ಭಟ್ಕಳ: ಮುರ್ಡೇಶ್ವರ ದೇವಸ್ಥಾನದ (Murudeshwara Temple) ಹೆಸರನ್ನು ದುರುಪಯೋಗಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ (social media) `ಶ್ರೀ ಮುರ್ಡೇಶ್ವರ ಅದೃಷ್ಟ ಡ್ರಾ’ ಹೆಸರಿನಲ್ಲಿ ನಕಲಿ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡಿ, ಜನರಿಗೆ ವಂಚನೆ ಎಸಗಿದ ಆರೋಪಿಯನ್ನು ಸುಮಾರು ೧ ವರ್ಷದ ತನಿಖೆಯ ಬಳಿಕ ಮುರ್ಡೇಶ್ವರ ಪೊಲೀಸರು (Murdeshwar Police) ಬಂಧಿಸಿದ್ದಾರೆ (arrested).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೀದರ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಸಾಲಖನಗಾಂವ ನಿವಾಸಿ ನರಸಿಂಗ ವೆಂಕಟರಾವ ತಗರಖೇಡೆ (೩೨) ಬಂಧಿತ ಆರೋಪಿ. ಈತ ಮುರ್ಡೇಶ್ವರ ದೇವಸ್ಥಾನದ (Murudeshwara Temple) ಭಾವಚಿತ್ರ ಬಳಸಿ `ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ’ ಹೆಸರಿನ ನಕಲಿ ಕರಪತ್ರಗಳನ್ನು ಸೃಷ್ಟಿಸಿ, ನಕಲಿ ಫೇಸ್‌ಬುಕ್ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಖಾತೆಗಳ ಮೂಲಕ ಲಕ್ಕಿ ಡ್ರಾ (lucky draw) ನಡೆಯುತ್ತಿದೆ ಎಂದು ಸುಳ್ಳು ಪ್ರಚಾರ ನಡೆಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದನು ಎಂದು ಆರೋಪಿಸಲಾಗಿದೆ. ಈ ಸಂಬಂಧ ಮುರ್ಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಮದನ ಶೆಟ್ಟಿ ಅವರು ೨೦೨೫ರ ಆಗಸ್ಟ್ ೬ರಂದು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು (case filed).
NDPS act/ ಮಾದಕ ದ್ರವ್ಯ ಸೇವನೆ ಮಾಡಿದ ಐವರ ಬಂಧನ
ಪಿಎಸೈ ಹಣಮಂತ ಬಿರಾದಾರ ಮತ್ತು ಪಿಎಸೈ ಲೋಕನಾಥ ರಾಥೋಡ ನೇತೃತ್ವದ ವಿಶೇಷ ತಂಡ ರಾಜಸ್ಥಾನ (Rajasthan), ಮಹಾರಾಷ್ಟ್ರ (Maharashtra) ಹಾಗೂ ಬೀದರ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ೧೫ ದಿನಗಳ ನ್ಯಾಯಾಂಗ ಬಂಧನಕ್ಕೆ (judicial custody) ಒಪ್ಪಿಸಲಾಗಿದೆ.
Arrest/ ಭಟ್ಕಳದಲ್ಲಿ ಅಡಗಿದ್ದವನ ಬಂಧಿಸಿದ ಕುಂದಾಪುರ ಗ್ರಾಮೀಣ ಪೋಲಿಸರು


