ಭಟ್ಕಳ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರು ಹಾಗೂ ಉಪನ್ಯಾಸಕರಿಗಾಗಿ ‘ಭಟ್ಟಾಕಳಂಕನ ನಾಡು ಚನ್ನಾಭೈರಾದೇವಿಯ ಬೀಡು’ ಎಂಬ ವಿಷಯದ ಕುರಿತು ಕವನ ರಚನಾ ಸ್ಪರ್ಧೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಇಲ್ಲಿನ ಆನಂದಾಶ್ರಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆಯ ಗುರುವಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಬಹುಮಾನ (Prize distribution) ವಿತರಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಕ್ಷೇತ್ರ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ಸರ್ಕಾರಿ ಪದವಿ ಕಾಲೇಜಿನ ಪ್ರಾoಶುಪಾಲ ನಾಗೇಶ್ ಶೆಟ್ಟಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಎನ್ ನಾಯ್ಕ, ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಬಹುಮಾನ ವಿತರಿಸಿದರು (prize distribution).

ಇದನ್ನು ಓದಿ: Versatile teacher/ ಬಹುಮುಖ ಪ್ರತಿಭೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿಗೆ ಒಲಿದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹೇಮಲತಾ ರಾವ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಟ್ಟಿಹಕ್ಕಲ್ ಮತ್ತು ಸುಮಲತಾ ಡಿ ನಾಯ್ಕ, ಸ ಹಿ ಪ್ರಾ ಶಾಲೆ, ಹೊನ್ನಮಡಿ, ಪ್ರಥಮ; ಎಚ್ ಎನ್ ನಾಯ್ಕ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರಾಪುರ ಮತ್ತು ಪ್ರತಿಮಾ ನಾಯ್ಕ, ಆನಂದಾಶ್ರಮ ಪ್ರಾಥಮಿಕ ಶಾಲೆ, ದ್ವಿತೀಯ; ರಾಘವೇಂದ್ರ ಮಡಿವಾಳ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನೆಮಡಿ ಮತ್ತು ಗಾಯತ್ರಿ ಅಂಬಿಗ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡಭಟ್ಕಳ ಹಾಗೂ ಸುಧಾ ಭಟ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಟ್ಟಿಹಕ್ಕಲ್ ತೃತೀಯ ಸ್ಥಾನ ಪಡೆದಿದ್ದಾರೆ.  ರಾಜಿವಿ ಮೊಗೇರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಟ್ಟಿಹಕ್ಕಲ್; ಮಹೇಶ ನಾಯ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜನತಾ ಕಾಲೋನಿ;  ನಾಗರತ್ನ ಎಂ ನಾಯ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟ್ಕೂರ; ಪ್ರಶಾಂತ್ ಕೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜೋಗಿಮನೆ; ಸತ್ಯವತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನೆಮಡಿ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡರು.

ಇದನ್ನು ಓದಿ: Insult’ to journalist/ ಪತ್ರಕರ್ತೆಗೆ ‘ಅವಮಾನ’ – ದೇಶಪಾಂಡೆ ಕ್ಷಮೆಯಾಚಿಸಲಿ: ಶಿವಾನಿ ಶಾಂತಾರಾಮ

ಪ್ರೌಢಶಾಲಾ ವಿಭಾಗದಲ್ಲಿ ಶಿವಕುಮಾರ ಹಿಚಕಡ್, ಸರ್ಕಾರಿ ಪ್ರೌಢಶಾಲೆ, ಕುಂಟವಾಣಿ; ಎನ್ ಜಿ ಗೌಡ, ಸರ್ಕಾರಿ ಪ್ರೌಢಶಾಲೆ, ಬೆಳಕೆ ಪ್ರಥಮ; ಸುರೇಶ್ ತಾಂಡೇಲ್, ಸರ್ಕಾರಿ ಪ್ರೌಢಶಾಲೆ, ಕುಂಟವಾಣಿ ಮತ್ತು ಸವಿತಾ ನಾಯ್ಕ, ಸರ್ಕಾರಿ ಪ್ರೌಢಶಾಲೆ, ಸೋನಾರಕೇರಿ ದ್ವಿತೀಯ; ಗುಡ್ಡಪ್ಪ ಹರಿಜನ್, ಕರ್ನಾಟಕ ಪಬ್ಲಿಕ್ ಸ್ಕೂಲ್, ತೆರ್ನಮಕ್ಕಿ ಮತ್ತು ಭಾಗಿರಥಿ ಹೆಗಡೆ, ಸರ್ಕಾರಿ ಪ್ರೌಢಶಾಲೆ, ಗೊರಟೆ ತೃತೀಯ ಸ್ಥಾನ ಪಡೆದಿದ್ದಾರೆ. ಆಶಾ ಬಲಿಮನೆ, ಸರ್ಕಾರಿ ಪ್ರೌಢಶಾಲೆ, ಗೊರಟೆ; ಕೀರ್ತಿ ಸುನಿಲ್ ನಾಯ್ಕ, ಶಮ್ಸ್ ಪ್ರೌಢಶಾಲೆ; ಪ್ರಶಾಂತ ನಾಯ್ಕ, ಸರ್ಕಾರಿ ಪ್ರೌಢಶಾಲೆ, ತೆಂಗಿನಗುಂಡಿ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.

ಇದನ್ನು ಓದಿ: bike collision/ ಬೈಕ್ ಡಿಕ್ಕಿಯಾಗಿ ಮಹಿಳೆ, ಎರಡು ವರ್ಷದ ಮಗುವಿಗೆ ಗಾಯ

ಕಾಲೇಜು ವಿಭಾಗದಲ್ಲಿ ಗುರು ಸುಧೀಂದ್ರ ಕಾಲೇಜಿನ ರಶ್ಮಿ ಭಾಸ್ಕರ್ ನಾಯ್ಕ ಪ್ರಥಮ, ವಿಭಾ ನಾಯಕ ದ್ವಿತೀಯ, ಆಶಾ ಡಿಸೋಜ ಹಾಗೂ ಶ್ರೀವಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ರಮ್ಯಾ ನಾಯ್ಕ ತೃತೀಯ ಬಹುಮಾನ ಪಡೆದುಕೊಂಡರು.

ಇದನ್ನು ಓದಿ: sports meet/ ಭಟ್ಕಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರೆನ್ನೆಸ್ ಸಾಧನೆ

ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆಯಲ್ಲಿ ಲೋಹಿತ್ ಲಕ್ಷ್ಮೀನಾರಾಯಣ ಹೆಗಡೆ, ಕೆ ಪಿ ಎಸ್ ಸಿ, ತೆರ್ನಮಕ್ಕಿ  ಪ್ರಥಮ; ಅನನ್ಯ ಕೆ ನಾಯ್ಕ, ಆನಂದ ಪ್ರೌಢಶಾಲೆ ದ್ವಿತೀಯ; ದೀಕ್ಷಾ ರಾಮಚಂದ್ರ ನಾಯಕ್, ಸರ್ಕಾರಿ ಪ್ರೌಢಶಾಲೆ, ಬೆಳಕೆ ತೃತೀಯ ಸ್ಥಾನ ಪಡೆದರು. ಮನಸ್ವಿನಿ ವಾಸುದೇವ ಶಾಸ್ತ್ರಿ, ಸರ್ಕಾರಿ ಪ್ರೌಢಶಾಲೆ, ಸೋನಾರಕೇರಿ; ಮೇಘನಾ ಎಸ್ ನಾಯಕ್, ಸಿದ್ದಾರ್ಥ ಪ್ರೌಢಶಾಲೆ, ಶಿರಾಲಿ; ಭವಾನಿ ರಾಮ ಗೊಂಡ, ಸರ್ಕಾರಿ ಪ್ರೌಢಶಾಲೆ, ಕುಂಟವಾಣಿ; ಪ್ರತಿಕ್ಷ ಅಣ್ಣಪ್ಪ ಆಚಾರಿ, ಬೀನಾ ವೈದ್ಯ ಪ್ರೌಢಶಾಲೆ, ಮುರುಡೇಶ್ವರ; ಶಾರಿಕಾ ದೇವಿದಾಸ ನಾಯ್ಕ, ಆನಂದಶ್ರಮ ಪ್ರೌಢಶಾಲೆ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.

ಇದನ್ನು ಓದಿ: Degree result/ ಪದವಿ ಪರೀಕ್ಷೆಯಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಉತ್ತಮ ಫಲಿತಾಂಶ

ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ ಮುರ್ಡೇಶ್ವರ, ಪೂರ್ಣಿಮಾ ನಾಯ್ಕ, ಪರಮೇಶ್ವರ ನಾಯ್ಕ, ಶಿಕ್ಷಣ ಸಂಯೋಜಕ ಅಶೋಕ ಆಚಾರಿ,  ಅಕ್ಷರ ದಾಸೋಹದ ಸಮನ್ವಯಾಧಿಕಾರಿ ರಾಘವೇಂದ್ರ ನಾಯ್ಕ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಇದನ್ನು ಓದಿ: fish market/ ʼಮೀನು ಮಾರುಕಟ್ಟೆ ಸ್ಥಳಾಂತರವಾಗದುʼ

ಸ್ಪರ್ಧೆಯಲ್ಲಿ ಭಾಗವಹಿಸಿದ ಕವಿ ಶಿಕ್ಷಕರುಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರಲ್ಲದೆ, ಸಾಹಿತ್ಯ ಸಮ್ಮೇಳನ ಮತ್ತಿತರ ಸಂದರ್ಭಗಳಲ್ಲಿ ಆಯೋಜಿಸುವ ಕವಿಗೋಷ್ಠಿಯಲ್ಲಿ ವೇದಿಕೆ ಕಲ್ಪಿಸಿ, ಕವನ ವಾಚನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನು ಓದಿ: horrific accident/ ಬೈಕ್‌ ಸವಾರ ದುರ್ಮರಣ