ಭಟ್ಕಳ: ಯಾರ ಸಮಾಧಾನಕ್ಕೂ, ಯಾರ ಖುಷಿಗೂ, ಯಾರನ್ನೂ ಬೇಜಾರು ಮಾಡಲು ನಗರಸಭೆ (Municipal Council) ಮಾಡಿಲ್ಲ. ನಗರಸಭೆ ಮಾಡಲು ಇನ್ನೂ ಯಾವ ಪಂಚಾಯತ ಸೇರಿಸಲು ನನ್ನ ಅಭ್ಯಂತರವಿಲ್ಲ. ಸೇರಿಸಲು ನಾನು ಸಿದ್ಧನಿದ್ದೇನೆ ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಭೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಒಳ ಚರಂಡಿ ಸಮಸ್ಯೆ ವಿಷಯವನ್ನು ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದ ವೇಳೆ ಸಚಿವ ಮಂಕಾಳ ವೈದ್ಯ ಮಾತನಾಡಿ, ನನಗೆ ಗೊತ್ತಿರಲಿಲ್ಲ ಆ ಪಂಚಾಯತನ್ನು ಸೇರಿಸಬಾರದು, ಈ ಪಂಚಾಯತನ್ನು ಸೇರಿಸಬಾರದು ಎಂದು. ಎಲ್ಲಿ ಸುರಕ್ಷತೆ ಇದೆ ಅಲ್ಲಿ ಬಿಟ್ಟಿದ್ದೇನೆ. ಎಲ್ಲಿ ಸುರಕ್ಷತೆ ಇಲ್ಲ ಅದನ್ನು ಸೇರಿಸಿದ್ದೇನೆ. ಹೆಬಳೆ ಪಂಚಾಯತನಲ್ಲಿ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ ಹಾಗೂ ಕಸದ ಸಮಸ್ಯೆ ಇಂಟರ್ ನ್ಯಾಷನಲ್ ಲೆವೆಲ್ಗೆ ಹೋಗಿತ್ತು. ಅದನೆಲ್ಲಾ ನೋಡಿ ಮಾಡಿದ್ದೇನೆ.ಯಾರ ಸಮಾಧಾನಕ್ಕೂ, ಯಾರ ಖುಷಿಗೂ, ಯಾರನ್ನು ಬೇಜಾರು ಮಾಡಲು ನಗರಸಭೆಗೆ (Municipal Council)) ಮುಂಡಳ್ಳಿ, ಶಿರಾಲಿ ಸೇರಿಸಿದರೆ ಸಂತೋಷವಾಗುತ್ತದೆ ಎಂದರೆ ನಾನು ಕೂಡ ಸಿದ್ಧನಿದ್ದೇನೆ ಎಂದು ಹೇಳಿದರು.
ಇದನ್ನು ಓದಿ: KDP meeting/ ‘ಕಂದಾಯ ಇಲಾಖೆಯವರೇ ಏಜೆಂಟರನ್ನು ಮಾಡುತ್ತಿದ್ದಾರೆ’



