ಭಟ್ಕಳ ಡೈರಿ ವರದಿ

ಭಟ್ಕಳ: ಆರೋಗ್ಯ ಸಮಸ್ಯೆಯಿಂದಾಗಿ (illness) ಕಳೆದ ಸುಮಾರು ಇಪ್ಪತ್ತು ದಿನಗಳಿಂದ ಭಟ್ಕಳ (Bhatkal) ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಗಮನಿಸಿದ್ದು, ಭಟ್ಕಳ ನಗರ ಪೊಲೀಸ್ ಠಾಣೆ (town police station) ಪೊಲೀಸರು ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ (government hospital) ದಾಖಲಿಸಿದ್ದಾರೆ. ಇದೀಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬದವರನ್ನು ಪತ್ತೆಹಚ್ಚಲು (identification) ಸಾರ್ವಜನಿಕರ ಸಹಕಾರ ಕೋರಲಾಗಿದೆ.

fishermen/ ಸಮುದ್ರ ಮಧ್ಯದಲ್ಲಿ ಸಿಲುಕಿದ ಮುರುಡೇಶ್ವರದ ೪ ಮೀನುಗಾರರು 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ತನ್ನ ಹೆಸರು ಶಕಿಲಾಲ್ ಎಂದು ತಿಳಿಸಿದ್ದು, ತಂದೆಯ ಹೆಸರು ದುಕಾನೌ ರಾವ್ ಹಾಗೂ ತಾಯಿಯ ಹೆಸರು ಸೋಜಿಬಾಹಿ ಎಂದು ಹೇಳಿದ್ದಾರೆ. ಸಹೋದರರ ಹೆಸರುಗಳು ಜಿಸೋ, ಬಾಬುಲಾಲ್ ಹಾಗೂ ಬಗರ್ ಎಂದು ತಿಳಿಸಿದ್ದಾರೆ. ತಾವು ಬಿಹಾರ ರಾಜ್ಯದ ಬಲ್ರಾಮಪುರ ಜಿಲ್ಲೆಯ ಅಂಬಿಕಾಪುರ ತಾಲೂಕಿನವರು ಎಂದು ಹೇಳಿಕೊಂಡಿದ್ದಾರೆ.

Special train/ ಕೊಂಕಣ ಮಾರ್ಗದಲ್ಲಿ ವಿಶೇಷ ರೈಲು: ಮುರುಡೇಶ್ವರ, ಕುಮಟಾದಲ್ಲೂ ನಿಲುಗಡೆ

ಶಕಿಲಾಲ್ ಅವರು ಮೂರ್ನಾಲ್ಕು ಜನರೊಂದಿಗೆ ಮೀನುಗಾರಿಕೆ ಬೋಟ್‌ನಲ್ಲಿ ಕೆಲಸ ಮಾಡಲು ಬಂದಿದ್ದರು ಎನ್ನಲಾಗಿದ್ದು, ಈ ವೇಳೆ ತಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ. ಆರೋಗ್ಯ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ತಮ್ಮ ಕುಟುಂಬದವರನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಟ್ಕಳ ಬಂದರು, ತೆಂಗಿನಗುಂಡಿ ಬಂದರು, ಅಳ್ವೇಕೋಡಿ ಬಂದರು, ಹೊನ್ನಾವರ ಬಂದರು ಸೇರಿದಂತೆ ಉತ್ತರ ಕನ್ನಡ (Uttara Kannada) ಹಾಗೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೀನುಗಾರರು ಈ ವ್ಯಕ್ತಿಯನ್ನು ಗುರುತಿಸಲು ಮತ್ತು ಅವರ ಕುಟುಂಬದವರನ್ನು ಪತ್ತೆಹಚ್ಚಲು (identification) ಸಹಕರಿಸುವಂತೆ ಮನವಿ ಮಾಡಲಾಗಿದೆ.

Bharat Jodo/ ಭಟ್ಕಳದಲ್ಲಿ ಭಾರತ ಜೋಡೋ ಮಾಹಿತಿ ಕಾರ್ಯಾಗಾರ 

ಮಾಹಿತಿ ಇದ್ದರೆ ಸಂಪರ್ಕಿಸಿ:

📞 ಭಟ್ಕಳ ನಗರ ಪೊಲೀಸ್ ಠಾಣೆ – ಸಿಪಿಐ: 9480805269

📞 ಭಟ್ಕಳ ಸರ್ಕಾರಿ ಆಸ್ಪತ್ರೆ: 7551119988

📞 ಸಮಾಜ ಸೇವಕ ಮಂಜು ನಾಯ್ಕ: 9632606061/ 81975 84848

Coastal weather forecast/ ಕರಾವಳಿಯ ಹವಾಮಾನ ಮುನ್ಸೂಚನೆ: ಆ ೨೬ರಿಂದ ಕರಾವಳಿಯಲ್ಲಿ ಮಳೆ ಕ್ಷೀಣ 

ಈ ವ್ಯಕ್ತಿಯನ್ನು ಗುರುತಿಸುವವರು ಅಥವಾ ಅವರ ಕುಟುಂಬ ಹಾಗೂ ಸಂಬಂಧಿಕರ ಕುರಿತು ಯಾವುದೇ ಮಾಹಿತಿ ಹೊಂದಿರುವವರು ಮೇಲಿನ ದೂರವಾಣಿ ಸಂಖ್ಯೆಗಳ ಮೂಲಕ ತಕ್ಷಣ ಸಂಪರ್ಕಿಸುವಂತೆ ಕೋರಲಾಗಿದೆ. ಈ ಮಾಹಿತಿಯನ್ನು ವಾಟ್ಸಾಪ್ (WhatsApp), ಫೇಸ್ಬುಕ್ (Facebook) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (social media) ಸಾಧ್ಯವಾದಷ್ಟು ಹಂಚಿಕೊಳ್ಳುವ ಮೂಲಕ ಶಕಿಲಾಲ್ ಅವರ ಕುಟುಂಬವನ್ನು ಪತ್ತೆಹಚ್ಚಲು ಸಹಕರಿಸಿ. ನಿಮ್ಮ ಒಂದು ಹಂಚಿಕೆ ಅವರ ಕುಟುಂಬದವರನ್ನು ತಲುಪಿಸಬಹುದು.

BJP protest/ ಸಚಿವ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹ