ಭಟ್ಕಳ: ದೂರು ಹಿಂಪಡೆಯಲಿಲ್ಲ ಎಂದು ಸಿಟ್ಟಿಗೆದ್ದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ (Assaulted) ಜೀವ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹಲ್ಲೆಗೊಳಗಾದ ಆಟೋ ಚಾಲಕ ಅಳವೆಕೋಡಿ ಸಣಬಾವಿಯ ಸದಾನಂದ ತಂದೆ ಮಾಸ್ತಿ ಮೊಗೇರ (೫೫) ದೂರು ದಾಖಲಿಸಿದ್ದು, ಆಟೋ ಚಾಲಕ, ಶಿರಾಲಿ ಅಳ್ವೆಕೊಡಿಯ ದೂಮನಮನೆನಿವಾಸಿ ಲಕ್ಷ್ಮಣ ಗಣಪತಿ ಮೊಗೇರ (೩೨) ಆರೋಪಿ. ದಿನಾಂಕ : ೯-೧-೨೦೨೫ರಂದು ೯ ಗಂಟೆಯ ಸುಮಾರಿಗೆ ಭಟ್ಕಳ ತಾಲೂಕಿನ ಅಳ್ವೆಕೊಡಿಯ ಶ್ರೀ ಗಡಿವೀರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಿಂತು ನರಸಿಂಹ ಎಂಬುವರ ಹತ್ತಿರ ದೂರುದಾರ ಮಾತನಾಡುತ್ತಿದ್ದರು. ಆಗ ಆರೋಪಿ ತನ್ನ ಆಟೋ ತಂದು ನಿಲ್ಲಿಸಿ, ಪಿರ‍್ಯಾದಿ ಕಳೆದ ವರ್ಷದ ಹಿಂದೆ ಆರೋಪಿತನ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ವಾಪಸ್ ಪಡೆಯಲಿಲ್ಲ ಅಂತಾ ಅವಾಚ್ಯ ಶಬ್ದದಿಂದ ನಿಂದಿಸಿ, ಕೆನ್ನೆಗೆ ಕೈಯಿಂದ ಹೊಡೆದು ಎಳೆದು ದೂಡಿಹಾಕಿದ್ದಾನೆ. ಈ ಹಿಂದೆ ಅಪಘಾತದಿಂದ ಆಪರೇಶನ್ ಆದ ಬಲಗೈ ಮೊಳೆಗೆ ಮತ್ತೆ ತುಂಬ ನೋವು ಮಾಡಿ, ಶರ್ಟನ್ನು ಹರಿದುಹಾಕಿರುತ್ತಾನೆ. ಪದೇ ಪದೇ ತೊಂದರೆ ಕೊಡುವ ಉದ್ದೇಶದಿಂದ ಪೋನ್ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: Makara Sankranti/ ವೈಜ್ಞಾನಿಕ ವೈಚಾರಿಕ ಹಿನ್ನೆಲೆಯ ಅರ್ಥಪೂರ್ಣ ಹಬ್ಬ ಮಕರ ಸಂಕ್ರಾಂತಿ
ಅರ್ಜಿದಾರರು ನೀಡಿದ ದೂರು ಅಸಂಜ್ಞೆಯ ಸ್ವರೂಪದ ದೂರಾಗಿದ್ದರಿಂದ ಲಕ್ಷ್ಮಣ ತಂದೆ ಗಣಪತಿ ಮೊಗೇರ ಮೇಲೆ ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಳ್ಳಲು ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನು ಓದಿ: cyber complaint/ ಸೈಬರ್ ದೂರು ಕೊಟ್ಟ ನಂತರವೂ ಖಾತೆಯಿಂದ ಹಣ ಮಾಯ



