ಕುಮಟಾ (Kumta) : ಕೆಲಸ ಮಾಡಲು ಆಗುತ್ತಿಲ್ಲವೆಂದು ಕೊರಗುತ್ತಿದ್ದ ವೃದ್ಧನೋರ್ವ ಗೇರು ಮರಕ್ಕೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕುಮಟಾ (Kumta) ತಾಲೂಕಿನ ಹೊರಬಾಗ ಸುವರ್ಣಗದ್ದೆಯ ನಾರಾಯಣ ಮಾಸ್ತಿ ವೈದ್ಯ (೬೬) ಸಾವಿಗೆ ಶರಣಾದವರು. ಫೆ.೧೭ರಂದು ಮಧ್ಯಾಹ್ನ ೨.೩೦ ರಿಂದ ೩.೩೦ರ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ವಯಸ್ಸಾಗಿದ್ದರಿಂದ (Old age) ಯಾವುದೇ ಕೆಲಸ ಮಾಡಲು ಆಗದೇ ಕೊರಗುತ್ತಿದ್ದ ಇವರು ಅದೇ ವಿಷಯವನ್ನು  ಅಥವಾ ಇನ್ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ನೇಣು ಹಾಕಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮೃತರ ಮಗ ಪ್ರದೀಪ ಈ ಕುರಿತು ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (complaint) ದಾಖಲಿಸಿದ್ದಾರೆ.

ಇದನ್ನೂ ಓದಿ : accident/ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ