ಭಟ್ಕಳ: ತಾಲೂಕಿನ ಸರ್ಪನಕಟ್ಟೆಯಲ್ಲಿರುವ ಶ್ರೀ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ (Vardhanthi utsav) ಹಾಗೂ  ಗುರುವಂದನಾ ಕಾರ್ಯಕ್ರಮವನ್ನು ಫೆಬ್ರವರಿ ೧೯ ಮತ್ತು ೨೦ರಂದು ವಿಜೃಂಭಣೆಯಿಂದ ನಡೆಸಲಾಗುತ್ತದೆ ಎಂದು ದೇವಸ್ಥಾನದ ಗುರುವಂದನಾ ಕಾರ್ಯಕ್ರಮ ಸಮಿತಿಯ ಸದಸ್ಯ ಗೋವರ್ಧನ ನಾಯ್ಕ ಹೇಳಿದರು. ಅವರು ಶ್ರೀ ವಾಸುಕಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವರ್ಧಂತ್ಯುತ್ಸವ (Vardhanthi utsav) ಕಾರ್ಯಕ್ರಮದ ಪ್ರಯುಕ್ತ ಫೆ ೧೯ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಶೇಷವಾಗಿ ಬೆಳಿಗ್ಗೆ ಬೈಕ್ ರ‍್ಯಾಲಿ ಮುಖಾಂತರ ಶ್ರೀ ಮೇಲುಕೋಟೆ ಜಗದ್ಗುರು ಶ್ರೀ ರಾಮಾನುಜಾಚಾರ್ಯ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಯತಿರಾಜ ಜೀಯರ್  ಸ್ವಾಮೀಜಿಯವರನ್ನು ಸ್ವಾಗತಿಸಿಕೊಳ್ಳಲಾಗುತ್ತದೆ. ಆ ನಂತರ ದೇವಸ್ಥಾನದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಸ್ವಾಮೀಜಿಗಳ ಆಶಿರ್ವಚನ ಕಾರ್ಯಕ್ರಮ ನೆರವೇರುತ್ತದೆ. ಮಧ್ಯಾಹ್ನ ೧ ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಫೆ ೨೦ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗುರುಗಳಿಂದ ಮಂತ್ರಾಕ್ಷತೆ ಹಾಗೂ ಆಶಿರ್ವಚನ ಕಾರ್ಯಕ್ರಮ ನೆರವೇರುತ್ತದೆ ಎಂದು ಹೇಳಿದರು.

bike hit/ ಬೈಕ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಗಂಭೀರ

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಅಧ್ಯಕ್ಷ ಗಜಾನನ ನಾಯ್ಕ, ಗೌರವಾಧ್ಯಕ್ಷ ಹನುಮಂತ ನಾಯ್ಕ, ಉಪಾಧ್ಯಕ್ಷ ಶರತ ನಾಯ್ಕ, ಕಾರ್ಯದರ್ಶಿ ಶೇಖರ ನಾಯ್ಕ, ಉಮೇಶ ನಾಯ್ಕ, ರಮೇಶ ನಾಯ್ಕ, ಸತೀಶ ನಾಯ್ಕ, ಚಂದ್ರಕಾಂತ ನಾಯ್ಕ ಮತ್ತಿತರರರು ಉಪಸ್ಥಿತರಿದ್ದರು.

Mankal Vaidya/ `ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ತಲೆದೋರಿದರೆ ಗ್ರಾಮ ಆಡಳಿತ ಅಧಿಕಾರಿಗಳೇ ನೇರ ಹೊಣೆ’