ಭಟ್ಕಳ : ಇಲ್ಲಿನ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಭಟ್ಕಳ ಮಾರಿಜಾತ್ರೆ (Bhatkal Mari Jathre) ಜುಲೈ ೨೩ ಮತ್ತು ಆಗಸ್ಟ್ ೨೪ರಂದು ಜರುಗಲಿದ್ದು, ಜಾತ್ರೆ ಸಿದ್ಧತೆ ಆರಂಭಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚನ್ನಪಟ್ಟಣ ಹನುಮಂತದೇವರ ರಥೋತ್ಸವ ಬಿಟ್ಟರೆ ಆಷಾಢದಲ್ಲಿ ಜರುಗುವ ಈ ಮಾರಿಜಾತ್ರೆಯೇ ಇಲ್ಲಿನ ಬಹುದೊಡ್ಡ ಜಾತ್ರೆಯಾಗಿದೆ. ಈ ಭಟ್ಕಳ ಮಾರಿಜಾತ್ರೆಗೆ (Bhatkal Mari Jathre) ತಾಲೂಕಿನಿಂದಷ್ಟೇ ಅಲ್ಲದೇ, ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವಿಗೆ ಹರಕೆ ಅರ್ಪಿಸಿ ಪುನೀತರಾಗುತ್ತಾರೆ.
ಇದನ್ನು ಓದಿ: Best associate professor award/ ಡಾ ಭಾಗೀರಥಿ ನಾಯ್ಕ ಗೆ ಅತ್ಯುತ್ತಮ ಅಸೋಸಿಯೇಟ್ ಪ್ರೊಫೆಸರ್ ಪ್ರಶಸ್ತಿ
ಕಳೆದ ಆಷಾಢ ಮಾಸ ಹುಣ್ಣಿಮೆಯ ನಂತರದ ಪ್ರಥಮ ಮಂಗಳವಾರದಂದು ಅಂದರೆ ಜುಲೈ ೧೫ರಂದು ಮೂರ್ತಿ ತಯಾರಿಕೆಯ ಮರವನ್ನು ಧಾರ್ಮಿಕ ವಿಧಿವಿಧಾನಗಳಿಂದ ಕಡಿಯಲಾಗಿತ್ತು. ಶ್ರೀದೇವಿಯ ಪೂರ್ವ ಬಿಂಬ ರೂಪವನ್ನು ಮಂಗಳವಾರದಿಂದ ಶುಕ್ರವಾರದವರೆಗೆ ಅಂದರೆ ಜುಲೈ ೧೮ರವರೆಗೆ ಅದೇ ಜಾಗದಲ್ಲಿ ಕೆತ್ತನೆ ಮಾಡಿ, ಶುಕ್ರವಾರದಂದು ಮಾರಿಯ ತವರು ಮನೆ ಎಂದೇ ಕರೆಯುವ ಮಣ್ಕುಳಿಯ ಮಾರಿ ಗದ್ದುಗೆಗೆ ತೆಗೆದುಕೊಂಡು ಬರಲಾಗಿತ್ತು. ಅಲ್ಲಿಂದ ಇನ್ನೊಂದು ಮಂಗಳವಾರದವರೆಗೆ ಅಂದರೆ ಜುಲೈ ೨೨ರವರೆಗೆ ದೇಹದ ಅಂಗಾಗಗಳನ್ನು ರಚಿಸಿ ಪೂರ್ಣಗೊಳಿಸಲಾಗಿದೆ.
ಇದನ್ನು ಓದಿ: devotional music/ ಚಿತ್ರಾಪುರ ಶ್ರೀಮಠದಲ್ಲಿ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ
ಪೂರ್ಣಗೊಂಡ ಮೂರ್ತಿಗೆ ಜುಲೈ ೨೨ ಮಂಗಳವಾರ ಸಾಯಂಕಾಲ ಮಾರಿಗೆ ಬಣ್ಣ ಬಳಿದು, ಬಳೆ, ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ದೇವಿಗೆ ತೊಡಿಸಲಾಗುತ್ತದೆ. ಮಂಗಳವಾರ ರಾತ್ರಿ ಮಾರಿಮನೆ ಮುಖ್ಯಸ್ಥರ ಮನೆಯವರಿಂದ ಹಾಗೂ ಊರಿನವರಿಂದ ಪ್ರಥಮ ಪೂಜೆ ನೆರವೇರಲಿದೆ.
ಇದನ್ನು ಓದಿ: Snakes/ ಕಾಡಿನಿಂದ ಮನೆಗಳತ್ತ ಹಾವುಗಳು
ಜುಲೈ ೨೩ರ ಬುಧವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಮಾರಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಮಾರಿಗುಡಿಯಲ್ಲಿ (Marigudi) ಪ್ರತಿಷ್ಠಾಪಿಸಲಾಗುತ್ತದೆ. ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿವಸ ಪರ ಊರಿನವರು ಸೇವೆ ಸಲ್ಲಿಸಿ ಹಬ್ಬ ಆಚರಿಸಿದರೆ, ಎರಡನೇ ದಿವಸವಾದ ಗುರುವಾರ ಸ್ಥಳೀಯರು ಸೇವೆ ಸಲ್ಲಿಸಿ ಹಬ್ಬ ಆಚರಿಸುವುದು ಪ್ರತೀತಿ.
ಇದನ್ನು ಓದಿ: Sharabi river? ಶರಾಬಿ ನದಿ ಶುದ್ಧಗೊಳ್ಳುತ್ತಾ??
ಜುಲೈ ೨೪ರಂದು ಗುರುವಾರ ಸಂಜೆ ಮಾರಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಸುಮಾರು ೬ ಕಿ ಮೀ ದೂರದ ಜಾಲಿ ಸಮುದ್ರ ತೀರಕ್ಕೆ ಹೊತ್ತೊಯ್ದು ಧಾರ್ಮಿಕ ವಿಧಿವಿಧಾನದನ್ವಯ ಪೂಜೆ ಸಲ್ಲಿಸಿ ಕೊನೆಯಲ್ಲಿ ವಿಗ್ರಹವನ್ನು ಛಿದ್ರಗೊಳಿಸಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಮಾರಿ ಜಾತ್ರೆಗೆ ತೆರೆ ಬೀಳಲಿದೆ.
ಮಾರಿಯಮ್ಮನ ಮೂರ್ತಿಗೆ ಬಣ್ಣ ಬಳಿಯುತ್ತಿರುವ ವಿಡಿಯೋವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನು ಓದಿ: Tragic incident/ ಜೋಕಾಲಿ ಆಡುವಾಗ ಕುತ್ತಿಗೆಗೆ ಬಿಗಿದ ಶಾಲು, ಮುಂದೇನಾಯ್ತು ?



