ಭಟ್ಕಳ: ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ಶ್ರೀ ದೇವರ ಪಾಲಕಿ ಉತ್ಸವ (Pallakki Utsava) ನಗರದಾದ್ಯಂತ ಸಂಚರಿಸಿ ಸಾವಿರಾರು ಭಕ್ತ ಸಮೂಹ ಭಕ್ತಿ ಪರವಶತೆಯಲ್ಲಿ ತೇಲುವಂತೆ ಮಾಡಿತು. ಈ ಪಾಲಕಿ ಮಹೋತ್ಸವದಲ್ಲಿ ನಾಮಧಾರಿ ಸಮಾಜದ ಅಧಿಕ ಬಂಧುಗಳು ಪಾಲ್ಗೊಂಡಿದ್ದರು.

ಪಲ್ಲಕ್ಕಿ ಉತ್ಸವದ ಮೆರವಣಿಗೆಯನ್ನು ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ, ಶ್ರೀ ದೇವರಿಗೆ ತುಲಾಭಾರ ಸಮರ್ಪಣೆ ಮಾಡಲಾಯಿತು. ನಂತರ ಸಂಜೆ ೪ ಗಂಟೆಯಿಂದ ವೆಂಕಟೇಶ್ವರ ದೇವರ ಪಾಲಕಿಯೂ ಸಹಸ್ರಕ್ಕೂ ಅಧಿಕ ಭಕ್ತರ ಜಯಘೋಷದಲ್ಲಿ ನಗರದಾದ್ಯಂತ ಸಂಚರಿಸಿದ್ದು ಮಧ್ಯರಾತ್ರಿ ೧ ಗಂಟೆಯ ತನಕ ಈ ಉತ್ಸವ ನಡೆದಿದೆ.

ಇದನ್ನು ಓದಿ: Theft/ ಮಾಂಗಲ್ಯ ಸರ ಕಳ್ಳತನ

ದೇವಸ್ಥಾನದಿಂದ ಆರಂಭಗೊಂಡ ಪಾಲಕಿ ಉತ್ಸವ (Pallakki Utsava) ಸೋನಾರಕೇರಿ, ನಗರ ಪೊಲೀಸ ಠಾಣಾ ಮಾರ್ಗವಾಗಿ ಹಳೆ ಬಸ್ ನಿಲ್ದಾಣದಿಂದ ತೆರಳಿ ಮಾರಿಗುಡಿ ದೇವಸ್ಥಾನದಿಂದ ಚೌಥನಿಯ ಕಾಳಿಕಾಂಬಾ ದೇವಸ್ಥಾನ ಸಮೀಪದ ಕಟ್ಟೆಯ ತನಕ ತೆರಳಿ ಅಲ್ಲಿ ಭಕ್ತರಿಂದ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಅದೇ ಮಾರ್ಗವಾಗಿ ಮುಂಡಳ್ಳಿಯ ಕುದುರೆ ಬೀರಪ್ಪ ದೇವಸ್ಥಾನದಲ್ಲಿಯೂ ಪೂಜೆಯನ್ನು ಭಕ್ತರು ಸಲ್ಲಿಸಿದರು.

ಇದನ್ನು ಓದಿ: Theft/ ಮಾಂಗಲ್ಯ ಸರ ಕಳ್ಳತನ

ಪಾಲಕಿ ರಘುನಾಥ ರಸ್ತೆಯ ಮೂಲಕ ಮಣ್ಕುಳಿಗೆ ಬಂದು ಮಣ್ಕುಳಿಯಲ್ಲಿನ ಭಕ್ತರು ಪೂಜೆ ಸಲ್ಲಿಸಿದ ಬಳಿಕ ಪಾಲಕಿ ಅಲ್ಲಿಂದ ವಾಪಸ್ಸು ಬಂದು ಪದ್ಮಾವತಿ ದೇವಸ್ಥಾನಕ್ಕೆ ಬಂದಿತು. ಇಲ್ಲಿಯೂ ಪೂಜೆ ಪುನಸ್ಕಾರವನ್ನು ಸಲ್ಲಿಸಿ ಕಳಿ ಹನುಮಂತ ದೇವಸ್ಥಾನ ಮಾರ್ಗವಾಗಿ ರಾತ್ರಿ ೧ ಗಂಟೆ ಸುಮಾರಿಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತೆರಳಿತು. ಪಾಲಕಿ ಉತ್ಸವದ ಬಳಿಕ ರಾತ್ರಿ ಮಹಾ ಮಂಗಳಾರತಿ, ಹಾಗೂ ತೀರ್ಥ ಪ್ರಸಾದ ನೀಡಿದ ನಂತರ ಪಾಲಕಿ ಮಹೋತ್ಸವ ಮುಕ್ತಾಯಗೊಂಡಿತು.

ಇದನ್ನು ಓದಿ: Murudeshwar/ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು