ಭಟ್ಕಳ: ಇಲ್ಲಿನ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (Anjuman college) ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR), ಮತದಾರರ ವಿವರಗಳ ಪರಿಶೀಲನೆ ಹಾಗೂ ಹೊಸ ಮತದಾರರ ನೋಂದಣಿ ಕುರಿತು ಜಾಗೃತಿ ಕಾರ್ಯಕ್ರಮ (Awareness Program) ಆಯೋಜಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮದಲ್ಲಿ ಮಾತನಾಡಿದ ಭಟ್ಕಳ (Bhatkal) ಕ್ಷೇತ್ರ ಶಿಕ್ಷಣ ಸಂಪನ್ಮೂಲ ವ್ಯಕ್ತಿ (BRP) ರಾಘವೇಂದ್ರ ಎಸ್ ಮಡಿವಾಳ, ದೇಶಾದ್ಯಂತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ, ನಿಖರ ಹಾಗೂ ನವೀಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಎಸ್ಐಆರ್ನ ಮಹತ್ವವನ್ನು (SIR awareness) ವಿವರಿಸಿದರು.
private vehicles/ ಖಾಸಗಿ ವಾಹನಗಳ ಮೇಲೆ ಕ್ರಮಕ್ಕೆ ಮುಂದಾದ ಸಾರಿಗೆ ಅಧಿಕಾರಿಗಳು
ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ (BMYF) ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಹಲ್ಲಾರೆ, ಪ್ರೊ ಬಿ ಎಚ್ ನದಾಫ್ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ ಡಿ ಎಸ್ ಪ್ರಭು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಮೊಹಮ್ಮದ್ ಯೂಸುಫ್ ಕೋಲಾ ವಹಿಸಿದ್ದರು.
Mankal Vaidya/ ಉಪಸಭಾಪತಿ ಹುದ್ದೆಗೆ ಮಂಕಾಳ ವೈದ್ಯ
ಜಾಗೃತಿ ಕಾರ್ಯಕ್ರಮ (Awareness Program) ಉರ್ವಾ ಕ್ವಾಜಿ ಅವರ ಕುರಾನ್ ಪಠಣದೊಂದಿಗೆ ಆರಂಭವಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪ್ರೊ ದಾಮೋದರ ನಾಯಕ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಭಾಗ್ಯ ಗೌಡ ಅತಿಥಿಗಳನ್ನು ಪರಿಚಯಿಸಿದರು. ಮೊಹಮ್ಮದ್ ಗೌಸ್ ವಂದನಾರ್ಪಣೆ ಸಲ್ಲಿಸಿದರು. ಅಫಿಯಾ ಮತ್ತು ಜ್ಯೋತಿ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯನಿರ್ವಹಿಸಿದರು.
