ಭಟ್ಕಳ: ಇಲ್ಲಿನ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಹಿಂದಿನ ಪಿಎಸೈ ವಿರುದ್ಧ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಿಗೆ (ಐಜಿಪಿ) ಅವರಿಗೆ ದೂರು (complaint) ನೀಡಲಾಗಿದೆ. ಭಟ್ಕಳದ ಹಿಂದೂ ಜಾಗರಣಾ ವೇದಿಕೆ ದೂರು ನೀಡಿದ್ದು, ಈ ಹಿಂದೆ ಪಿಸೈ ಆಗಿದ್ದ ರನ್ನಗೌಡ ಪಾಟೀಲ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಗೋಕಳ್ಳರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಮಿಷಕ್ಕೆ ಒಳಗಾಗಿ ಗೊಕಳ್ಳರ ವಿರುದ್ಧ ದಾಖಲಿಸಿದ್ದ ಕಾಯ್ದೆಯನ್ನೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವಾಗ ಬದಲಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಕುರಿತು ಹಿಂದೂ ಜಾಗರಣಾ ವೇದಿಕೆ ಐಜಿಪಿಯವರಿಗೆ ದಾಖಲೆ ಸಹಿತ ದೂರು ದಾಖಲಿಸಿದೆ. ಇದನ್ನು ಗಂಭೀರಾಗಿ ಪರಿಗಣಿಸಿರುವ ಐಜಿಪಿ, ಸೂಕ್ತ ತನಿಖೆ ನಡೆಸುವಂತೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈಗಾಗಲೇ ಈ ಕುರಿತಂತೆ ಮೇಲಾಧಿಕಾರಿಗಳು ತನಿಖೆ ಆರಂಭಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.

Bike collided/ ಶಿರಾಲಿಯಲ್ಲಿ ಸೈಕಲ್ಲಿಗೆ ಬೈಕ್ ಡಿಕ್ಕಿ: ಸವಾರಿಬ್ಬರೂ ಆಸ್ಪತ್ರೆಗೆ

ದೂರಿನಲ್ಲೇನಿದೆ?: ಕಳೆದ ಮೇ ೨೪ರಂದು ಅಕ್ರಮ ಜಾನುವಾರು ಸಾಗಾಟ ಪ್ರಕರಣದಡಿ ೨೦೨೦ರ ಕಾಯ್ದೆಯಡಿ ದೂರು ದಾಖಲಾಗಿತ್ತು. ಇದರಲ್ಲಿ ಒಟ್ಟು ೧೯ ಜಾನುವಾರುಗಳು ಮತ್ತು ವಾಹನ ವಶಪಡಿಸಿಕೊಳ್ಳಲಾಗಿತ್ತು. ಆದರೆ, ಜೂ ೨೩ರಂದು ೧೯೬೦ರ ಕಾಯ್ದೆಯಡಿ ಕೋರ್ಟಿಗೆ ಚಾರ್ಜಶೀಟ್ ಸಲ್ಲಿಸಲಾಗಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ಒಟ್ಟು ೧೯ ಜಾನುವಾರುಗಳು ಮತ್ತು ವಾಹನವನ್ನು ಸಂಬಂಧಪಟ್ಟವರಿಗೆ ಬಿಟ್ಟುಕೊಡಲಾಗಿರುತ್ತದೆ. ಚಾರ್ಜಶೀಟ್ ಮಾಡಿದ ಪಿಎಸ್‌ಐ ರವರು ಯಾವುದೋ ಆಮಿಷಕ್ಕೆ ಒಳಗಾಗಿ ಈ ರೀತಿ ವಪಡಿಸಿಕೊಂಡ ವಾಹನವನ್ನು ಮತ್ತು ಪ್ರಾಣಿಗಳನ್ನು ಬಿಟ್ಟುಕೊಟ್ಟು ಗೋಕಳ್ಳರಿಗೆ ಅನೂಕೂಲವಾಗುವಂತೆ ಮಾಡಿದ್ದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

bike collision/ ಕಿತ್ರೆ ಕ್ರಾಸ್ ಬಳಿ ಬೈಕುಗಳ ಮುಖಾಮುಖಿಯಲ್ಲಿ ನಾಲ್ವರಿಗೆ ಗಾಯ

ಪಿಎಸ್‌ಐ ರನ್ನಗೌಡ ಪಾಟೀಲ್ ಇವರು ಆರೋಪಿಗಳಿಗೆ ಅನೂಕೂಲ ಮಾಡಿಕೊಡಲು ಹಣದ ಆಮಿಷಕ್ಕೆ ಒಳಗಾಗಿ & ಅಕ್ರಮವಾಗಿ ಗೋಸಾಗಾಟ ಮಾಡುವವರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಈ ರೀತಿ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆ- ೨೦೨೦ ನೇದನ್ನು ತೆಗೆದು ಹಾಕಿ ಚಾರ್ಜಶೀಟನ್ನು ಕೋರ್ಟಿಗೆ ಸಲ್ಲಿಸಲಾಗಿದೆ. ಆದ ಕಾರಣ ಪದೇ ಪದೇ ಅನ್ಯ ಕೋಮಿನವರ ಕಾನೂನು ಬಾಹಿರ ಕೆಲಸಗಳ ಹಣಕ್ಕೆ ಕೈ ಚಾಚಿ, ಹಿಂದುಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿ, ಅಶಾಂತಿಗೆ ಕಾರಣೀಕರ್ತರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಅಧಿಕಾರಿಗಳನ್ನು ಪುನಃ ಭಟ್ಕಳದಂತಹ ಸೂಕ್ಷ್ಮ ಪ್ರದೇಶಕ್ಕೆ ನೇಮಕ ಮಾಡಬಾರದು ಎಂದು ಹಿಂಜಾವೇ ಒತ್ತಾಯಿಸಿದೆ.

painting/ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ಇಂತಹ ಅಧಿಕಾರಿಗಳ ವಿರುದ್ಧ ಹಿಂದುಗಳು ಸಾಕಷ್ಟು ಬಾರಿ ಮನವಿ ನೀಡಿದ್ದು, ಪುನಃ ಪುನಃ ಈ ರೀತಿ ಮುಂದುವರಿದಲ್ಲಿ ಹಿಂದುಗಳು ಪ್ರತಿಭಟನೆಗಿಳಿಯಬೇಕಾಗುತ್ತದೆ ಎಂದು ಐಜಿಪಿಯವರಿಗೆ ಸಲ್ಲಿಸಿರುವ ದೂರಿನಲ್ಲಿ ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕ ನಾಗೇಶ ನಾರಾಯಣ ನಾಯ್ಕ ತಿಳಿಸಿದ್ದಾರೆ.

Canter collision/ ಕ್ಯಾಂಟರ್ ಡಿಕ್ಕಿಯಾಗಿ ಒಬ್ಬ ಸಾವು, ಇಬ್ಬರಿಗೆ ಗಾಯ