ಭಟ್ಕಳ (Bhatkal): ತಾಲೂಕಿನ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ (sports event) ಆರ್.ಎನ್. ಶೆಟ್ಟಿ (RN Shetty) ಪದವಿ ಪೂರ್ವ ಕಾಲೇಜು (RNS PU College) ದ್ವಿತೀಯ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಾಲಕಿಯರ ವಿಭಾಗದಲ್ಲಿ ಯೋಗಿತಾ ನಾಯ್ಕ ೧೦೦ ಮೀ., ೨೦೦ ಮೀ. ರನ್ನಿಂಗ್ ಹಾಗೂ ೧೧೦ ಮೀ. ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದರು. ಚೈತನ್ಯಾ ಲಾಂಗ್ ಜಂಪ್ ಪ್ರಥಮ, ೧೦೦ ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಅನಿಷಾ ಕರಾಟೆಯಲ್ಲಿ ಪ್ರಥಮ, ಶಿಭಾನಿ ಸ್ವಿಮ್ಮಿಂಗ್ ನಲ್ಲಿ ಪ್ರಥಮ, ಮನೀಷಾ ಮತ್ತು ಬಿಂದು ಯೋಗದಲ್ಲಿ ಪ್ರಥಮ, ಐಶ್ವರ್ಯ ಮತ್ತು ಸಮೃದ್ಧಿ ಚೆಸ್ ನಲ್ಲಿ ಪ್ರಥಮ, ಆರತಿ ೩೦೦೦ ಮೀ. ನಡಿಗೆಯಲ್ಲಿ ಪ್ರಥಮ, ಹರ್ಷಿತಾ ಹ್ಯಾಮರ್ ಥ್ರೋ ನಲ್ಲಿ ಪ್ರಥಮ, ವಿದ್ಯಾ ಕ್ರಾಸ್-ಕಂಟ್ರಿಯಲ್ಲಿ ಪ್ರಥಮ, ಚೈತ್ರ ಪೋಲ್ ವಾಲ್ಟ್ ನಲ್ಲಿ ಪ್ರಥಮ, ಅನನ್ಯ ೧೫೦೦ ಮೀ. ಹಾಗೂ ೩೦೦೦ ಮೀ. ನಡಿಗೆಯಲ್ಲಿ ತೃತೀಯ ಸ್ಥಾನ ಪಡೆದರು. ಬಾಲಕಿಯರ ರಿಲೇ, ಕಬಡ್ಡಿ, ಖೋ ಖೋ ದ್ವಿತೀಯ ಸ್ಥಾನ ಪಡೆದುಕೊಂಡರು.

ಇದನ್ನೂ ಓದಿ :  ಗಣೇಶ ವಿಸರ್ಜನೆ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

ಬಾಲಕರ ವಿಭಾಗದಲ್ಲಿ ಸಂಕೇತ್ ತ್ರಿಬಲ್ ಜಂಪ್ ಪ್ರಥಮ, ೨೦೦ ಮೀ. ರನ್ನಿಂಗ್ ಪ್ರಥಮ ಹಾಗೂ ೪೦೦ ಮೀ ರನ್ನಿಂಗ್ ತೃತೀಯ, ರಜತ್ ೧೧೦ ಮೀ ಹರ್ಡಲ್ಸ್  ಪ್ರಥಮ, ೪೦೦ ಮೀ. ಹರ್ಡಲ್ಸ್ ದ್ವಿತೀಯ, ಕೌಶಿಕ್ ಕರಾಟೆ ಪ್ರಥಮ, ಸೃಜನ್ ಸ್ವಿಮ್ಮಿಂಗ್ ಪ್ರಥಮ, ಗಣೇಶ ಹಾಗೂ ಯೋಗರಾಜ ಯೋಗದಲ್ಲಿ ಪ್ರಥಮ, ಸಿದ್ವಿನ್ ೧೦೦ ಮೀ. ರನ್ನಿಂಗ್ ನಲ್ಲಿ ತೃತೀಯ ಸ್ಥಾನ ಪಡೆದರು. ಬಾಲಕರ ರಿಲೇ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಇದನ್ನೂ ಓದಿ :  ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಮತ್ತೊಂದು ರ‍್ಯಾಂಕ್

ಆರ್.ಎನ್.ಎಸ್. ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ದಿನೇಶ್ ಗಾಂವಕರ ಕ್ರೀಡಾ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು. ಮಾವಳ್ಳಿ-೨ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಪಡಿಯಾರ, ತಾಲೂಕು ಕ್ರೀಡಾ ಸಂಯೋಜಕ ಕೃಷ್ಣಪ್ಪ ನಾಯ್ಕ, ದೈಹಿಕ ನಿರ್ದೇಶಕ ಮಹೇಶ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯೆ ಅಶ್ವಿನಿ ಶೇಟ ಸ್ವಾಗತಿಸಿದರು. ತಾಲೂಕಿನ 14 ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ :‌ ಸೆಪ್ಟೆಂಬರ್‌ ೧೦ರಂದು ವಿವಿಧೆಡೆ ಅಡಿಕೆ ಧಾರಣೆ