ಭಟ್ಕಳ(Bhatkal): ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಡಿ ಭಟ್ಕಳ ತಾಲೂಕಿನ ಗೊರಟೆ ಪ್ರೌಢಶಾಲಾ ಆಟದ ಮೈದಾನದಲ್ಲಿ ಸೆಪ್ಟೆಂಬರ್ ೨೩ರಂದು ಭಟ್ಕಳ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ (Dussehra Games) ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದಸರಾ ಕ್ರೀಡಾಕೂಟದಲ್ಲಿ (Dussehra Games) ಪುರುಷರಿಗೆ ಮತ್ತು ಮಹಿಳೆಯರಿಗೆ ೧೦೦ ಮೀಟರ್, ೨೦೦ ಮೀಟರ್, ೪೦೦ ಮೀಟರ್, ೮೦೦ ಮೀಟರ್ ೧೫೦೦, ೩೦೦೦, ೫೦೦೦ ಮತ್ತು ೧೦೦೦೦ ಮೀ. ಓಟ ನಡೆಯಲಿದೆ. ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವೆಲಿನ್ ಥ್ರೋ, 110 ಮತ್ತು 100 ಮೀ ಹರ್ಡರ್ಲ್, 4*100 ,4*400 ಮೀಟರ್ ರಿಲೇ ಓಟದ ಸ್ಪರ್ಧೆಗಳು ನಡೆಯಲಿವೆ. ಫುಟ್ಬಾಲ್, ಖೋ ಖೋ, ಕಬಡ್ಡಿ, ವಾಲಿಬಾಲ್ ಥ್ರೋಬಾಲ್ ಮತ್ತು ಯೋಗ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಧರಣಿ ನಿರತರನ್ನು ವಶಕ್ಕೆ ಪಡೆದ ಪೊಲೀಸರು
ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಈ ಕ್ರೀಡಾಕೂಟವು ಮುಕ್ತ ಕ್ರೀಡಾಕೂಟವಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಭಟ್ಕಳ ತಾಲೂಕಿನ ನಿವಾಸಿಯಾಗಿರಬೇಕು. ಭಾಗವಹಿಸುವವರಿಗೆ ವಯಸ್ಸಿನ ನಿರ್ಬಂಧನೆ ಇಲ್ಲ. ಒಬ್ಬರಿಗೆ ಒಂದು ಗುಂಪಿನ ಸ್ಪರ್ಧೆಯಲ್ಲಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ. ಭಾಗವಹಿಸುವ ಕ್ರೀಡಾಪಟುಗಳು ಭಾಗವಹಿಸುವ ದಿನದಂದು ಬೆಳಿಗ್ಗೆ ೯ ಗಂಟೆಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ೩೦೦೦, ೫೦೦೦ ಮತ್ತು ೧೦೦೦೦ ಮೀಟರ್ ಓಟ ಸ್ಪರ್ಧೆಯನ್ನು ಅಂದು ಬೆಳಿಗ್ಗೆ ೯ ಗಂಟೆಗೆ ನಡೆಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಟ್ಕಳ ತಾಲೂಕಿನ ಸಾರ್ವಜನಿಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಸಬಲೀಕರಣ ಇಲಾಖೆಯ ತಾಲೂಕು ಸಂಯೋಜಕ ನಾಗರಾಜ ಪಟಗಾರ ತಿಳಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ ೩೬ ಜನ