ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾಮದ ಹೆಜ್ಜಲು ಪ್ರದೇಶದಲ್ಲಿ ಜಾಗ ಸಂಬಂಧಿತ ವಿವಾದ (land dispute) ನ್ಯಾಯಾಲಯದಲ್ಲಿ ಪ್ರಚಲಿತದಲ್ಲಿರುವ ನಡುವೆಯೇ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸುಜಾತಾ ರವಿ ಗೊಂಡ (39) ಅವರು ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಅವರ ಪತಿ ರವಿ ನಾಗಪ್ಪ ಗೊಂಡ ಹಾಗೂ ಅಣ್ಣ ಶಿವರಾಮ ನಾಗಪ್ಪ ಗೊಂಡ ದನದ ಕೊಟ್ಟಿಗೆಯ ಬಳಿ ಕೆಲಸ ಮಾಡುತ್ತಿದ್ದ ವೇಳೆ, ಜಾಗದ ಪ್ರಕರಣವನ್ನು (land dispute) ವಾಪಸ್ ಪಡೆಯುವಂತೆ ಒತ್ತಾಯಿಸಿ ಆರೋಪಿತರು ಏಕಾಏಕಿ ದಾಳಿ ನಡೆಸಿದ್ದಾರೆ.
ಇದನ್ನು: Sankranthi/ ಶ್ರೀವಲ್ಲಿಯಲ್ಲಿ ಸಂಕ್ರಾಂತಿ ಸಂಭ್ರಮ
ಆರೋಪಿತರು ಬುಲೆರೋ ವಾಹನದ ಗ್ಲಾಸ್‌ನ್ನು ಒಡೆದು, ರಾಡಿನಿಂದ ಕಣ್ಣಿನ ಮೇಲೆ ಹೊಡೆದು ತೀವ್ರ ರಕ್ತಗಾಯಪಡಿಸಿದ್ದಲ್ಲದೆ, ಬಳಿಕ ಕಲ್ಲಿನಿಂದ ತಲೆಗೆ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: Complaint/ ಬಸ್ಸಿನಿಂದ ಇಳಿಯುತ್ತಿದ್ದ ಮಹಿಳೆ ಬಿದ್ದು ಗಾಯ: ಬಸ್ ಚಾಲಕನ ವಿರುದ್ಧ ದೂರು
ಘಟನೆ ತಡೆಯಲು ಮುಂದಾದ ಸುಜಾತಾ ಗೊಂಡ ಅವರನ್ನು ದೂಡಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಪ್ರಕರಣ ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಆರೋಪವೂ ದೂರಿನಲ್ಲಿ ಇದೆ.
ವಿಡಿಯೋ ಸಹಿತ ಇದನ್ನು ಓದಿ: Shedabari/ ಶೇಡಬರಿ ಜಾತ್ರೆಗೆ ಚಾಲನೆ
ಹಲ್ಲೆಯಿಂದ ಗಾಯಗೊಂಡ ಶಿವರಾಮ ನಾಗಪ್ಪ ಗೊಂಡ (೫೦) ಅವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ (Kundapura) ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರವಿ ನಾಗಪ್ಪ ಗೊಂಡ (೪೨) ಹಾಗೂ ಸುಜಾತಾ ರವಿ ಗೊಂಡ ಸೇರಿದಂತೆ ಇತರರಿಗೆ ಭಟ್ಕಳದ (Bhatkal) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನು ಓದಿ: Bhatkal/ ರಾಗಿ ಗಂಜಿಯಲ್ಲಿ ಇಲಿಪಾಷಾಣ ಸೇರಿಸಿ ಕುಡಿದ!
ಈ ಪ್ರಕರಣಕ್ಕೆ ಸಂಬಂಧಿಸಿ ಹೆಜ್ಜಲು–ಮಾರುಕೇರಿ ನಿವಾಸಿಗಳಾದ ಮಾದೇವ ಮಂಜು ಗೊಂಡ, ನಾರಾಯಣ ಮಂಜು ಗೊಂಡ, ಸದಾನಂದ ನಾಗಪ್ಪ ಗೊಂಡ, ನಾಗಪ್ಪ ಸಣ್ಣು ಗೊಂಡ ಹಾಗೂ ಅನಂತ ತಿಮ್ಮಪ್ಪ ಗೊಂಡ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ: Sankranti/ ಭಟ್ಕಳದಲ್ಲಿ ಸಂಕ್ರಾಂತಿ ಸಡಗರ



