ಭಟ್ಕಳ: ಟ್ಯಾಕ್ಸಿ ಚಾಲಕರಿಗೆ (taxi drivers) ಅನಾವಶ್ಯಕ ದಂಡ ವಿಧಿಸುತ್ತಿರುವ ಕುರಿತು ಟ್ಯಾಕ್ಸಿ ಯೂನಿಯನ್ ಮುಖಂಡರು ಡಿವೈಎಸ್ಪಿ ಮಹೇಶ್ ಕೆ ಅವರನ್ನು ಭೇಟಿ ಮಾಡಿ ದೂರಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಗಣೇಶ ದೇವಾಡಿಗ ಮಾತನಾಡಿ, “ಫ್ರೀ ಬಸ್ ಯೋಜನೆ ಜಾರಿಗೆ ಬಂದ ನಂತರ ನಮ್ಮ ವ್ಯವಹಾರವೇ ಕುಂಠಿತಗೊಂಡಿದೆ. ನಾವು ಸ್ಥಳೀಯ ಟ್ಯಾಕ್ಸಿ ಚಾಲಕರು (taxi drivers) ಜೀವನ ಸಾಗಿಸಲು ಈ ಉದ್ಯೋಗದ ಮೇಲೆಯೇ ಅವಲಂಬಿತರಾಗಿದ್ದೇವೆ. ಆದರೆ ಶಿರಾಲಿ ಚೆಕ್‌ಪೋಸ್ಟ್, ಸರ್ಪನಕಟ್ಟೆ, ಸಾಗರ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪೊಲೀಸರು ಯುನಿಫಾರ್ಮ್ ಧರಿಸಿಲ್ಲ, ಪ್ಯಾಂಟ್ ಹಾಕಿಲ್ಲ, ಸೀಟ್ ಹೆಚ್ಚಾಗಿದೆ ಎಂಬ ನೆಪಗಳಲ್ಲಿ ದಂಡ ವಿಧಿಸುತ್ತಿದ್ದಾರೆ. ದಂಡ ಕಟ್ಟದಿದ್ದರೆ ಡ್ರೈವಿಂಗ್ ಲೈಸೆನ್ಸ ವಶಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಇದನ್ನು ಓದಿ: Taxi Association/ ಟ್ಯಾಕ್ಸಿ ಸಂಘದ ಪದಾಧಿಕಾರಿಗಳ ಆಯ್ಕೆ

ಟ್ಯಾಕ್ಸಿ ಚಾಲಕರ ಅಹವಾಲು ಆಲಿಸಿದ ಡಿವೈಎಸ್ಪಿ ಮಹೇಶ್ ಕೆ ಪ್ರತಿಕ್ರಿಯಿಸಿ, “ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಯೂನಿಫಾರ್ಮ್ ಅಥವಾ ಇತರ ನೆಪಗಳಲ್ಲಿ ಅನಗತ್ಯವಾಗಿ ದಂಡ ವಿಧಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ” ಎಂದು ಭರವಸೆ ನೀಡಿರುವುದಾಗಿ ಟ್ಯಾಕ್ಸಿ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಇದನ್ನು ಓದಿ: Ganesh festival/ ಗಣೇಶೋತ್ಸವಕ್ಕೆ ರೂಲ್ಸ್ ಜಾರಿ: ಏನೇನು ಗೊತ್ತಾ?

ಟ್ಯಾಕ್ಸಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ಜಗದೀಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ್ ನಾಯ್ಕ, ಪುರಸಭೆ ಸದಸ್ಯ ಇಮ್ಶಾದ್ ಮುಕ್ತಸಿರ್ ಸೇರಿದಂತೆ ಸುಧಾಕರ ನಾಯ್ಕ, ಭಾಸ್ಕರ ಮೊಗೇರ, ಯೂನಿಯನ್ ಇತರ ಪದಾಧಿಕಾರಿಗಳು ಹಾಗೂ ಹಿರಿಯ ಚಾಲಕರು ಉಪಸ್ಥಿತರಿದ್ದರು.

ಇದನ್ನು ಓದಿ: Woman falls into well/ ಬಾವಿಗೆ ಬಿದ್ದ ಮಹಿಳೆ