ಭಟ್ಕಳ: ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತೆರ್ನಮಕ್ಕಿಯಲ್ಲಿ ನಡೆದಿದೆ.
ವೋಟ್ ಮಾಡಿ : ಉತ್ತರ ಕನ್ನಡ ಕ್ಷೇತ್ರದ ಸಂಸದರು ಯಾರಾಗಬೇಕು?
ಸುಮಾರು 30 ರಿಂದ 32 ವರ್ಷದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲವಾಗಿದೆ. ರೈಲಿಗೆ ತಲೆ ಕೊಟ್ಡ ಪರಿಣಾಮ ತಲೆಯ ಮೇಲೆ ರೈಲು ಹಾದು ಹೋಗಿದೆ. ಇದರಿಂದ ಈತನ ತಲೆ ಒಡೆದು ಛಿದ್ರವಾಗಿ ಮೆದುಳು ಚೆಲ್ಲಾಪಿಲ್ಲಿಯಾಗಿದೆ. ಅಲ್ಲದೇ ಬಲ ಕೈ ಕಟ್ಟಾಗಿದೆ.
ಮೃತನ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ನಾಗಪ್ಪ ಸುಬ್ರಾಯ ನಾಯ್ಕ ಎಂಬುವವರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಕ್ವಾರಿ ವಿರೋಧಿಸಿ ಮಹಿಳೆಯರಿಂದ ಹೂ ಕಟ್ಟುವ ಮೂಲಕ ಪ್ರತಿಭಟನೆ