ಭಟ್ಕಳ: ಕಳೆದ ವಾರ ಮೀನುಗಾರಿಕೆಗೆ ತೆರಳಿದ್ದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಒರಿಸ್ಸಾ (Orissa) ರಾಜ್ಯದ ಯುವಕನ ಶವ ಅಳ್ವೆಕೋಡಿ ಬಂದರಿನಲ್ಲಿ ಪತ್ತೆಯಾಗಿದೆ (Body found).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಒರಿಸ್ಸಾ ರಾಜ್ಯದ ಸುಂದರಗಢ ಜಿಲ್ಲೆಯ ೨೭ ವರ್ಷದ ಜೈರಾಮ್ ಬಿರಗಂಟಿ ಮೃತ ಯುವಕನಾಗಿದ್ದಾನೆ. ಆತ ತದಡಿ ಮೂಲದ ಮಾಲೀಕರಿಗೆ ಸೇರಿದ ‘ಶ್ರೀ ಮೂಕಾಂಬಿಕಾ’ ಬೋಟ್‌ನಲ್ಲಿ ಮೀನುಗಾರಿಕೆ ಕಾರ್ಯದಲ್ಲಿ ತೊಡಗಿದ್ದ ವೇಳೆ, ಬೋಟ್ ಹತ್ತುವಾಗ ಕಾಲು ಜಾರಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ. ಈ ಕುರಿತು ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

clinics seized/ ಭಟ್ಕಳದಲ್ಲಿ ಮೂರು ಕ್ಲಿನಿಕ್ ಸೀಜ್

ನಾಪತ್ತೆಯಾದ ಯುವಕನಿಗಾಗಿ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ವ್ಯಾಪಕ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ಆಳ್ವೆಕೋಡಿ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದೆ (Body found). ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಐ ವೆಂಕಟೇಶ್ ಎಸ್ ಮುರ್ನಾಲ್, ಪಿಎಸೈ ಮಲ್ಲಿಕಾರ್ಜುನ ಕೊರಾಣಿ ಹಾಗೂ ಸಿಬ್ಬಂದಿ ಮದರಸಾಬ್ ಚಿಕೇರಿ, ಅಂಬರೀಶ್ ಕುಬಾರಿ, ಕಿರಣ್ ತಿಲಗಂಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಶವಗಾರದಲ್ಲಿ ಇಡಲಾಯಿತು.

Bhavagana/ ಬ್ರಹ್ಮ ಕಲಶೋತ್ಸವದಲ್ಲಿ ಭಾವಗಾನದ ನಿನಾದ

ಒರಿಸ್ಸಾದಿಂದ ಭಟ್ಕಳಕ್ಕೆ ಬಂದ ಮೃತನ ಕುಟುಂಬಸ್ಥರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅವರಿಗೆ ಹಸ್ತಾಂತರಿಸಲಾಯಿತು. ಶವವನ್ನು ಒರಿಸ್ಸಾಕ್ಕೆ ಸಾಗಿಸುವುದು ಕಷ್ಟಕರವಾಗಿದ್ದರಿಂದ, ಬೋಟ್ ಮಾಲೀಕ, ಸ್ಥಳೀಯ ಸಮಾಜಸೇವಕ ಮಂಜು ನಾಯ್ಕ ಮುಟ್ಟಳ್ಳಿ ಮತ್ತು ಲೈಫ್ ಕೇರ್ ಆಂಬುಲೆನ್ಸ್ ಚಾಲಕ ಎವರೆಸ್ಟ್ ಸಹಾಯದಿಂದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Case filed/ ಗಾಂಜಾ ಸೇವನೆ: ಮೂವರ ಬಂಧನ