ಭಟ್ಕಳ ಡೈರಿ ವರದಿ

ಉಡುಪಿ/ಕಾರವಾರ: ಕರ್ನಾಟಕದ (Karnataka) ಕರಾವಳಿ ಭಾಗದಲ್ಲಿ (coastal reason) ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳು (Rainfall subsides) ಕಂಡುಬಂದಿದ್ದು, ಸೆಪ್ಟೆಂಬರ್‌ ೧ರ ಬೆಳಿಗ್ಗೆ ೮ ಗಂಟೆಯವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ (Forecast).

fighting cancer/ ಕ್ಯಾನ್ಸರ್ ವಿರುದ್ಧ ಹೋರಾಡಿ ಕಾಲು ಉಳಿಸಿದ ವೈದ್ಯರ ಸಾಧನೆ

ಕಾಸರಗೋಡು (Kasaragod) ಸೇರಿದಂತೆ ಉತ್ತರ ಕನ್ನಡ (Uttara Kannada), ಉಡುಪಿ (Udupi) ಹಾಗೂ ದಕ್ಷಿಣ ಕನ್ನಡ (Dakshina Kannada) ಕರಾವಳಿ ಜಿಲ್ಲೆಗಳ (coastal districts) ಹಲವೆಡೆ ದಿನದ ಅವಧಿಯಲ್ಲಿ ಒಂದೆರಡು ಬಾರಿ ಸಣ್ಣ ಅವಧಿಯ ಸಾಮಾನ್ಯ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿಗೆ ಹೊಂದಿಕೊಂಡಿರುವ ಘಟ್ಟದ ಕೆಳಭಾಗಗಳಲ್ಲಿ ತುಸು ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದರೂ, ಸದ್ಯದ ಮುನ್ಸೂಚನೆಯಂತೆ ವ್ಯಾಪಕ ಅಥವಾ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದೆ.

Devotional Songs/ ಕುಂದಾಪುರದಲ್ಲಿ ಜನಮನ ಸೆಳೆದ ಗುರುರಾಯರ ಭಕ್ತಿ ಗಾನಾಮೃತ

ಮುಂದಿನ ೧೦ ದಿನಗಳಲ್ಲಿಯೂ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಬದಲು ಅಲ್ಲಲ್ಲಿ ದಿನಕ್ಕೆ ಒಂದೆರಡು ಸಣ್ಣ ಅವಧಿಯ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದ್ದು, ಮೋಡ-ಬಿಸಿಲಿನ ನಡುವೆ ಸ್ಥಳೀಯವಾಗಿ ಮಳೆಯಾಗಬಹುದು (weather).

Bolero collision/ ಮುರುಡೇಶ್ವರದಲ್ಲಿ ಬೊಲೆರೋ ಡಿಕ್ಕಿ: ಸ್ಕೂಟಿ ಸವಾರನಿಗೆ ಗಾಯ

ಇದೇ ವೇಳೆ, ಭಾರತೀಯ ಹವಾಮಾನ ಇಲಾಖೆ ಆಗಸ್ಟ್‌ ೩೧ರಂದು ಹೊರಡಿಸಿರುವ ಎಚ್ಚರಿಕೆಯಲ್ಲಿ ಕರಾವಳಿ ಕರ್ನಾಟಕಕ್ಕೆ ಸೆಪ್ಟೆಂಬರ್‌ ೧ರಂದು ಗುಡುಗು-ಮಿಂಚು ಹಾಗೂ ಬಲವಾದ ಮೇಲ್ಮೈ ಗಾಳಿಯ ಸಾಧ್ಯತೆ ಸೂಚಿಸಿದೆ. ಸೆಪ್ಟೆಂಬರ್‌ ೨ರಿಂದ ಮುಂದಿನ ದಿನಗಳಲ್ಲಿ ಈ ಎಚ್ಚರಿಕೆ ಇಲ್ಲ ಎಂದು ತಿಳಿಸಲಾಗಿದೆ (Forecast).

budget meeting/ ಭಟ್ಕಳ ತಾಲೂಕು ಪಂಚಾಯತಿಯ ಬಜೆಟ್ ಸಭೆ ಯಾವಾಗ ಗೊತ್ತಾ?