ಭಟ್ಕಳ: ಅಂದರ ಬಾಹರ್ ಜೂಜಾಡುತ್ತಿದ್ದ ಅಡ್ಡೆಗೆ ದಾಳಿ ಮಾಡಿ (Police Raid) ಏಳು ಜನರನ್ನು ಬಂಧಿಸಿದ ಮುರುಡೇಶ್ವರ (murudeshwar) ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್‌ ಉಪ ನಿರೀಕ್ಷಕ ಹಣಮಂತ ಬಿರಾದಾರ ನೇತೃತ್ವದ ತಂಡ ದಾಳಿ ನಡೆಸಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರದ (Murudeshwar) ನ್ಯಾಶನಲ್ ಕಾಲೋನಿ, ೧ ನೇ ಕ್ರಾಸ್ ನಿವಾಸಿ ಮೊಹಮ್ಮದ್ ಫೈಝನ್ ತಂದೆ ಮೊಹಮ್ಮದ್ ಜಾಫರ್ (೩೭), ಗೌಸಿಯಾ ಮೊಹಲ್ಲಾದ ಮೊಹಮ್ಮದ್ ಶಾಹೀಲ್ ತಂದೆ ಮೊಹಮ್ಮದ್ ಇಬ್ರಾಹಿಮ್ (೩೭), ಬಿಲಾಲ ಕಾಲೋನಿ ವಾಸಿ ಮೊಹಮ್ಮದ್ ಸುಹೇಲ್ ತಂದೆ ಯಾನು ಶೇಖ್ (೨೮, ನ್ಯಾಶನಲ್ ಕಾಲೋನಿ, ೨ನೇ ಕ್ರಾಸ್ ನಿವಾಸಿ ಸಿಗ್ಬತುಲ್ಲಾ ತಂದೆ ಮೊಹಮ್ಮದ್ ಜುಬೇರ (೩೯), ಈದ್ಗಾ ರಸ್ತೆಯ ಮೊಹಮ್ಮದ್ ಅರ್ಫಾನ್ ತಂದೆ ಮೊಹಮ್ಮದ್ ಹಸ್ಸನ್ (೩೮), ಕೇರಿ ರಸ್ತೆಯ ಅಬು ಸೈಯದ್ ತಂದೆ ಸೈಯದ್ ಅಹ್ಮದ್ (೨೯) ಮತ್ತು ಈದ್ಗಾ ರಸ್ತೆಯ ಮೊಹಮ್ಮದ್ ಹಸ್ಸನ್ ತಂದೆ ಸಂಶುದ್ದೀನ್ (೩೩) ಆಪಾದಿತರು. ಇವರುಗಳು ತಮ್ಮ ಲಾಭಕೊಸ್ಕರ ಜನತಾ ಕಾಲೋನಿಯಲ್ಲಿ ಬಯಲು ಪ್ರದೇಶದಲ್ಲಿ ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿಕಟ್ಟಿ ಅಂದರ ಬಾಹರ್ ಇಸ್ಪೀಟ ಜುಗಾರಾಟವನ್ನು ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ (Police Raid). ನಗದು ಹಣ ೫೦೮೦ ರೂಪಾಯಿ ಮತ್ತು ಐದು ಸ್ಕೂಟಿ ವಶಕ್ಕೆ ಪಡೆಯಲಾಗಿದೆ.

ಇದನ್ನು ಓದಿ: FIR filed/ ಕಾರು ಚಾಲಕನ ಅಮಿತ ವೇಗಕ್ಕೆ ಬಿತ್ತು ಎಫ್ ಐ ಆರ್