ಭಟ್ಕಳ: ದೇವರಾಜ ಅರಸು (Devaraj Urs) ಅವರು ಬಡವರ ಏಳಿಗೆಗಾಗಿ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಾ ಪಂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಮಹಾಲೆ ಹೇಳಿದರು. ಇಲ್ಲಿನ ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು (Devaraj Urs) ಜನ್ಮದಿನಾಚರಣೆ (Birth Anniversary) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Impact/ ‘ಭಟ್ಕಳ ಡೈರಿ’ ವರದಿ ಫಲಶ್ರುತಿ: ತ್ಯಾಜ್ಯ ತೆರವುಗೊಳಿಸಿದ ಭಟ್ಕಳ ನಗರಸಭೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗೇಶ ಶೆಟ್ಟಿ ಉಪನ್ಯಾಸ ನೀಡಿ, ಅರಸು ಅವರ ಕನಸಿನಂತೆ ನಿರ್ಮಿಸಿದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಿದೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಬೇಕು ಎಂದರು. ಕಂದಾಯ ಇಲಾಖೆ (revenue department) ಅಧಿಕಾರಿ ಪ್ರವೀಣಕುಮಾರ ಅಧ್ಯಕ್ಷತೆ ವಹಿಸಿದ್ದರು.
Transfer/ ಭಟ್ಕಳದ ಇಬ್ಬರು ಕಂದಾಯ ಶಿರಸ್ತೇದಾರರ ವರ್ಗಾವಣೆ
ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆಯ ಅಶೋಕ ವಡ್ಡರ್, ತೋಟಗಾರಿಕೆ ಇಲಾಖೆ (horticulture department) ಸಹಾಯಕ ನಿರ್ದೇಶಕ ಶ್ರವಣಕುಮಾರ ಬಿ ವಿ, ಸಮಾಜ ಕಲ್ಯಾಣ ಇಲಾಖೆ (social department) ಸಹಾಯಕ ನಿರ್ದೇಶಕಿ ಗೀತಾ ಹೆಗಡೆ, ಸಿಡಿಪಿಒ (CDPO) ಸುಶೀಲಾ ಮೊಗವೀರ, ಎಎಸ್‌ಐ (ASI) ಅಂತೋನಿ ಫರ್ನಾಂಡಿಸ್, ನಿವೃತ್ತ ವಿಸ್ತರಣಾಧಿಕಾರಿ ಗಜೇಂದ್ರ ನಾಯಕ, ಆರ್ ಡಿ ನಾಯಕ, ವಿ ಜಿ ನಾಯಕ, ವಾರ್ಡನ್ ದೇವಕಿ, ಸುಧೀಂದ್ರ ಕಾಲೇಜು ಮತ್ತು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
village assistants/ ಗ್ರಾಮ ಸಹಾಯಕರ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆ ಕೇಂದ್ರಸ್ಥಾನ ಬಿಡಲು ಅನುಮತಿಗೆ ಮನವಿ
ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ(PUC), ಪದವಿಗಳಲ್ಲಿ (degree) ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜು ಆರ್ ನಾಯ್ಕ ಸ್ವಾಗತಿಸಿದರು, ಮಂಜುನಾಥ ಗೌಡ ವಂದಿಸಿದರು.

