ್ ಕಂಡಕ್ಟರ್ (Bus Conductor) ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಸ್ ಕಂಡಕ್ಟರ್ (Bus Conductor) ಸಿದ್ದಪ್ಪ ಬಿರಾದಾರ್ ವಿರುದ್ಧ ದೂರು ದಾಖಲಾಗಿದೆ. ಅನುಚಿತ ವರ್ತನೆ ಆರೋಪದ ಅಡಿ ಕಂಡಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯಿಂದ (Hubballi) ಯಲ್ಲಾಪುರಕ್ಕೆ (Yallapur) ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೈ ಮುಟ್ಟಿದ ಆರೋಪದಡಿ ಕೆಎಸ್‌ಆರ್‌ಟಿಸಿ (KSRTC) ಬಸ್ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಕ್ಕೂ ಮೊದಲು ೧೫ಕ್ಕೂ ಹೆಚ್ಚು ಜನರು ಕಿರವತ್ತಿಯಲ್ಲಿ ನಿರ್ವಾಹಕನಿಗೆ ಧರ್ಮದೇಟು ನೀಡಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ: ಪ್ರವಾಸಕ್ಕೆಂದು ಬಂದಿದ್ದ ಬಾಲಕ ಬಾವಿಗೆ ಬಿದ್ದು ಸಾವು
ಪ್ರಕರಣವೇನು? : ಯಲ್ಲಾಪುರ ತಾಲೂಕಿನ ಮದನೂರಿನ ಅಲ್ಕೇರಿ ಬಳಿಯ ೨೦ ವರ್ಷ ಪ್ರಾಯದ ಯುವತಿ ಮಂಗಳವಾರ ಹುಬ್ಬಳ್ಳಿಗೆ ಹೋಗಿದ್ದರು. ಸಂಜೆ ೪.೩೦ರ ವೇಳೆಗೆ ಮನೆಗೆ ಮರಳುವುದಕ್ಕಾಗಿ ಅವರು ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ ಬಸ್ ಹತ್ತಿದ್ದರು. ನಿರ್ಮಲಾ ಅವರ ಮಾವನ ಮಗ ಸುಂದರ್ ಎಂಬಾತ ಹುಬ್ಬಳ್ಳಿಯ ಭಾರತ್ ಮಿಲ್ ಬಳಿ ಅದೇ ಬಸ್ಸು ಹತ್ತಬೇಕಿದ್ದು, ಸುಂದರ್ ಅವರು ಬಸ್ಸು ಹತ್ತದ ಕಾರಣ ನಿರ್ಮಲಾ ಅವರು ಇಂಡಿ ಪೆಟ್ರೋಲ್ ಬಂಕ್ ಬಳಿ ಬಸ್ಸು ಇಳಿಯಲು ಬಯಸಿದ್ದರು. ಆದರೆ, ಆ ವೇಳೆ ವಿದ್ಯಾರ್ಥಿನಿಗೆ ಬಸ್ಸಿನಿಂದ ಇಳಿಯಲು ಕಂಡೆಕ್ಟರ್ ಸಿದ್ದಪ್ಪ ಬಿರಾದರ ಬಿಡಲಿಲ್ಲ ಎಂದು ದೂರಲಾಗಿದೆ.
ಇದನ್ನೂ ಓದಿ: ಮದ್ಯ ಸೇವಿಸಿ ಬೈಕ್ ಚಲಾಯಿಸಿದ್ದಕ್ಕೆ ದಂಡ
`ಯಾರೋ ಒಬ್ಬ ಫೋನ್ ಮಾಡಿದ ಅಂತ ಬಸ್ಸಿನಿಂದ ಇಳಿದು ಸಾಯುತ್ತೀಯಾ?’ ಎಂದು ಪ್ರಶ್ನಿಸಿದ ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ಯುವತಿಯ ಎದೆಗೆ ಕೈ ಹಾಕಿ ದೂಡಿದರು. ಅದಾದ ನಂತರ ಯುವತಿಯ ಕೈ ಹಿಡಿದು ಎಳೆದಾಡಿದರು. ಜೊತೆಗೆ `ಫ್ರೀ ಬಸ್ ಅಂತ ಫೋನ್ ಹಿಡಿದು ಧಿಮಾಕು ಮಾಡುತ್ತೀಯಾ?’ ಎಂದು ಪ್ರಶ್ನಿಸಿ ಕೆಟ್ಟದಾಗಿ ನಿಂದಿಸಿದರೆಂದು ಸಿಟ್ಟಾದ ಯುವತಿ ಊರಿನ ಪ್ರಮುಖರಿಗೆ ಫೋನ್ ಮಾಡಿ ತನಗಾದ ಅನ್ಯಾಯದ ಬಗ್ಗೆ ದೂರಿದ್ದರು.
ಇದನ್ನೂ ಓದಿ: ಡಿ.೩೧ರಿಂದ ಅನಿರ್ದಿಷ್ಟಾವಧಿ ಬಸ್ ಮುಷ್ಕರ
ಆ ಬಸ್ಸು ಕಿರವತ್ತಿಗೆ ಬರುವುದನ್ನು ಕಾಯುತ್ತಿದ್ದ ೧೫ಕ್ಕೂ ಅಧಿಕ ಜನ ಯುವತಿ ಬಸ್ಸಿನಿಂದ ಇಳಿದ ತಕ್ಷಣ ಕಂಡೆಕ್ಟರ್’ಗೆ ಹಿಗ್ಗಾಮುಗ್ಗ ಥಳಿಸಿದರು. ಆ ವೇಳೆ ಬಸ್ಸಿನ ಚಾಲಕ ಕಂಡಕ್ಟರನ್ನು ರಕ್ಷಿಸಿದರು. ಕಂಡಕ್ಟರ್ ಅನುಚಿತ ವರ್ತನೆಯ ಬಗ್ಗೆ ಯುವತಿ ಪೊಲೀಸ್ ದೂರು ನೀಡಿದ್ದಾರೆ. ಪಿಎಸ್‌ಐ ನಸ್ರೀನತಾಜ್ ಬೆಟ್ಟರಗಿ ತನಿಖೆ ನಡೆಸುತ್ತಿದ್ದಾರೆ. ಕಂಡೆಕ್ಟರ್ ಸಿದ್ದಪ್ಪ ಬಿರಾದಾರ ಸಹ ವಿದ್ಯಾರ್ಥಿನಿಯಿಂದ ತನಗೆ ತೊಂದರೆಯಾಗಿದೆ’ ಎಂದು ದೂರು ನೀಡಿದ್ದು, ಪಿಎಸ್‌ಐ ಸಿದ್ದಪ್ಪ ಗುಡಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಬೈಕುಗಳ ನಡುವೆ ಡಿಕ್ಕಿ; ಮಹಿಳೆಗೆ ಗಾಯ