ಭಟ್ಕಳ: ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯ “ಧ್ಯಾನ ಕುಟೀರ”ದಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀರಾಮದೇವರ “ಪ್ರತಿಷ್ಠಾಪನ ವರ್ಧಂತ್ಯುತ್ಸವ” (vardhanthi utsav) ಸಮಾರಂಭವು ಧರ್ಮಸ್ಥಳದ (Dharmasthala) ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ೧೦೦೮ ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಮಾರ್ಚ್ ೪ರ ಬುಧವಾರ ನೆರವೇರಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ವರ್ಧಂತ್ಯುತ್ಸವ (vardhanthi utsav) ಕಾರ್ಯಕ್ರಮದ ಪ್ರಯುಕ್ತ ಅದೇ ದಿನ ಬೆಳಿಗ್ಗೆ ೭ ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ “ರಾಮತಾರಕ ಮಹಾಯಜ್ಞ” ನಡೆಯಲಿರುವುದು. ಬೆಳಿಗ್ಗೆ ಗಂಟೆ ೧೦ರಿಂದ ೧೨ರ ತನಕ ಭಕ್ತ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಗಂಟೆ ೧೨ರಿಂದ ಶ್ರೀ ಗಳಿಂದ ಆಶೀರ್ವಚನ ಮತ್ತು ಮಧ್ಯಾಹ್ನ ಗಂಟೆ ೧ರಿಂದ ಅನ್ನದಾಸೋಹ ನೆರವೇರಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

endosulfan/ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಆಶಾಕಿರಣ ಯೋಜನೆ ಆರಂಭ: ಭಟ್ಕಳದಲ್ಲಿ ೫೮೦ ಫಲಾನುಭವಿಗಳು