ಭಟ್ಕಳ (Bhatkal) : ವಿಪರೀತ ಮೊಬೈಲ್ ವ್ಯಾಮೋಹಕ್ಕೆ (Mobile craze) ಒಳಗಾಗಿದ್ದ ನಗರದ ಮಹ್ಮದ್ ನಿಹಾಲ್ (೧೯) ಎನ್ನುವಾತ ಆನ್‌ಲೈನ್ ಗೇಮ್ (online game) ಆಡಿ ಸಾಕಷ್ಟು ಹಣ ಕಳೆದುಕೊಂಡಿದ್ದು, ಇದೇ ನೋವಿನಲ್ಲಿ ಪಾನಿಪುರಿಯೊಳಗೆ ಇಲಿ ಪಾಶಾಣ ಸೇರಿಸಿ ತಿಂದು ಸಾವನಪ್ಪಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ನಗರದ ಸಾಗರ ರಸ್ತೆಯಲ್ಲಿರುವ ಡಿ.ಪಿ.ಕಾಲೋನಿ ನಿವಾಸಿ ಮಹ್ಮದ್ ನಿಹಾಲ್ ಕಾಲೇಜಿಗೆ ಹೋಗುತ್ತಿದ್ದು ವಿಪರೀತ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದ ಈತ ಕಳೆದ ಮೂರು ವರ್ಷಗಳಿಂದ ಮೊಬೈಲ್ ಮೂಲಕ ವಿವಿಧ ಆಟ (online game) ಆಡುವುದನ್ನು ರೂಢಿಸಿಕೊಂಡಿದ್ದ. ಹಣ ಹೂಡಿ ಮೊಬೈಲ್ ಗೇಮ್ ಆಡುವುದನ್ನು ಚಟವನ್ನಾಗಿಸಿಕೊಂಡಿದ್ದೇ ಹಣ ಕಳೆದುಕೊಳ್ಳಲು ಕಾರಣವಾಗಿದೆ. .

ಇದನ್ನೂ ಓದಿ : Waqf Bill/ ಕರಾವಳಿ ಮುಸ್ಲಿಮರ ಒಗ್ಗಟ್ಟು ಪ್ರದರ್ಶನ

ಮೊಬೈಲ್ ಆಟಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಿದ್ದರೂ ಮೊಬೈಲ್ ಗೇಮ್ ಮೋಹದಿಂದ ದೂರವಾಗಲು ಆತನಿಗೆ ಸಾಧ್ಯವಾಗಿಲ್ಲ. ಮೊಬೈಲ್ ಮಾಯೆಯೊಳಗೆ ಸಿಲುಕಿ ಸಾಕಷ್ಟು ಹಣ ಹಾಳಾದ ಪರಿಣಾಮ ಮಹ್ಮದ್ ನಿಹಾಲ್ ಮಾನಸಿಕವಾಗಿ ಕುಗ್ಗಿದ್ದ. ಪರಿಣಾಮ ಶಿವಮೊಗ್ಗದ (Shivamogga) ಮಾನಸ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಕೊಡಿಸಿದರೂ ಕೂಡಾ ಮೊಬೈಲ್ ವ್ಯಾಮೋಹದಿಂದ ಹೊರ ಬರದ ಈತ ಪಾನಿಪುರಿಯೊಳಗೆ ಇಲಿ ಪಾಶಾಣ ಸೇರಿಸಿ ತಿಂದು ಅಸ್ವಸ್ಥನಾಗಿದ್ದಾನೆ.

ಇದನ್ನೂ ಓದಿ : Heart Attack/ ಸ್ಕೂಟರ್‌ ಏರಿದಾಗ ಹೃದಯಾಘಾತದಿಂದ ಸಾವು

ತಕ್ಷಣ ಮನೆಯವರು ಆತನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲ (Manipal) ಆಸ್ಪತ್ರೆಗೆ ದಾಖಲಿಸಿದ್ದರು. ಏಪ್ರಿಲ್ ೧೩ರಂದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು (Bengaluru) ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಏ.೧೫ರಂದು ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಉಮರ್‌ ಫಾರೂಖ್ ಎನ್ನುವವರು ದೂರು (Complaint) ದಾಖಲಿಸಿದ್ದು ಗ್ರಾಮೀಣ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ : chess tournament/ ಜಿಲ್ಲಾ ಮಟ್ಟದ ಚೆಸ್‌ ಪಂದ್ಯಾವಳಿ ಯಶಸ್ವಿ