ಭಟ್ಕಳ (Bhatkal): ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ (tourism policy) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಹಾಗೂ ಸಚಿವ ಎಚ್.ಕೆ. ಪಾಟೀಲ (HK Patil) ಬಳಿ ಚರ್ಚೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ (DK Shivakumar) ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಶುಕ್ರವಾರ ನೇತ್ರಾಣಿ (Netrani) ದ್ವೀಪ ವೀಕ್ಷಣೆ ನಂತರ ಬೆಂಗಳೂರಿಗೆ (Bengaluru ) ಮರಳುವ ಮುನ್ನ ಮುರುಡೇಶ್ವರ (Murudeshwar) ಗಾಲ್ಫ್ ಕ್ಲಬ್ ನ ಹೆಲಿಪ್ಯಾಡ್ ಬಳಿ ಮಾಧ್ಯಮ ಜೊತೆ ಮಾತನಾಡಿದರು.
ಇದನ್ನೂ ಓದಿ: ಸಚಿವ ಮಂಕಾಳ ವೈದ್ಯ, ಸತೀಶ ಸೈಲ್, ಭೀಮಣ್ಣ ನಾಯ್ಕ ಭರ್ಜರಿ ಸ್ಟೆಪ್
ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಕರಾವಳಿಯ ಪ್ರಕೃತಿ ಸಂಪತ್ತು ಸದ್ಭಳಕೆಯಾಗಬೇಕು. ಬಂಡವಾಳ ಹೂಡಿಕೆದಾರರು ಬಂದರೆ ಉತ್ತಮ ರೀತಿಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಚಿಂತಿಸಲಾಗುವುದು ಎಂದರು.
ಇದನ್ನೂ ಓದಿ: ಶಿಕ್ಷಕಿಯ ಮನೆಯಂಗಳದಲ್ಲಿ ಕಾವ್ಯೋತ್ಸವ
ನಾನು ೧೫-೨೦ ವರ್ಷಗಳ ಹಿಂದೆ ಬ್ಯಾಂಕಾಕಿಗೆ (bangkok) ಹೋಗಿದ್ದ ವೇಳೆ ಗಮನಿಸಿದಂತೆ ಅಲ್ಲಿನ ಯುವಕರಿಗಿಂತ ನಮ್ಮ ಕರಾವಳಿಯ ಹುಡುಗರು ಹೆಚ್ಚು ಕ್ರಿಯಾಶೀಲವಾಗಿದ್ದಾರೆ. ಇಲ್ಲಿ ಅಂತಾರಾಷ್ಟೀಯ ಮಟ್ಟದ ಅನುಕೂಲತೆ ನೀಡುವಂತಹ ವಾತಾವರಣ ಇದೆ. ಈ ಕಾರಣಕ್ಕಾಗಿ ಇಲ್ಲಿ ಉಳಿದುಕೊಂಡು ಅನುಕೂಲತೆಗಳನ್ನು ವೀಕ್ಷಣೆ ಮಾಡಿದೆ ಎಂದರು.
ಇದನ್ನೂ ಓದಿ : ಮೀನುಗಾರರ ಸಂಕಷ್ಟ ಪರಿಹಾರ ೧೦ ಲಕ್ಷಕ್ಕೆ ಏರಿಕೆ
ಇಲ್ಲಿನ ಸಮುದ್ರ ಕಿನಾರೆಗಳು ಗೋವಾಕ್ಕಿಂತ (Goa) ಹೆಚ್ಚು ಸುಂದರವಾಗಿವೆ. ಅದಕ್ಕಾಗಿ ಸ್ವತಃ ಕಣ್ಣಾರೆ ನೋಡಲು ಬಂದೆ. ನಾನು ಕಿವಿಗಳಿಗಿಂತ ಹೆಚ್ಚು ಕಣ್ಣನ್ನು ನಂಬುತ್ತೇನೆ. ಸ್ಕೂಬಾ ಡೈವಿಂಗ್ ಮಾಡಿದೆ. ಮೀನುಗಾರಿಕೆ ಸಚಿವ (Mankal Vaidya) ಮಾಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ ಇದ್ದರು ಎಂದರು.