ಭಟ್ಕಳ(Bhatkal) : ಶಿವಮೊಗ್ಗದಲ್ಲಿ (Shivamogga) ನಡೆದ ೫ನೇ ಓಪನ್ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ (Karate Tournament)-೨೦೨೪ರಲ್ಲಿ ಭಟ್ಕಳದ ಶೋಟೋಕಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಕಟಾ ಮತ್ತು ಕುಮಿತೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿವಮೊಗ್ಗದ ನೆಹರು ಇಂಡೋರ್ ಸ್ಟೇಡಿಯಂನಲ್ಲಿ ನಡೆದ ೫ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಟ್ಕಳ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಈ ಪಂದ್ಯಾವಳಿಯಲ್ಲಿ ನೇಪಾಳ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಕಟಾ ವಿಭಾಗದಲ್ಲಿ ಅಲಂಕೃತ ವಿ. ನಾಯ್ಕ, ಗಾಯತ್ರಿ ವಿ., ಆದ್ಯ ಆರ್. ನಾಯ್ಕ, ದಿಯಾ ಸಿ. ನಾಯ್ಕ, ಸಿಂಧು ಎಸ್. ಅರೆರಾ, ಲಿಖಿತಾ ನಾಯ್ಕ, ತೇಜಸ್ ವಿ. ನಾಯ್ಕ, ಕೌಶಿಕ್ ನಾಯ್ಕ, ಬಿ.ವಿ. ರಾಹುಲ್, ಮಾನ್ವಿ ಟಿ. ನಾಯ್ಕ, ಭಾನ್ವಿ ಸಿ. ನಾಯ್ಕ ಚಿನ್ನದ ಪದಕಗಳನ್ನು (gold medal) ಬಾಚಿಕೊಂಡಿದ್ದಾರೆ. ಶ್ರೇಯಾ ಎಸ್. ನಾಯ್ಕ, ಮುಸ್ಕಾನ್ ಶೇಖ್ ಬೆಳ್ಳಿಯ ಪದಕ (silver medal) ಪಡೆದಿದ್ದಾರೆ. ಜಯನಿ ಮೊಗೇರ, ಪ್ರಾರ್ಥನಾ ಪಿ. ಶೇಟ್, ಪ್ರಣವ ವಿ. ನಾಯ್ಕ, ಅಬ್ದುಲ್ ವಹಾಬ್ ಕಂಚಿನ ಪದಕಗಳನ್ನು (bronze medal) ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಸೆಪ್ಟೆಂಬರ್ ೪ರಂದು ವಿವಿಧೆಡೆ ಅಡಿಕೆ ಧಾರಣೆ
ಕಟಾ ವಿಭಾಗದಲ್ಲಿ ಗಾಯತ್ರಿ ವಿ., ಜಯನಿ ಎನ್. ಮೊಗೇರ, ಆಧ್ಯಾ ಆರ್. ನಾಯ್ಕ, ಪ್ರಣವ ಎನ್. ನಾಯ್ಕ, ಭಾನ್ವಿ ಸಿ. ನಾಯ್ಕ ಚಿನ್ನದ ಪದಕ ಗೆದ್ದಿದ್ದಾರೆ. ಅಲಂಕೃತ ವಿ. ನಾಯ್ಕ, ಪ್ರಾರ್ಥನಾ ಪಿ. ಶೇಟ್, ಸಿಂಧು ಎಸ್. ಅರೆರಾ, ತೇಜಸ್ ವಿ. ನಾಯ್ಕ, ಬಿ.ವಿ.ರಾಹುಲ್, ಅಬ್ದುಲ್ ವಹಾಬ್, ಮಾನ್ವಿ ಟಿ. ನಾಯ್ಕ ಬೆಳ್ಳಿಯ ಪದಕ ಗೆದ್ದಿದ್ದಾರೆ. ಶ್ರೇಯಾ ಎಸ್. ನಾಯ್ಕ, ದಿಯಾ ಸಿ. ನಾಯ್ಕ, ಮುಸ್ಕಾನ ಶೇಖ್, ಕೌಶಿಕ ನಾಯ್ಕ ಕಂಚಿನ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ : ಶಿಷ್ಯವೇತನ, ಶಿಕ್ಷಕರ ನೇಮಕ ಮಂಜೂರಾತಿ ಪತ್ರ ವಿತರಣೆ
ಈ ಕ್ರೀಡಾಪಟುಗಳಿಗೆ ಶೋಟೊಕಾನ್ ಸಂಸ್ಥೆಯ ಅರ್ಯನ್ ನಾಯ್ಕ, ರಾಜಶೇಖರ ಗೌಡ, ಪ್ರವೀಣ ಎಚ್. ಆರ್., ವಿನೋದ ಗೊಂಡ, ಮಂಜು ದೇವಾಡಿಗ, ನಿಖಿತಾ ಖಾರ್ವಿ, ಅಂಜಲಿ ಕಾಮತ, ಸುರೇಶ ಮೊಗೇರ ತರಬೇತಿ ನೀಡಿ ಪಂದ್ಯಾಟಕ್ಕೆ ಅಣಿಗೊಳಿಸಿದ್ದರು.
ಇದನ್ನೂ ಓದಿ : ಸೇಫ್ ಲಾಕರ್ ಉದ್ಘಾಟನೆ