ಭಟ್ಕಳ: ಬೈಕೊಂದು ಡಿಕ್ಕಿ ಹೊಡೆದು (bike hit) ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಹಾಲಿಬಡ್ರು ಕಮಟೆಕೇರೆ ನಿವಾಸಿ ಗೌರಿ ಶನಿಯಾರ ದೇವಡಿಗ (೬೬) ಗಾಯಗೊಂಡ ಮಹಿಳೆ. ದೂರಿನಲ್ಲಿ ತಿಳಿಸಿರುವಂತೆ, ದಿನಾಂಕ: ೧೬-೦೨-೨೦೨೬ರಂದು ಬೆಳಿಗ್ಗೆ ೮:೩೦ ಗಂಟೆಗೆ ಉತ್ತರಕೊಪ್ಪ-ಬಸ್ತಿ ರಸ್ತೆಯಲ್ಲಿ ಉತ್ತರಕೊಪ್ಪ ಕಡೆಯಿಂದ ಬಸ್ತಿ ಕಡೆಗೆ ದುಡುಕಿನಿಂದ ಮತ್ತು ನಿರ್ಲಕ್ಷತನದಿಂದ ಬೈಕ್ ಚಲಾಯಿಸಿಕೊಂಡು ಬಂದು ಹಾಲಿಬಡ್ರು ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು (bike hit), ಮಹಿಳೆಯ ತಲೆಗೆ ಗಂಭೀರ ಗಾಯವಾಗಿದೆ.
Mankal Vaidya/ `ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆ ತಲೆದೋರಿದರೆ ಗ್ರಾಮ ಆಡಳಿತ ಅಧಿಕಾರಿಗಳೇ ನೇರ ಹೊಣೆ’
ಬೈಕ್ ಸವಾರ ಭಟ್ಕಳ ತಾಲೂಕ ಉತ್ತರಕೊಪ್ಪ ಹೆಗಡೆಗದ್ದೆ ನಿವಾಸಿ ರವಿ ಅಲಿಯಾಸ್ ರೋಹಿದಾಸ ತಂದೆ ಮಾಸ್ತಿ ನಾಯ್ಕ ವಿರುದ್ಧ ದೂರು ದಾಖಲಾಗಿದೆ. ಭಟ್ಕಳ ತಾಲೂಕಿನ ಚಿತ್ರಾಪುರದ ಕೇಂಬ್ರೆ ನೆಲ್ಲಿಕೊಡ್ಲು ನಿವಾಸಿ ನಾಗರಾಜ ತಂದೆ ರಾಮಚಂದ್ರ ದೇವಡಿಗ ದೂರು ದಾಖಲಿಸಿದವರು.



