ಭಟ್ಕಳ: ಕಂಠಪೂರ್ತಿ ಕುಡಿದು ಕಡಲ ತೀರಕ್ಕೆ ಬಂದು ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಮುರುಡೇಶ್ವರದ (Murudeshwar) ಓಶಿಯನ್ ಅಡ್ವೆಂಚರ್ ಸಿಬ್ಬಂದಿ ರಕ್ಷಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಳಗಾವಿ (Belagavi) ಮೂಲದ ಪ್ರಸನ್ನ ಅವರು ಶುಕ್ರವಾರ ಮುರುಡೇಶ್ವರಕ್ಕೆ (Murudeshwar) ಬಂದಿದ್ದರು. ಎಲ್ಲೆಂದರಲ್ಲಿ ಒಂಟಿಯಾಗಿ ಸಂಚರಿಸಿದ್ದ ಅವರು ಅಲ್ಲಿಯೇ ಬಾರ್ ಪ್ರವೇಶಿಸಿ ಮದ್ಯ ಸೇವಿಸಿದ್ದರು. ಕುಡಿದ ನಶೆಯಲ್ಲಿಯೇ ತೂರಾಡುತ್ತ ಕಡಲ ತೀರಕ್ಕೆ ಬಂದರು. ಅಲೆಗಳ ಅಬ್ಬರದ ಬಗ್ಗೆ ಅರಿವಿಲ್ಲದೇ ಅವರು ಸಮುದ್ರದ ಕಡೆ ಹಾರಿದರು. ಈಜು ಬಾರದಿದ್ದರೂ ಆಳ ಸಮುದ್ರದ ಕಡೆ ನಡೆದು ಹೋಗುತ್ತಿದ್ದ ಪ್ರಸನ್ನ ಅವರಿಗೆ ಅಲೆಯೊಂದು ಅಬ್ಬರಿಸಿತು. ಅದರ ರಭಸಕ್ಕೆ ಅವರು ನೀರಿನ ಆಳಕ್ಕೆ ಕೊಚ್ಚಿ ಹೋದರು.

ಇದನ್ನು ಓದಿ: Drawing / ಶ್ರೀವಲಿಯ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

ನೀರಿನಿಂದ ಮೇಲೆ ಬರಲಾಗದೇ ಸಮಸ್ಯೆಗೆ ಸಿಲುಕಿದ್ದ ಪ್ರಸನ್ನ ಅವರು ಅಲ್ಲಿಯೇ ಇದ್ದ ಓಶಿಯನ್ ಅಡ್ವೆಂಚರ್ ಸಿಬ್ಬಂದಿ ವಿಘ್ನೇಶ್ವರ ಹರಿಕಂತ್ರ ಅವರ ಕಣ್ಣಿಗೆ ಬಿದ್ದರು. ತಕ್ಷಣ ವಾಟರ್ ಬೈಕ್ ಮೂಲಕ ಸಮುದ್ರದ ಕಡೆ ತೆರಳಿದ ಅವರು ರಾಜೇಶ ಹರಿಕಂತ್ರ ಅವರ ಜೊತೆಗೂಡಿ ಪ್ರಸನ್ನ ಅವರ ಜುಟ್ಟು ಹಿಡಿದು ಮೇಲೆತ್ತಿದರು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದಿದ್ದ ಪ್ರಸನ್ನ ಅವರನ್ನು ನೀರಿನಿಂದ ಮೇಲೆ ಕರೆತಂದು ಅವರ ಜೀವ ಕಾಪಾಡಿದರು. ಅದಾದ ನಂತರ ಓಶಿಯನ್ ಅಡ್ವೆಂಚರ್ ಸಿಬ್ಬಂದಿ ಪೊಲೀಸರನ್ನು ಕರೆದು ವಿಷಯ ತಿಳಿಸಿದರು. ಪೊಲೀಸರು ಪ್ರಸನ್ನ ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ಇದನ್ನು ಓದಿ: operation/ ಭಟ್ಕಳ ಶಹರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ