ಭಟ್ಕಳ: ಘೋಷಿತ ಭಟ್ಕಳ ನಗರಸಭೆಗೆ (Bhatkal Municipal Council) ಸೇರ್ಪಡೆಗೊಳ್ಳಲು ಹೆಬಳೆ ಗ್ರಾಮ ಪಂಚಾಯತಿ ವಿರೋಧ ವ್ಯಕ್ತಪಡಿಸಿದೆ. ೨೦೨೪ರ ಫೆ ೨೦ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿ ಈ ಪ್ರಸ್ತಾವನೆಯನ್ನು ಬಹುಮತದಿಂದ ವಿರೋಧಿಸಲಾಗಿತ್ತು. ಅಂದು ಹಾಜರಿದ್ದ ೨೪ ಸದಸ್ಯರಲ್ಲಿ ಎಂಟು ಸದಸ್ಯರು ಮಾತ್ರ ನಗರಸಭೆ ಆಗುವ ಬಗ್ಗೆ ಒಪ್ಪಿಗೆಯನ್ನು ಸೂಚಿಸಿದ್ದು, ೧೬ ಜನ ಸದಸ್ಯರು ನಗರಸಭೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಬಿಜೆಪಿ (BJP) ಜಿಲ್ಲಾ ಕಾರ್ಯದರ್ಶಿ ಮತ್ತು ಹೆಬಳೆ ಗ್ರಾ ಪಂ ಸದಸ್ಯ ಸುಬ್ರಾಯ ದೇವಡಿಗ ಹೇಳಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನಗರಸಭೆ ಬೇಡ ಎನ್ನುವುದಕ್ಕೂ ಹಲವು ಕಾರಣಗಳಿವೆ. ಹೆಬಳೆ ಗ್ರಾಮ ಪಂಚಾಯತಿ ಈಗಲೂ ಕೂಡ ಶೇಕಡ ೫೦ರಷ್ಟು ಕೃಷಿಯನ್ನು ಅವಲಂಬಿಸಿದೆ. ಶೇಕಡಾ ೯೦ರಷ್ಟು ಜನ ಕಾರ್ಮಿಕರಿದ್ದಾರೆ. ಇವರೆಲ್ಲರೂ ಏಳು-ಎಂಟು ಕಿಲೋ ಮೀಟರ್ ಭಟ್ಕಳಕ್ಕೆ (Bhatkal) ಬಂದು ಕೆಲಸ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ನಮಗೆ ಗ್ರಾಮ ಪಂಚಾಯತಿ ಉತ್ತಮವೆಂದು ನಾವುಗಳು ಸಭೆಯಲ್ಲಿ ತೀರ್ಮಾನ ಮಾಡಿದೆವು. ಭಟ್ಕಳ ನಗರಸಭೆಗೆ (Bhatkal Municipal Council) ಸೇರ್ಪಡೆ ಆದಲ್ಲಿ ನಮ್ಮ ಮಕ್ಕಳಿಗೆ ಗ್ರಾಮೀಣ ಕೃಪಾಂಕವೂ ಹೋಗುತ್ತದೆ ಎಂದರು.
ಇದನ್ನೂ ಓದಿ: bhatkal bjp pressmeet/ ಸಚಿವ ಮಂಕಾಳ ವೈದ್ಯರಿಂದ ಹಿಂದೂಗಳಿಗೆ ಅನ್ಯಾಯ: ಸುನೀಲ ನಾಯ್ಕ ಆರೋಪ
ಸರ್ಕಾರಕ್ಕೆ ಹೋದ ಪ್ರಸ್ತಾವನೆಯಲ್ಲಿ ಅಧ್ಯಕ್ಷರ ಸಹಿ ಇಲ್ಲ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿದ ಸಿಹಿ ಪಡೆದು ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಮತ್ತು ಸಚಿವರ (Minisiter) ಒತ್ತಡದಿಂದ ಮಾಹಿತಿಯನ್ನು ಕಳಿಸಿಕೊಡಲಾಗಿದೆ. ಯಾವುದರಲ್ಲಿಯೂ ಸಹಿತ ಅಧ್ಯಕ್ಷರ ಸಹಿ ಇಲ್ಲ ಎಂದ ಅವರು, ಜಾಲಿ ಪಟ್ಟಣ ಪಂಚಾಯತಿಯಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ನಗರಸಭೆ ಸೇರಿದ ನಂತರ ಅಲ್ಲಿನ ಸುತ್ತಮುತ್ತಲಿನ ಹಿಂದೂಗಳು ಎರಡನೇ ದರ್ಜೆಯ ನಾಗರಿಕರಾಗಿ ಬದುಕುವ ಪರಿಸ್ಥಿತಿ ಬರುತ್ತದೆ. ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳೇ ಇರುವುದಿಲ್ಲ. ತಂಜೀಮ್ (Tanzeem) ಪ್ರತಿನಿಧಿಗಳು ಬೆಟ್ಟು ಮಾಡಿ ತೋರಿಸುವಂತಹ ಪ್ರತಿನಿಧಿಗಳೇ ಆಯ್ಕೆಯಾಗುತ್ತಾರೆ. ಅವರೇ ಅಧ್ಯಕ್ಷ-ಉಪಾಧ್ಯಕ್ಷರಾಗುತ್ತಾರೆ. ತಾರತಮ್ಯ ಹಿಂದುಗಳ ಮೇಲೆ ಮುಂದೆ ನಡೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: Bhatkal Rural Police/ ಅಡಿಕೆ ಕಳ್ಳತನ ಆರೋಪಿಗಳ ಬಂಧನ
ನಗರಸಭೆಗೆ ಬೇಕಾಗಿದ್ದು ಕನಿಷ್ಠ ೫೦ ಸಾವಿರ ಜನಸಂಖ್ಯೆ. ಭಟ್ಕಳವನ್ನು ತಂಜೀಮ್ ಪಾದದ ಕೆಳಗೆ ಇಡುವ ಕೆಲಸವನ್ನು ಸಚಿವ ಮಂಕಾಳ ವೈದ್ಯ (Mankal Vaidya) ಮಾಡಿದ್ದಾರೆ. ಸೋಮವಾರ ದಿವಸ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಈ ಪ್ರಸ್ತಾವನೆಯನ್ನು ಹಿಂದೆ ತೆಗೆದುಕೊಳ್ಳಬೇಕು. ಹೆಬಳೆ ಗ್ರಾಮ ಪಂಚಾಯಿತಿಯನ್ನು ಗ್ರಾಮ ಪಂಚಾಯತಿಯಾಗಿ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಮನವಿ ನೀಡುತ್ತೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: bikes on fire/ ಒಂದೇ ಮನೆಯ 3 ಬೈಕ್ ತಿಂಗಳೊಳಗೆ ಭಸ್ಮ, ಮನೆಗೂ ಹಾನಿ



