ಗೋಕರ್ಣ (Gokarna) : ತಾನು ಕೆಲಸ ಮಾಡುತ್ತಿದ್ದ ಕೆಫೆಯಲ್ಲಿಯೇ ವೇಟರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಸ್ಸಾಂ (Assam) ಮೂಲದ ಪಾಪು ಥಾಪಾ (೨೦) ಸಾವಿಗೆ ಶರಣಾದ ಯುವಕ. ಇವರು ಗೋಕರ್ಣದ ದುಬ್ಬನಶಶಿ ಗ್ರಾಮದ ದಿ ಸ್ಪೇಸ್ ಕೆಫೆಯಲ್ಲಿ ವೇಟರ್ ಆಗಿದ್ದ. ನಿನ್ನೆ ನ.೨ರಂದು ಬೆಳಿಗ್ಗೆ ೫ ರಿಂದ ೬.೩೦ರ ಒಳಗಿನ ಅವಧಿಯಲ್ಲಿ ಕೆಫೆ ಆವರಣದಲ್ಲಿ ಜಂತಿಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಗೋಕರ್ಣ (Gokarna) ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸಾವು ತಂದ ಬೈಕ್ ಟಯರ್ ಪಂಕ್ಚರ್ !