ಭಟ್ಕಳ: ಗಣೇಶೋತ್ಸವ (Ganesh festival) ಹತ್ತಿರ ಬರುತ್ತಿದ್ದಂತೆ ರಾಜ್ಯ ಸರ್ಕಾರ (Karnataka Government) ಗಣೇಶೋತ್ಸವ ಆಚರಣೆಗೆ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (plaster of Paris) ಗಣೇಶ ಮೂರ್ತಿ (Ganesha idol) ನಿಷೇಧಿಸಲಾಗಿದೆ. ರಾಸಾಯನಿಕ ಬಣ್ಣ (chemical colour) ಬಳಸುವಂತಿಲ್ಲ. ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ (Bhatkal) ಆಡಳಿತಸೌಧದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ (Ganesh festival) ಹಾಗೂ ಈದ್ ಮಿಲಾದ್ (Eid milad) ಶಾಂತಿಪಾಲನಾ ಸಭೆಯಲ್ಲಿ ಉಪವಿಭಾಗದ ಸಹಾಯಕ ಆಯುಕ್ತೆ ಕುಮಾರಿ ಕಾವ್ಯರಾಣಿ ಕೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Woman falls into well/ ಬಾವಿಗೆ ಬಿದ್ದ ಮಹಿಳೆ
ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಭಟ್ಕಳ ಉಪವಿಭಾಗದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ಮೂರ್ತಿಗಳ ತಯಾರಿ ಹಾಗೂ ಬಳಕೆಗೆ ಸಂಪೂರ್ಣ ನಿಷೇಧ ಜಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ. “ಜೇಡಿಮಣ್ಣು ಮತ್ತು ಸಹಜ ಬಣ್ಣಗಳಿಂದ ಮಾತ್ರ ಮೂರ್ತಿಗಳನ್ನು ತಯಾರಿಸಬೇಕು. ಪಿಓಪಿ ಮೂರ್ತಿಗಳು ನೀರಿನಲ್ಲಿ ಕರಗದೆ ತ್ಯಾಜ್ಯವಾಗಿ ಉಳಿದು ಜಲಮೂಲಗಳನ್ನು ಮಾಲಿನ್ಯಗೊಳಿಸುತ್ತವೆ. ಆದ್ದರಿಂದ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ: Prize distribution/ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ಭಟ್ಕಳ ತಾಲೂಕಿನಲ್ಲಿ 120 ಕಡೆಗಳಲ್ಲಿ ಗಣೇಶೋತ್ಸವ (ganeshotsav) ನಡೆಯಲಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಸಮಿತಿಗಳು ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ. ಪ್ರತಿಷ್ಠಾಪನೆ-ವಿಸರ್ಜನೆ ದಿನಾಂಕಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಸ್ಥಳ ಬದಲಾವಣೆ ಸಾಧ್ಯವಿಲ್ಲ. ಅಗ್ನಿಶಾಮಕ, ಹೆಸ್ಕಾಂ, ಪೊಲೀಸ್ ಇಲಾಖೆಗಳ ಅನುಮತಿ ಕಡ್ಡಾಯ. ಗ್ರಾಮಾಂತರದಲ್ಲಿ ಗ್ರಾಮ ಪಂಚಾಯತಿ ಹಾಗೂ ನಗರ ಪ್ರದೇಶದಲ್ಲಿ ಪುರಸಭೆ ಅಥವಾ ಪಟ್ಟಣ ಪಂಚಾಯತ್ ಮೂಲಕ ಏಕಗವಾಕ್ಷಿ ವ್ಯವಸ್ಥೆ ಜಾರಿಯಲ್ಲಿದೆ ಎಂದರು.
ಇದನ್ನು ಓದಿ: arrested/ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಡಿವೈಎಸ್ಪಿ ಮಹೇಶ್ ಕೆ ಮಾತನಾಡಿ, ಪೆಂಡಾಲ್‌ಗಳನ್ನು ಸಂಚಾರಕ್ಕೆ ಅಡ್ಡಿಯಾಗದಂತೆ ನಿರ್ಮಿಸಬೇಕು. ಪೆಂಡಾಲ್ ಎದುರಿಗೆ ಸಮಿತಿಯ ಅಧ್ಯಕ್ಷರ ಹೆಸರು ಮತ್ತು ಸಹಾಯವಾಣಿ ಸಂಖ್ಯೆಯ ಫಲಕ ಕಡ್ಡಾಯ. ಬೆಂಕಿ ಅವಘಡಕ್ಕೆ ತುರ್ತು ಸಿದ್ಧತೆ ಇರಬೇಕು. ಗುಣಮಟ್ಟದ ವಿದ್ಯುತ್ ಪರಿಕರ ಬಳಕೆ ಅಗತ್ಯ. ಪ್ರಚೋದನಕಾರಿ ಭಾಷಣ ಹಾಗೂ ಗಾಳಿಸುದ್ದಿ ಹರಡುವುದನ್ನು ತಡೆಯಬೇಕು ಎಂದು ಹೇಳಿದರು.
ಇದನ್ನು ಓದಿ: Karate Competition/ ಭಟ್ಕಳ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ
ಆಟೋ ಚಾಲಕ- ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಸಂಘದ ಐದು ದಿನಗಳ ಗಣೇಶೋತ್ಸವ ವಿಸರ್ಜನೆ ದಿನ ಮೆರವಣಿಗೆಗೆ ಅನುಕೂಲವಾಗುವಂತೆ ರಸ್ತೆ ಬದಿ ವಾಹನ ತೆರವುಗೊಳಿಸಿ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು.
ಇದನ್ನು ಓದಿ: Taxi Association/ ಟ್ಯಾಕ್ಸಿ ಸಂಘದ ಪದಾಧಿಕಾರಿಗಳ ಆಯ್ಕೆ
ಸಭೆಯಲ್ಲಿ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಸ್ವಾಗತಿಸಿದರು. ತಾ ಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ, ನಗರ ಠಾಣೆ ಪಿಐ ದಿವಾಕರ, ಗ್ರಾಮೀಣ ಠಾಣೆ ಪಿಐ ಮಂಜುನಾಥ ಲಿಂಗಾರೆಡ್ಡಿ, ಪಿಎಸೈ ತಿಮ್ಮಪ್ಪ ಮೊಗೇರ, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ನಾಯ್ಕ, ಶ್ರೀಧರ ನಾಯ್ಕ, ಕೃಷ್ಣ ನಾಯ್ಕ, ಸಂಜಯ ಗುಡಿಗಾರ ಮತ್ತಿತರರು ಇದ್ದರು.
ಇದನ್ನು ಓದಿ: farewell to life/ ಹೆಂಡತಿ ನಿಧನದ ಬಳಿಕ ನಿರಾಸೆಗೊಂಡವ ಜೀವನಕ್ಕೇ ವಿದಾಯ ಹೇಳಿದ!



