ಭಟ್ಕಳ: ತಾಲೂಕಿನ ಮುರುಡೇಶ್ವರ (Murudeshwar) ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದ ಬೈಕ್ ಅಪಘಾತದಲ್ಲಿ (bike accident) ವ್ಯಕ್ತಿಯೊಬ್ಬರು ಸಾವನಪ್ಪಿದ್ದರೆ, ಮತ್ತೊಬ್ಬರು ಗಾಯಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜನವರಿ ೩೦ರ ರಾತ್ರಿ ಭಟ್ಕಳ ಹೊನ್ನಾವರ ರಸ್ತೆಯಲ್ಲಿ ಭಟ್ಕಳದ ಸಚಿನ್ ಮುರುಗಾ ಅವರು ಬೈಕ್ ಓಡಿಸಿಕೊಂಡು ಹೊರಟಿದ್ದರು. ಮಾವಿನಕಟ್ಟಾದ ಕೋಕ್ತಿ ಕ್ರಾಸಿನ ಬಳಿ ಅವರ ಬೈಕು ಅಪಘಾತಕ್ಕೀಡಾಯಿತು (bike accident). ರಾತ್ರಿ ೯ ಗಂಟೆ ಅವಧಿಯಲ್ಲಿ ಅವರ ಬೈಕು ಮತ್ತೊಂದು ಬೈಕಿಗೆ ಗುದ್ದಿತು.

ಇದನ್ನು ಓದಿ: talent show/ ಕಲಾ ಸೌರಭ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ

ಅಪಘಾತಕ್ಕೀಡಾದ ಮತ್ತೊಂದು ಬೈಕಿನಲ್ಲಿ ಕೊಕ್ತಿಯ ಜಮಾಲಿಮನೆಯ ನಾಗರಾಜ ವೆಂಕಟ್ರಮಣ ನಾಯ್ಕ (೩೦) ಚಲಿಸುತ್ತಿದ್ದರು. ಅವರ ಜೊತೆ ಮತ್ತೊಬ್ಬರು ಸಹ ಆ ಬೈಕಿನಲ್ಲಿದ್ದರು. ಅಪಘಾತದ ರಭಸಕ್ಕೆ ಅವರಿಬ್ಬರು ಗಾಯಗೊಂಡರು. ಆ ಪೈಕಿ ಜನವರಿ ೩೧ರಂದು ಬೆಳಗ್ಗೆ ನಾಗರಾಜ ವೆಂಕಟ್ರಮಣ ನಾಯ್ಕ ಅವರು ಸಾವನಪ್ಪಿದರು. ಈ ಅಪಘಾತದ ಬಗ್ಗೆ ಮಂಜುನಾಥ ಮಾಸ್ತಿ ನಾಯ್ಕ ಅವರು ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಚಿನ್ ಮುರುಗಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: arrested/ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದವ ಪೊಲೀಸ್ ಅತಿಥಿ