ಭಟ್ಕಳ (Bhatkal) : ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್‌ ನಿರೀಕ್ಷಕರು ವರ್ಗಾವಣೆಗೊಂಡಿದ್ದಾರೆ (PI Transfer). ಭಟ್ಕಳ ಗ್ರಾಮೀಣ ಠಾಣೆಯ ಪಿಐ ಚಂದನ ಗೋಪಾಲ ಮತ್ತು ಭಟ್ಕಳ ಶಹರ ಠಾಣೆಯ ಪಿಐ ಗೋಪಿಕೃಷ್ಣ ವರ್ಗಾವಣೆಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಐ ಚಂದನ ಗೋಪಾಲ ಅವರನ್ನು ಬಳ್ಳಾರಿ (Bellary) ಜಿಲ್ಲೆಯ ಸಿರುಗುಪ್ಪ (Siruguppa) ತಾಲೂಕಿನ ತೆಕ್ಕಲಕೋಟೆ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.  ಭಟ್ಕಳ ಶಹರ ಠಾಣೆಯ ಪಿಐ  ಗೋಪಿಕೃಷ್ಣ ಕೆ.ಆರ್‌. ಅವರನ್ನು ಬ್ರಹ್ಮಾವರ (Brahmavara) ವೃತ್ತಕ್ಕೆ ವರ್ಗಾಯಿಸಲಾಗಿದೆ. ಇವರಿಬ್ಬರೂ ಭಟ್ಕಳದಲ್ಲಿ ೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಜನರ ಪ್ರೀತಿ ಗಳಿಸಿದ್ದರು. ಚಂದನ ಗೋಪಾಲ ಅವರು  ಭಟ್ಕಳ ಗ್ರಾಮೀಣ ಠಾಣೆಗೆ ಪಿ.ಎಸ್.ಐ.ಯಾಗಿ ಬಂದ ಬಳಿಕ ಪೊಲೀಸ್ ಠಾಣೆಯ ಕಟ್ಟಡಕ್ಕೆ ತಮ್ಮ ಸ್ವಂತ ಖರ್ಚಿನಿಂದ ಸುಣ್ಣ ಬಣ್ಣ ಬಳಿದು ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿಬ್ಬಂದಿಯೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಇವರಿಬ್ಬರ ವರ್ಗಾವಣೆ ಸಿಬ್ಬಂದಿ ಮತ್ತು ಜನರಲ್ಲಿ ಬೇಸರ ಮೂಡಿಸಿದೆ.

ಇದನ್ನೂ ಓದಿ : Urban Bank/ ಭಟ್ಕಳ ಅರ್ಬನ್‌ ಬ್ಯಾಂಕ್‌ಗೆ ಅಧ್ಯಕ್ಷ-ಉಪಾಧ್ಯಕ್ಷರಾಯ್ಕೆ

ತೆಕ್ಕಲಕೋಟೆ (Tekkalakote) ವೃತ್ತದ ಸುಂದ್ರೇಶ ಕೆ.ಹೊಳೆನ್ನವರ ಭಟ್ಕಳ ಗ್ರಾಮೀಣ ಠಾಣೆಗೆ ವರ್ಗವಾಗಿದ್ದಾರೆ. ಆದರೆ ಗೋಪಿಕೃಷ್ಣ ಅವರ ವರ್ಗಾವಣೆಯಿಂದ ತೆರವಾಗುವ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ. ಗೋಕರ್ಣ (Gokarna) ಠಾಣೆಯ ಪಿಐ ವಸಂತರಾಮ ಆಚಾರ್‌ ಅವರನ್ನು ಕಾರವಾರದ (Karwar) ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ. ಫೆ.೧೩ರಂದು ಸರ್ಕಾರ ಹೊರಡಿಸಿದ ಆದೇಶದಲ್ಲಿ ಒಟ್ಟು ೨೬ ಪಿಐಗಳು ವರ್ಗಾವಣೆಗೊಂಡಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲೆಯ ಮೂವರು ಅಧಿಕಾರಿಗಳು ಸ್ಥಳಾಂತರಗೊಂಡಿದ್ದಾರೆ (PI Transfer).

ಇದನ್ನೂ ಓದಿ : Editorial/ ಗೋ ಹತ್ಯೆ ಸಂಪೂರ್ಣವಾಗಿ ನಿಲ್ಲಲಿ