ಭಟ್ಕಳ: ಎರಡು ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ (bike collision) ನಾಲ್ವರು ಗಾಯಗೊಂಡ ಘಟನೆ ಭಟ್ಕಳ (Bhatkal) ತಾಲೂಕಿನ ಕಿತ್ರೆ ಕ್ರಾಸ್ ಬಳಿ ಫೆ ೨೨ರಂದು ರವಿವಾರ ಮಧ್ಯಾಹ್ನ ೧.೧೫ರ ಸುಮಾರಿಗೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದಿಂದ ಕುಂಟವಾಣಿಗೆ ತೆರಳುತ್ತಿದ್ದ ಕುಂಟವಾಣಿಯ ಗುಡಿಹಿತ್ಲು ನಿವಾಸಿ, ಕೃಷಿಕ ಮಂಜುನಾಥ ಶೇಷಾ ಶೆಟ್ಟಿ (೫೨) ಬೈಕ್ ಮತ್ತು ತಲಾಂದ ನಿವಾಸಿ, ಕೂಲಿ ಕಾರ್ಮಿಕ ವಿಜಯ ತಂದೆ ನಾರಾಯಣ ಗೊಂಡ (೨೮) ಕಿತ್ರೆಯಿಂದ ಭಟ್ಕಳ ಕಡೆಗೆ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿಯಾಗಿವೆ (bike collision). ಇಬ್ಬರೂ ಬೈಕ್ ಸವಾರರು ಸೇರಿದಂತೆ ವಿಜಯ ಗೊಂಡ ಬೈಕಿನಲ್ಲಿ ಕುಳಿತಿದ್ದ ತಲಾಂದ ಗ್ರಾಮದ ಕೂಲಿ ಕಾರ್ಮಿಕ ಕಿರಣ ಹನುಮಂತ ನಾಯ್ಕ (೨೬) ಮತ್ತು ಮಂಜುನಾಥ ಶೆಟ್ಟಿ ಬೈಕಿನಲ್ಲಿದ್ದ ಅವರ ಮಗಳು ಭೂಮಿಕಾ (೧೯) ಗಾಯಗೊಂಡಿದ್ದಾರೆ.
painting/ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ
ಮಂಜುನಾಥ ಶೆಟ್ಟಿಯವರ ಎಡ ಕೈ ಮತ್ತು ತುಟಿಗೆ ಹಾಗೂ ಅವರ ಮಗಳಿಗೆ ಬಲ ಕೈ ಕಿರು ಬೆರಳಿಗೆ ಗಾಯಗಳಾಗಿವೆ. ಅಲ್ಲದೆ ವಿಜಯ ಗೊಂಡ ಅವರಿಗೆ ತಲೆಗೆ, ಬಲಗೆನ್ನೆಗೆ, ಮೂಗು, ತುಟಿ ಮತ್ತು ಬಲ ಕಣ್ಣಿನ ಹತ್ತಿರ ಗಾಯಗಳಾಗಿದ್ದರೆ, ಹಿಂಬದಿ ಸವಾರ ಕಿರಣ ನಾಯ್ಕ ಇವರ ಬಲ ಕಾಲಿನ ಪಾದದ ಹತ್ತಿರ ಪೆಟ್ಟಾಗಿದೆ. ವಿಜಯ ಗೊಂಡ ಅತೀವೇಗ ಮತ್ತು ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ್ದರಿಂದ ಅಪಘಾತ ನಡೆದಿದೆ ಎಂದು ಮಂಜುನಾಥ ಶೆಟ್ಟಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Canter collision/ ಕ್ಯಾಂಟರ್ ಡಿಕ್ಕಿಯಾಗಿ ಒಬ್ಬ ಸಾವು, ಇಬ್ಬರಿಗೆ ಗಾಯ



