ಭಟ್ಕಳ: ಮುರಿನಕಟ್ಟೆ (Murinakatte) ಕೆಡವಿದ ಘಟನೆಗೆ ಸಂಬಂಧಿಸಿದಂತೆ ಮೇ ೨೯ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ನೀಡುವ ಕಾರ್ಯಕ್ರಮ (BJP protest) ಹಮ್ಮಿಕೊಂಡ ಬಗ್ಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್ ಎಸ್ ಹೆಗಡೆ ಭಟ್ಕಳದ (Bhatkal) ಮಣ್ಕುಳಿಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಮೆರವಣಿಗೆಯಲ್ಲಿ (BJP protest) ಪಕ್ಷದ ರಾಜ್ಯ ಅಧ್ಯಕ್ಷ ವಿಜಯೇಂದ್ರ (B Y vijayendra) ಯಡಿಯೂರಪ್ಪ, ಆರ್ ಅಶೋಕ (R Ashok), ರೂಪಾಲಿ ನಾಯಕ, ಸಂಸದ ವಿಶ್ವೇಶ್ವರ ಹೆಗಡೆ ಕಾವೇರಿ ಹಾಗೂ ಜಿಲ್ಲೆಯ ಎಲ್ಲಾ ಪ್ರಮುಖರು ಭಾಗವಹಿಸಲಿದ್ದೇವೆ. ಅಂದು ಬೆಳಿಗ್ಗೆ ೧೦ ಗಂಟೆಯ ಸಮಯಕ್ಕೆ ಭಟ್ಕಳದ ಹಳೆಯ ಬಸ್ ನಿಲ್ದಾಣದ ಎದುರು ಇರುವ ಆಟೋರಿಕ್ಷಾ ನಿಲ್ದಾಣದ ಸ್ಥಳದಿಂದ ಹೊರಟು ಮೆರವಣಿಗೆ ಮೂಲಕ ತಾಲೂಕು ಸೌಧ ತಲುಪಿ, ಅಲ್ಲಿ ನಾವು ಮುರಿನಕಟ್ಟೆಯನ್ನು ಪುನರ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಮನವಿ ಕೊಡುತ್ತೇವೆ ಎಂದರು.

Murinakatte incident/ ಭಟ್ಕಳದಲ್ಲಿ ಪೊಲೀಸರ ಪಥ ಸಂಚಲನ

ಈ ಮೆರವಣಿಗೆ ಮೂಲಕ ನಾವು ತಾಲೂಕಿನ ಆಡಳಿತಕ್ಕೆ ಮೂರು ಬೇಡಿಕೆಯನ್ನು ಮುಂದಿಡುತ್ತಿದ್ದೇವೆ. ಕಟ್ಟೆ ಕೆಡವಿದ ಜಾಗದಲ್ಲಿ ಅಮ್ಮನವರ ಹೊರೆ ಇಡುವ ಕಟ್ಟೆ ಪುನರ್ ನಿರ್ಮಾಣ ಮಾಡಿಕೊಡಬೇಕು. ಸಾಮಾಜಿಕ ಸ್ವಾಸ್ಥ್ಯ ಹಾಳಾಗುವಂತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು. ಈ ಘಟನೆ ಕೇವಲ ಮೂರೇ ನಿಮಿಷದಲ್ಲಿ ಆದದ್ದಲ್ಲ. ಇದು ಪೂರ್ವ ನಿಯೋಜಿತ ಅದಕ್ಕಾಗಿ ಈ ಷಡ್ಯಂತ್ರ ಹಿಂದೆ ಇರುವ ಪ್ರಮುಖರನ್ನು ಬಂಧಿಸಬೇಕು. ನಮ್ಮ ಕಾರ್ಯಕರ್ತ ರಾಘವೇಂದ್ರನ ಮೇಲೆ ಹಲ್ಲೆ ಮಾಡಿದವರ ಬಂಧನ ಆಗಬೇಕು ಎಂದು ಆಗ್ರಹಿಸುತ್ತೇವೆ ಎಂದರು.

Murinakatte/ ಮುರಿನಕಟ್ಟೆ ಕೆಡವಿಗೆ ಕಾಂಗ್ರೆಸ್ ಖಂಡನೆ

ರವಿವಾರರಂದು ನಮ್ಮ ಹಿಂದೂ ಬಾಂಧವರು ಮುರಿನಕಟ್ಟೆ ಭಾಗದಲ್ಲಿ ಅಮ್ಮನವರ ಹರಕೆ ಹೊರೆ ಇಡುವ ಸ್ಥಳದಲ್ಲಿ ಕಟ್ಟೆಯನ್ನು ಕಟ್ಟಿ ಬಂದಿದ್ದರು. ಅದೇ ದಿನ ಶಿರಾಲಿಯ ೧೧ ಜನರು ನೀರಿನಲ್ಲಿ ಮುಳುಗಿ ಮೃತಪಟ್ಟ ಕಾರಣ ಆ ವಿಚಾರವಾಗಿ ಹಿಂದೂ ಬಾಂಧವರು ಶೋಕಾಚರಣೆಯಲ್ಲಿ ಇದ್ದರು. ಎಲ್ಲರೂ ಮೃತದೇಹ ಇದ್ದ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಸುಮಾರು ೩೦೦೦ಕ್ಕಿಂತ ಹೆಚ್ಚು ಮುಸ್ಲಿಮರು ಹೊಸದಾಗಿ ಕಟ್ಟೆ ಕಟ್ಟಿದ ಸ್ಥಳಕ್ಕೆ ಬಂದು ಕಟ್ಟೆಯನ್ನು ಕೆಡವಿ ಧ್ವಂಸ ಮಾಡಿದ್ದಾರೆ. ಇದರಿಂದ ಇಡೀ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಉಂಟಾಗಿದೆ. ನಮ್ಮ ಶ್ರದ್ಧಾ ಕೇಂದ್ರ ಧ್ವಂಸ ಮಾಡಲು ಇವರು ಯಾರು? ಇವರಿಗೆ ಇಲ್ಲಿ ಏನು ಹಕ್ಕಿದೆ? ಇದಕ್ಕೆ ನಾವು ಪ್ರತ್ಯುತ್ತರ ಕೊಡುತ್ತೇವೆ ಎಂದು ಹೇಳಿದರು.

Murinakatte/ ಮುರಿನಕಟ್ಟೆ ಮರುನಿರ್ಮಾಣಕ್ಕೆ ೪೮ ಗಂಟೆ ಗಡುವು 

ಕಟ್ಟೆ ಕೆಡವಿದ ಕಿಡಿಗೇಡಿಗಳ ಮೇಲೆ ಪ್ರಕರಣ ದಾಖಲಿಸಿ, ಕೇವಲ ಕೆಲವೇ ಕೆಲವರನ್ನು ಬಂಧನ ಮಾಡಲಾಗಿದೆ ಯಾವುದೇ ಪ್ರಮುಖ ಮುಖಂಡರನ್ನು ಬಂಧನ ಮಾಡಿಲ್ಲ. ಅದೇ ವಿಷಯವಾಗಿ ನ್ಯಾಯ ಕೇಳಲು ಹೋದ ನಮ್ಮ ಕಾರ್ಯಕರ್ತರ ಮೇಲೆ ಹಾಗೂ ಹಿಂದೂ ಮುಖಂಡರ ಮೇಲೆ ಪೋಲಿಸ್ ಇಲಾಖೆ ಪ್ರಕರಣ ದಾಖಲಿಸಿದೆ. ಹಿಂದೂ ಕಾರ್ಯಕರ್ತರು ನ್ಯಾಯ ಹೇಳಲು ಹೋದಾಗ ಪ್ರಕರಣ ದಾಖಲಿಸಿರುವುದು ತಪ್ಪು. ಅದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Murinakatte/ ಮುರಿನಕಟ್ಟೆ  ಕಟ್ಟಿಯೇ ಸಿದ್ದ: ಸುನೀಲ ನಾಯ್ಕ ಘೋಷಣೆ

ಕಾಂಗ್ರೆಸ್ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ. ಈ ಹಿಂದೆ ಪರೇಶ್ ಮೇಸ್ತ ಪ್ರಕರಣದಲ್ಲೂ ಕೂಡ ಹಿಂದುಗಳ ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಿ ಪ್ರಕರಣ ಮುಗಿದರೂ ಕೂಡ ಮತ್ತೆ ಮತ್ತೆ ೧೦೭ ಪ್ರಕರಣ ದಾಖಲಿಸುತ್ತಿದೆ. ಅದೇ ಆಧಾರದ ಮೇಲೆ ಕಾರ್ಯಕರ್ತರ ಮೇಲೆ ರೌಡಿ ಹಾಳೆ ತೆರೆಯುತ್ತಿದೆ. ಕಾಂಗ್ರೆಸ್ (Congress) ಸರ್ಕಾರ ಓಲೈಕೆ ರಾಜಕಾರಣ ಬಿಟ್ಟು ಸಮಾಜದ ಶಾಂತಿ ಕಾಪಾಡಬೇಕು. ಈ ಘಟನೆಯ ಹಿಂದೆ ಸರ್ಕಾರದ ಕುಮ್ಮಕ್ಕು ಇದೆ ಸರ್ಕಾರವೇ ಇವರಿಗೆ ಪ್ರಚೋದನೆ ನೀಡಿದೆ ಎಂದು ಆರೋಪಿಸಿದರು.

Murinakatte/ ಮುರಿನಕಟ್ಟೆ ವಿವಾದ: ನಾಲ್ಕು ಪ್ರಕರಣ ದಾಖಲು