ಭಟ್ಕಳ: ನಗರದಲ್ಲಿ ಖಾಸಗಿ ಕಾರುಗಳು (private vehicles) ಟೂರಿಸ್ಟ್ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಾಡಿಗೆ ಸೇವೆ ನಡೆಸುತ್ತಿರುವುದನ್ನು ಆಕ್ಷೇಪಿಸಿ ಭಟ್ಕಳ (Bhatkal) ಟ್ಯಾಕ್ಸಿ ಚಾಲಕ-ಮಾಲಕರ ಸಂಘದ (taxi union) ನಿಯೋಗವು ಹೊನ್ನಾವರದ (Honnavar) ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (RTO) ಮನವಿ (memorandum) ಸಲ್ಲಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಖಾಸಗಿ ವಾಹನಗಳು (private vehicles) ನಿಯಮಬಾಹಿರವಾಗಿ ಬಾಡಿಗೆ ಸೇವೆ ನಡೆಸುತ್ತಿರುವುದರಿಂದ ಕಾನೂನುಬದ್ಧವಾಗಿ ಟ್ಯಾಕ್ಸಿ ಸೇವೆ ನಡೆಸುತ್ತಿರುವ ಚಾಲಕ-ಮಾಲಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.
Mankal Vaidya/ ಉಪಸಭಾಪತಿ ಹುದ್ದೆಗೆ ಮಂಕಾಳ ವೈದ್ಯ
ಈ ಸಮಸ್ಯೆ ಕುರಿತು ಸಂಘವು ಈ ಹಿಂದೆಯೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಮನವಿಯನ್ನು ಪರಿಗಣಿಸಿದ್ದ ಅಂದಿನ ಜಿಲ್ಲಾಧಿಕಾರಿ ಎಲ್ಲಾ ಸಾರಿಗೆ ಅಧಿಕಾರಿಗಳ ಸಭೆ ನಡೆಸಿ, ಖಾಸಗಿ ವಾಹನಗಳು ಬಾಡಿಗೆ ಸೇವೆ ನಡೆಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಭಟ್ಕಳದಲ್ಲಿ ಕೆಲವು ಖಾಸಗಿ ಕಾರುಗಳ ವಿರುದ್ಧ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು ಎಂದು ಮನವಿಯಲ್ಲಿ ತಿಳಿಸಲಾಗಿದೆ.
special train/ ಭಟ್ಕಳಕ್ಕೂ ಬರಲಿದೆ ವಿಶೇಷ ರೈಲು
ಆದರೆ, ಅಧಿಕಾರಿಗಳ ಕ್ರಮದ ಬಳಿಕವೂ ಇದೇ ಕೆಲವು ವಾಹನಗಳು ಮತ್ತೆ ಟೂರಿಸ್ಟ್ ಪ್ರಯಾಣಿಕರನ್ನು ಹತ್ತಿಸಿಕೊಂಡು ಬಾಡಿಗೆ ಸೇವೆ ನಡೆಸುತ್ತಿರುವುದು ಕಂಡುಬಂದಿದೆ. ಇದರಿಂದ ನಿಯಮಾನುಸಾರ ಪರವಾನಗಿ ಪಡೆದು ಸೇವೆ ಸಲ್ಲಿಸುತ್ತಿರುವ ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ದೂರಿದ್ದಾರೆ. ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಉಪಾಧ್ಯಕ್ಷ ಮಹಮದ್ ಮುಸ್ತಾಕ್, ಪ್ರಧಾನ ಕಾರ್ಯದರ್ಶಿ ಜಗದೀಶ ನಾಯ್ಕ ಸೇರಿದಂತೆ ಮತ್ತಿತರರ ನಿಯೋಗ ಮನವಿ ಸಲ್ಲಿಸಿತು.
missing/ ಮಂಕಿಯ ತಾಯಿ-ಮಗಳು ಭಟ್ಕಳದಲ್ಲಿ ನಾಪತ್ತೆ
ದಂಡ ವಿಧಿಸಿದ ಆರ್ ಟಿ ಒ
ಮನವಿ ಸ್ವೀಕರಿಸಿದ ಬೆನ್ನಲ್ಲೇ ಸಾರಿಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ಬಾಡಿಗೆ ಸೇವೆ ನಡೆಸುತ್ತಿದ್ದ ಕೆಲವು ಖಾಸಗಿ ವಾಹನಗಳನ್ನು ಪತ್ತೆಹಚ್ಚಿ ದಂಡ ವಿಧಿಸಿದ್ದಾರೆ. ಒಂದು ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇಂತಹ ಅಕ್ರಮ ಬಾಡಿಗೆ ಸೇವೆ ನಡೆಸುವ ಖಾಸಗಿ ವಾಹನಗಳ ಮೇಲೆ ನಿರಂತರ ನಿಗಾ ವಹಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.
