ಕುಂದಾಪುರ: ತಾಲೂಕಿನ ಶ್ರೀ ಕ್ಷೇತ್ರ ಹಾಲಾಡಿಯ (Haladi) ಶ್ರೀ ಆದಿ ಮರಳುಚಿಕ್ಕು ದೈವಸ್ಥಾನದ ಹಾಲುಹಬ್ಬ ಹಾಗೂ ಗೆಂಡೋತ್ಸವದ ಪ್ರಯುಕ್ತ ಜನವರಿ ೨೧ರಂದು ರಾತ್ರಿ ೧೦ಕ್ಕೆ ‘ಕಲಿಯುಗದ ಮಾಯಾಗಾರ ಪಂಜುರ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಂಜೇಶ್ವರದ ಶಾರದಾ ಅರ್ಟ್ಸ್ ತಂಡದ ಐಸಿರಿ ಕಲಾವಿದರು ಅಭಿನಯಿಸುವ ಈ ನಾಟಕದಲ್ಲಿ ತುಳುನಾಡ ರಂಗ ಬೊಳ್ಳಿ ರವಿಕಾಮಕುಂಬ, ತುಳುನಾಡ ರಂಗಭೂಷಣ ಮಷ್ಪರಾಜ್ ಬೊಳ್ಳಾರ್ ಮತ್ತು ಅನಿಲ್ ರಾಜ್ ಉಪ್ಪಳ, ಅಶೋಕ್ ಬೇಕೂರು ಅಭಿನಯಿಸುತ್ತಿದ್ದು, ‘ಸು ಫ್ರಮ್ ಸೋ’ ಚಲನಚಿತ್ರ ನಿರ್ದೇಶಕ ಜೆ ಪಿ ತುಮಿನಾಡು ಮತ್ತು ಮೈಮ್ ರಾಮದಾಸ್ ಅವರ ನಿರ್ದೇಶನವಿದೆ. ಹಾಲಾಡಿ (Haladi) ಮೂಲದ ಹೋಟೆಲ್ ಉದ್ಯಮಿ ಕವನ ನರಸಿಂಹ ಶೆಟ್ಟಿ ಈ ನಾಟಕವನ್ನು ಆಯೋಜಿಸಿದ್ದಾರೆ.

ಇದನ್ನು ಓದಿ: Instagram ಖಾತೆಯಲ್ಲಿ ಮಹಿಳೆಗೆ ಬರುತ್ತಿದೆ ಅಶ್ಲೀಲ ಕಾಮೆಂಟ್

ಇದಕ್ಕೂ ಮೊದಲು ರಾತ್ರಿ ೭ ಗಂಟೆಯಿಂದ ಬಿದ್ಕಲ್ ಕಟ್ಟೆ ಹವ್ಯಾಸಿ ಕಲಾವಿದರಿಂದ ಪೌರಾಣಿಕ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಇದನ್ನು ಓದಿ: ration/ ಪಡಿತರ ಅಕ್ರಮ ಸಾಗಾಟ: ಒಬ್ಬ ವಶಕ್ಕೆ

ಜ ೨೦ರಂದು  ಮಂಗಳವಾರ ಸಂಜೆ ಗಂಟೆ ೬ರಿಂದ ಶ್ರೀ ಆದಿಮರಳುಚಿಕ್ಕು ದೈವಕ್ಕೆ ಪಂಚವಿಂಶತಿ ಕಲಶ ಸ್ಥಾಪನಾಪೂರ್ವಕ ಪ್ರಧಾನ ಕಲಾತತ್ವ ಹೋಮ ನಡೆಯಲಿದೆ.  ಜ ೨೧ರಂದು ಬುಧವಾರ ಬೆಳಿಗ್ಗೆ ಗಂಟೆ ೯ರಿಂದ ಶ್ರೀ ನಾಗ ದೇವರಿಗೆ ನವಕ ಪ್ರದಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಶ್ರೀ ಆದಿಮರಳುಚಿಕ್ಕು ದೈವಕ್ಕೆ ಕಲಶಾಭಿಷೇಕಪೂರ್ವಕ ಮಹಾಪೂಜೆ ಜರುಗುವುದು. ಮಧ್ಯಾಹ್ನ ಗಂಟೆ ೧ರಿಂದ “ಅನ್ನಸಂತರ್ಪಣೆ” ಹಮ್ಮಿಕೊಳ್ಳಲಾಗಿದೆ. ರಾತ್ರಿ ಗಂಟೆ ೧೨ಕ್ಕೆ ಗೆಂಡಸೇವೆ ನಡೆಯಲಿದೆ.

ಇದನ್ನು ಓದಿ: ration/ ಪಡಿತರ ಅಕ್ರಮ ಸಾಗಾಟ: ಒಬ್ಬ ವಶಕ್ಕೆ

ಜ ೨೨ರಂದು ಗುರುವಾರ ಬೆಳಿಗ್ಗೆ ೩ ಗಂಟೆಗೆ ಸ್ವಾಮಿ ಸೇವೆ, ನಾಗನಿಗೆ ಹಾಲಿಟ್ಟು ಸೇವೆ. ಬೆಳಿಗ್ಗೆ ೪ ಗಂಟೆಗೆ ಡಮರು ಸೇವೆ, ಮಧ್ಯಾಹ್ನ ಗಂಟೆ ೧೨ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ ಮಾಡಲಾಗುವುದು ಎಂದು ಅಧ್ಯಕ್ಷ ಡಾ  ಶ್ರೀನಿವಾಸ ಶೆಟ್ಟಿ, ಹಾಲಾಡಿ, ಕುದ್ರುಮನೆ ಮತ್ತು ಕಾರ್ಯದರ್ಶಿ ಉದಯ ಕುಮಾರ ಶೆಟ್ಟಿ, ಕೊಯ್ಕಾಡಿಮನೆ, ಆದಿಮರಳುಚಿಕ್ಕು, ಹಾಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: Car crash/ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಬಾಲಕ, ಯುವಕ ದುರ್ಮರಣ